BANGKOK, THAILAND - MAY 13: Satwiksairaj Rankireddy (L) and Chirag Shetty of India celebrate the victory in the Thomas Cup Semi Final Men's Double match against Kim Astruo and Mathias Christiansen of Denmark during day six of the BWF Thomas and Uber Cup Finals at Impact Arena on May 13, 2022 in Bangkok, Thailand. (Photo by Shi Tang/Getty Images)
ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಶನಿವಾರ ಯೆಯೊಸುನಲ್ಲಿ ನಡೆದ ವಿಶ್ವದ ಎರಡನೇ ಶ್ರೇಯಾಂಕದ ಚೀನಾ ಜೋಡಿ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ರೋಚಕ ಗೆಲುವಿನೊಂದಿಗೆ ಭಾರತೀಯ ಜೋಡಿ ಫೈನಲ್‌ಗೆ ಪ್ರವೇಶಿಸಿದರು.
ಜಿನ್ನಮ್ ಕ್ರೀಡಾಂಗಣದಲ್ಲಿ ನಡೆದ 40 ನಿಮಿಷಗಳ ಹಣಾಹಣಿಯಲ್ಲಿ ಭಾರತದ ಜೋಡಿಯು ಎರಡನೇ ಶ್ರೇಯಾಂಕದ ಚೀನಾ ವಿರುದ್ಧ 21-15, 24-22 ಅಂತರದಲ್ಲಿ ಜಯ ಸಾಧಿಸಿದರು. ಇದು ಚೀನಾ ಜೋಡಿಯ ವಿರುದ್ಧ ಸಾತ್ವಿಕ್ ಮತ್ತು ಚಿರಾಗ್ ಅವರ ಮೊದಲ ಗೆಲುವು ಎಂಬುದು ವಿಶೇಷ.
ಮೊದಲ ಸೆಟ್ನಲ್ಲಿ 21 ಪಾಯಿಂಟ್ಸ್ ಕಲೆಹಾಕಿದ ಸಾತ್ವಿಕ್ ಹಾಗೂ ಚಿರಾಗ್ ಮುನ್ನಡೆ ಕಾಯ್ದುಕೊಂಡಿದ್ದರು. ಅತ್ತ ಲಿಯಾಂಗ್ ಜೋಡಿ 15 ರಲ್ಲೇ ಉಳಿದರು. ಇದರೊಂದಿಗೆ 6 ಅಂಕಗಳ ಅಂತರದೊಂದಿಗೆ ಭಾರತೀಯ ಜೋಡಿ ಮೊದಲ ಸೆಟ್ನಲ್ಲಿ ಜಯ ಸಾಧಿಸಿದರು.
ಆದರೆ ಎರಡನೇ ಸೆಟ್ನಲ್ಲಿ ಚೀನಾ ಜೋಡಿಯಿಂದ ಪ್ರಬಲ ಪೈಪೋಟಿ ಎದುರಾಯಿತು. ಪರಿಣಾಮ ಒಂದು ಹಂತದಲ್ಲಿ ಪಾಯಿಂಟ್ಸ್ 19-19 ರಲ್ಲಿ ಸಮಗೊಂಡಿತು. ಈ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದ ಸಾತ್ವಿಕ್-ಚಿರಾಗ್ ಸ್ಮ್ಯಾಶ್ಗಳ ಮೂಲಕ ಪಾಯಿಂಟ್ಸ್ ಕಲೆಹಾಕಿದರು. ಪರಿಣಾಮ 2ನೇ ಸೆಟ್ನಲ್ಲಿ 24-22 ಅಂತರದಿಂದ ರೋಚಕ ಗೆಲುವು ದಕ್ಕಿಸಿಕೊಂಡರು.
ಈ ಗೆಲುವಿನೊಂದಿಗೆ ಸಾತ್ವಿಕ್ ಹಾಗು ಚಿರಾಗ್ ಶೆಟ್ಟಿ ಕೊರಿಯ ಓಪನ್ ಸೂಪರ್ 500 ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಮತ್ತೊಂದು ಪ್ರಶಸ್ತಿ ಗೆಲ್ಲುವ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ, ಅವರು ಸ್ವಿಸ್ ಓಪನ್‌ನಲ್ಲಿ ಸಾತ್ವಿಕ್-ಚಿರಾಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅಲ್ಲದೆ ದುಬೈನಲ್ಲಿ ನಡೆದ 2023 ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಕೂಡ ಗೆದ್ದಿದ್ದರು.
ಇದಾದ ಬಳಿಕ 2023 ರ ಇಂಡೋನೇಷ್ಯಾ ಓಪನ್‌ನ ಫೈನಲ್‌ನಲ್ಲಿ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಸೋಲಿಸಿ ಮೊದಲ BWF ವರ್ಲ್ಡ್ ಸೂಪರ್ 1000 ಪ್ರಶಸ್ತಿ ಗೆದ್ದ ಭಾರತೀಯ ಜೋಡಿ ಎಂಬ ದಾಖಲೆ ನಿರ್ಮಿಸಿದ್ದರು. ಇದೀಗ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿರುವ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮತ್ತೊಂದು ಕಿರೀಟ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…