ಕ್ರೀಡೆ

IPL 2024: ಯಶ್‌ ಠಾಕೂರ್‌ಗೆ ಐದು ವಿಕೆಟ್‌: ಜಿಟಿ ವಿರುದ್ಧ ಎಲ್‌ಎಸ್‌ಜಿ ಗೆ 33 ರನ್‌ಗಳ ಜಯ!

ಲಖನೌ: ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ಯಶ್‌ ಠಾಕೂರ್‌ 30ಕ್ಕೆ5, ಕೃನಾಲ್‌ ಪಾಂಡ್ಯ 11ಕ್ಕೆ3 ನಡೆಸಿದ ಮಿಂಚಿನ ಬೌಲಿಂಗ್‌ ದಾಳಿಗೆ ನಲುಗಿದ ಗುಜರಾತ್‌ ಟೈಟನ್ಸ್‌ 33 ರನ್‌ಗಳ ಅಂತರದ ಸೋಲು ಅನುಭವಿಸಿದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್‌ ಟೈಟನ್ಸ್‌ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಪೇರಿಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್‌ 18.5 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ ಕೇವಲ 130 ಕೆಲಹಾಕಿ ಸೋಲೊಪ್ಪಿಕೊಂಡಿತು.

ಲಖನೌ ಇನ್ನಿಂಗ್ಸ್‌: ಇಂದಿನ ಪಂದ್ಯದಲ್ಲಿಯೂ ಸಹಾ ಲಖನೌಗೆ ಉತ್ತರ ಆರಂಭ ಸಿಗಲಿಲ್ಲ. ಡಿ ಕಾಕ್‌ 6ಕ್ಕೆ ಸುಸ್ತಾದರು. ಬಳಿಕ ಬಂದ ಪಡಿಕ್ಕಲ್‌ 7 ರನ್‌ ಬಾರಿಸಿ ಔಟಾದರು. ನಂತರ ಒಂದಾದ ನಾಯಕರ ರಾಹುಲ್ 33, ಹಾಗೂ ಸ್ಟೋಯಿನ್ಸ್ 58 ರನ್‌ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಪೂರನ್ 32, ಬದೋನಿ 20 ರನ್ ಗಳಿಸಿದರು.

ಗುಜರಾತ್‌ ಟೈಟನ್ಸ್ ಪರ ಉಮೇಶ್ ಯಾದವ್, ದರ್ಶನ್ ತಲಾ 2 ವಿಕೆಟ್ ಹಾಗೂ ರಶಿದ್‌ ಖಾನ್‌ ಒಂದು ವಿಕೆಟ್‌ ಪಡೆದರು.

ಗುಜರಾತ್‌ ಇನ್ನಿಂಗ್ಸ್‌: ಉತ್ತಮ ಆರಂಭ ಪಡೆದ ಗುಜರಾತ್‌ಗೆ ಮಧ್ಯಮ ಕ್ರಮಾಂಕ ಕೈ ಕೊಟ್ಟಿತು. ಜಿಟಿ ಪರ ಸಾಯ್‌ ಸುದರ್ಶನ್‌ 31 ರನ್‌ ಗಳಿಸಿದೇ ತಂಡದ ಪರ ಗರಿಷ್ಠ ಮೊತ್ತವಾಗಿತ್ತು. ಇವರಿಗೆ ನಾಯಕ ನಾಯಕ ಗಿಲ್‌ 19ರನ್‌ ಬಾರಿಸಿ ಸಾಥ್‌ ನೀಡಿದರು. ಈ ಇಬ್ಬರೂ ನಿರ್ಗಮಿಸಿದ ಬಳಿಕ ಮಧ್ಯಮ ಕ್ರಮಾಕ ದಿಢೀರ್‌ ಕುಸಿತ ಕಂಡಿತು. ಕೇನ್‌ ವಿಲಿಯಮ್ಸ್‌ 1, ಶರತ್‌ 2, ವಿಜಯ್‌ ಶಂಕರ್‌ 17, ನಲ್ಕಂಡೆ 12, ರಶೀದ್‌ ಖಾನ್‌ ಸೊನ್ನೆ ಸುತ್ತಿದರು. ತೆವಾಟಿಯಾ 30ರನ್‌ ಬಾರಿಸಿ ಕೊನೆಯಲ್ಲಿ ಕೊಂಚ ಹೋರಾಟ ತೋರಿದರೂ ಗೆಲ್ಲಲ್ಲು ಸಾಧ್ಯವಾಗಲಿಲ್ಲ.

ಲಖನೌ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಯಶ್‌ ಠಾಕೂರ್‌ 30ಕ್ಕೆ5, ಕೃನಾಲ್‌ ಪಾಂಡ್ಯ 11ಕ್ಕೆ3, ನವೀನ್‌ ಉಲ್‌-ಹಕ್‌ ಹಾಗೂ ಬಿಷ್ಣೋಯಿ ತಲಾ ಒಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಯಶ್‌ ಠಾಕೂರ್‌

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಸಚಿವ ನಾಗೇಂದ್ರ ವಿರುದ್ಧ ಆರೋಪಕ್ಕೆ ಸಾಕ್ಷ್ಯಗಳಿಲ್ಲ : ಸಿಎಂ ಡಿ.ಕೆ.ಶಿವಕುಮಾರ್‌

ನವದೆಹಲಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯಮಂತ್ರಿ…

6 mins ago

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ ಜಿಐಎಸ್ ಆಧಾರಿತ ಆಪ್ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ…

34 mins ago

ಕೆಆರ್‌ಎಸ್‌ ಜಲಾಶಯಕ್ಕೆ ಮತ್ತಷ್ಟು ಹೆಚ್ಚಾದ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು…

4 hours ago

ಓದುಗರ ಪತ್ರ: ಮ್ಯಾನ್‌ಹೋಲ್ ಸರಿಪಡಿಸಿ

ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್‌ನಿಂದ ಹೊಲಸು ನೀರು…

9 hours ago

ಓದುಗರ ಪತ್ರ: ಎಚ್೧ಎನ್೧ ಮುನ್ನೆಚ್ಚರಿಕೆ ಇರಲಿ

ಕರ್ನಾಟಕದ ೩೨ ಜಿಗಳಲ್ಲಿ ಆಗಸ್ಟ್೨೨ರವರೆಗೆ ಒಟ್ಟು ೫,೦೦೦ ಎಚ್೧ಎನ್೧ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಪ್ರಕರಣಗಳು…

9 hours ago

ಓದುಗರ ಪತ್ರ: ಭಲೆ ದರ್ಶನ್…ಭಲೆ ಭಲೆ…

ಕೆಲವು ದಿನಗಳ ಹಿಂದೆ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸ್ಥಳೀಯ…

9 hours ago