ಮಡಿಕೇರಿ: ೨೪ ವರ್ಷಗಳಿಂದ ಕೊಡವರು ವಾತ್ರವಲ್ಲದೆ ಕೊಡಗಿನ ಜನತೆ, ಹಾಕಿ ಪ್ರೇಮಿಗಳು, ಕ್ರೀಡಾಭಿವಾನಿಗಳು ನಿರೀಕ್ಷೆ ವಾಡಿದ್ದ ಕನಸು ಈಗ ನನಸಾಗಿದೆ. ಹೌದು, ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸುಮಾರು ಒಂದು ತಿಂಗಳಿನಿಂದ ನಡೆದ ಹಾಕಿ ಪಂದ್ಯಾವಳಿಯ ಅಂತಿಮ ದಿನ ಗಿನ್ನೀಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ಮಾನ್ಯತೆ ದೊರೆತಿದೆ.
೨೪ ವರ್ಷಗಳ ಹಿಂದೆ ಕರಡ ಗ್ರಾಮದ ಪಾಂಡಂಡ ಕುಟ್ಟಪ್ಪ ಮತ್ತು ಕಾಶಿ ಸಹೋದರರು ಕೊಡವರ ಹಾಕಿ ಪಂದ್ಯಾವಳಿಯ ಕನಸು ಕಂಡು ಅದನ್ನು ಸಾಕಾರಗೊಳಿಸಿದ ನಂತರ ಕೊಡವ ಕೌಟುಂಬಿಕ ಹಾಕಿಗೆ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಮಾನ್ಯತೆ ದೊರಕಿತ್ತು. ಬಳಿಕ ಕುಟುಂಬ ತಂಡಗಳು ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ಮುಂದುವರಿಸಿಕೊಂಡು ಬಂದಿದ್ದರು.
ಪ್ರತಿ ವರ್ಷ ಕೊಡವ ಕುಟುಂಬದವರು ವಾತ್ರವಲ್ಲದೆ, ಇತರ ಕ್ರೀಡಾಭಿವಾನಿಗಳು ಕೂಡ ಹಾಕಿ ಪಂದ್ಯಾವಳಿ ವೀಕ್ಷಿಸುತ್ತಿದ್ದರು. ಹಬ್ಬದಂತೆ ಒಂದು ಕ್ರೀಡೆಯನ್ನು ಆಡಬಹುದು ಎಂಬುದಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಸಾಕ್ಷಿಯಾಗಿತ್ತು. ಇದೀಗ ಗಿನ್ನೀಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್‌ನವರು ಕೂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ವಿಶ್ವದಲ್ಲಿ ಒಂದೇ ಮೈದಾನದಲ್ಲಿ ಒಂದೇ ಸಮುದಾಯದವರು ಅತಿ ಹೆಚ್ಚು ತಂಡಗಳ ಮೂಲಕ ಅತಿ ಹೆಚ್ಚು ದಿನಗಳು ಆಡುವ ಕ್ರೀಡೆ ಎಂಬ ದಾಖಲೆಯ ಮಾನ್ಯತೆ ನೀಡಿದ್ದಾರೆ.
ಕೊಡವ ಜನಾಂಗದಲ್ಲಿ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟವನ್ನು ೨೪ ವರ್ಷಗಳಿಂದ ಆಯೋಜಿಸುತ್ತಾ ಬರಲಾಗಿದ್ದು, ಈ ವರ್ಷ ೨ ಕೋಟಿ ರೂ. ವೆಚ್ಚದಲ್ಲಿ ಕುಂಡ್ಯೋಳಂಡ ಕುಟುಂಬಸ್ಥರು ಪಂದ್ಯಾವಳಿ ಆಯೋಜಿಸಿದ್ದರು. ಅಲ್ಲದೆ, ಪಂದ್ಯಾಟದಲ್ಲಿ ದಾಖಲೆಯ 360 ಕುಟುಂಬ ತಂಡಗಳ 3 ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದರು. ಪಂದ್ಯಾವಳಿ ವೀಕ್ಷಿಸಿದ ಗಿನ್ನೀಸ್ ರೆಕಾಡ್ಸ್ ಸಂಸ್ಥೆಯು ಸದಸ್ಯ ಸೆಪ್ನಿಲ್ ಅವರು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಗಿನ್ನೀಸ್ ರೆಕಾರ್ಡ್ ವಾನ್ಯತೆ ನೀಡಿದ್ದು ವಿಶೇಷವಾಗಿತ್ತು.
ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್‌ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.…
ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶಿವರಾಜ್ ಸಿಂಗ್…
ಬೆಂಗಳೂರು: ರಾಜ್ಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಸಚಿವರಿಗೆ ವಿವಿಧ ಜಿಲ್ಲೆಗಳ ಮೇಲುಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಸೂಚನೆ…
ವೆನಿಜುವೆಲಾ: ವೆನಿಜುವೆಲಾ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಭೂಕಂಪ ಸಂಭವಿಸಿ ಸಾವಿರಾರು ಜನ ಸಾವನ್ನಪ್ಪಿದ್ದು, ಭಾರೀ ಪ್ರಮಾಣದ ಜನರು…
ಕ್ಯಾರಕಾಸ್ : ವೆನೆಜುವೆಲಾ ಕರಾವಳಿಯ ಸಮೀಪ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶವನ್ನು ಬೆಚ್ಚಿಬೀಳಿಸಿವೆ. ರಿಕ್ಟರ್ ಮಾಪಕದಲ್ಲಿ…
ಪ್ರೊ.ಬಿ.ಜಯಪ್ರಕಾಶ್‌ಗೌಡ ಬದುಕಿದ್ದರೆ ೧೦೯ ವರ್ಷಗಳನ್ನು ಪೂರೈಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಪಿ. ಎನ್. ಜವರಪ್ಪಗೌಡರು ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದವರು. ಜವರಪ್ಪಗೌಡರು ಗಾಂಧೀಜಿಯಿಂದ ಪ್ರಭಾವಿತರಾಗಿದ್ದರು.…