ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಐದನೇ ಪಂದ್ಯ ಇಂದು ( ನವೆಂಬರ್ 23 ) ಅರ್ಬನ್‌ರೈಸರ್ಸ್ ಹೈದರಾಬಾದ್ ಹಾಗೂ ಇಂಡಿಯಾ ಕ್ಯಾಪಿಟಲ್ಸ್ ತಂಡಗಳ ನಡುವೆ ರಾಂಚಿಯ ಜೆಎಸ್‌ಡಿಎ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವದ ಅರ್ಬನ್‌ರೈಸರ್ಸ್ ಹೈದರಾಬಾದ್ ತಂಡ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ತಂಡದ ವಿರುದ್ಧ 3 ರನ್‌ಗಳ ರೋಚಕ ಜಯ ದಾಖಲಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅರ್ಬನ್‌ರೈಸರ್ಸ್ ಹೈದರಾಬಾದ್ ತಂಡ ಗುರುಕೀರತ್ ಸಿಂಗ್, ನಾಯಕ ಸುರೇಶ್ ರೈನಾ ಹಾಗೂ ಪೀಟರ್ ಟ್ರೆಗೊ ಅಬ್ಬರದ ಬ್ಯಾಟಿಂಗ್ ಸಹಾಯದಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ ಇಂಡಿಯಾ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 190 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಇಂಡಿಯಾ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿ 3 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು. ಇದು ಅರ್ಬನ್‌ರೈಸರ್ಸ್ ಹೈದರಾಬಾದ್ ಈ ಟೂರ್ನಿಯಲ್ಲಿ ದಾಖಲಿಸಿದ ಎರಡನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ತಂಡ ಅಗ್ರಸ್ಥಾನದಲ್ಲಿದೆ.
ಅಂತಿಮ ಹಂತದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡದ ಆಶ್ಲೀ ನರ್ಸ್ ಅಬ್ಬರಿಸಿದರೂ ಕೊನೆಯ ಓವರ್‌ನಲ್ಲಿ ಅರ್ಬನ್‌ರೈಸರ್ಸ್ ಗೆಲುವು ದಾಖಲಿಸಿತು. ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 31 ರನ್‌ಗಳ ಅಗತ್ಯವಿದ್ದಾಗ 19ನೇ ಓವರ್‌ನಲ್ಲಿ ಆಶ್ಲೀ ನರ್ಸ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಚಚ್ಚಿ ಗೆಲುವಿನ ಭರವಸೆ ಮೂಡಿಸಿದರು. ಅಂತಿಮ ಓವರ್‌ನಲ್ಲಿ ಗೆಲ್ಲಲು 11 ರನ್‌ಗಳ ಅಗತ್ಯವಿದ್ದಾಗ ಪೀಟರ್ ಟ್ರೆಗೋ ಯಾವುದೇ ಬೌಂಡರಿ ನೀಡದೇ ತಂಡಕ್ಕೆ ಗೆಲುವು ತಂದಿಟ್ಟರು. ತಂಡದ ಪರ ಅಬ್ಬರಿಸಿದ ಗುರುಕೀರತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅರ್ಬನ್‌ರೈಸರ್ಸ್ ಇನ್ನಿಂಗ್ಸ್: ಅರ್ಬನ್ ರೈಸರ್ಸ್ ಪರ ಡ್ವೇಯ್ನ್ ಸ್ಮಿತ್ 3, ಮಾರ್ಟಿನ್ ಗಪ್ಟಿಲ್ 2, ಗುರುಕೀರತ್ ಸಿಂಗ್ 54 ಎಸೆತಗಳಲ್ಲಿ 89, ಸುರೇಶ್ ರೈನಾ 27 ಎಸೆತಗಳಲ್ಲಿ 46, ಸ್ಟುವರ್ಟ್ ಬಿನ್ನಿ 1, ಪೀಟರ್ ಟ್ರೆಗೋ 20 ಎಸೆತಗಳಲ್ಲಿ ಅಜೇಯ 36 ರನ್, ಯೋಗೇಶ್ ನಗರ್ ಅಜೇಯ 6 ರನ್ ಬಾರಿಸಿದರು.
ಇಂಡಿಯಾ ಕ್ಯಾಪಿಟಲ್ಸ್ ಪರ ಇಸೂರು ಉಡಾನಾ ಎರಡು ವಿಕೆಟ್, ಮುನಾಫ್ ಪಟೇಲ್, ಕೆಪಿ ಅಪ್ಪಣ್ಣ, ರಸ್ಟಿ ದೆರಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂಡಿಯಾ ಕ್ಯಾಪಿಟಲ್ಸ್ ಇನ್ನಿಂಗ್ಸ್: ಕ್ಯಾಪಿಟಲ್ಸ್ ಪರ ಗೌತಮ್ ಗಂಭೀರ್ ಡಕ್‌ಔಟ್, ಹಶೀಮ್ ಆಮ್ಲಾ 5, ಕಿರ್ಕ್ ಎಡ್‌ವಾರ್ಡ್ 11, ಬೆನ್ ಡಂಕ್ 5, ರಿಕಾರ್ಡೊ ಪೊವೆಲ್ 26, ಕೆವಿನ್ ಪೀಟರ್ಸನ್ 48 ಎಸೆತಗಳಲ್ಲಿ 77, ಆಶ್ಲೀ ನರ್ಸ್ 25 ಎಸೆತಗಳಲ್ಲಿ ಅಜೇಯ 41 ಹಾಗೂ ರಸ್ಟಿ ದೆರಾನ್ ಅಜೇಯ 2 ರನ್ ಬಾರಿಸಿದರು.
ಅರ್ಬನ್‌ರೈಸರ್ಸ್ ಹೈದರಾಬಾದ್ ಪರ ಕ್ರಿಸ್ ಎಮ್‌ಪೊಫು ಎರಡು ವಿಕೆಟ್, ಪೀಟರ್ ಟ್ರೆಗೊ, ಟಿನೊ ಬೆಸ್ಟ್ ಹಾಗೂ ಪವನ್ ಸುಯಲ್ ತಲಾ ಒಂದೊಂದು ವಿಕೆಟ್ ಪಡೆದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…