Mohit Sharma of Gujarat Titans appeal during match 18 of the Tata Indian Premier League between the Punjab Kings and the Gujarat Titans held at the Punjab Cricket Association IS Bindra Stadium , Mohali on the 13th April 2023 Photo by: Arjun Singh / SPORTZPICS for IPL
ಲಖನೌ: ಗುಜರಾತ್ ಟೈಟನ್ಸ್ ಎದುರು ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೇವಲ 7 ರನ್‌ಗಳಿಂದ ಸೋಲು ಅನುಭವಿಸಿತು. ಕೇವಲ 136 ರನ್ ಗುರಿ ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್, ಕೆ.ಎಲ್ ರಾಹುಲ್ ಅರ್ಧಶತಕದ ಹೊರತಾಗಿಯೂ ಸೋಲಿನ ಆಘಾತ ಅನುಭವಿಸಿತು.
ಇಲ್ಲಿನ ಏಕನಾ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 136 ರನ್ ಗುರಿ ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್ ತಂಡ ಸುಲಭವಾಗಿ ಗೆಲುವು ದಾಖಲಿಸಲಿದೆ ಎಂದು ಭಾವಿಸಲಾಗಿತ್ತು. ಅದರಂತೆ 6.3 ಓವರ್‌ಗಳಿಗೆ ಕೆ.ಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ ಜೋಡಿ 55 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿತ್ತು.
ಕೈಲ್ ಮೇಯರ್ಸ್ (24) ಹಾಗೂ ಕೃಣಾಲ್ ಪಾಂಡ್ಯ (23) ಸಿಕ್ಕ ಉತ್ತಮ ಆರಂಭದಲ್ಲಿ ಪಂದ್ಯ ಮುಗಿಸುವಲ್ಲಿ ಎಡವಿದರು. ಇದರ ಹೊರತಾಗಿಯೂ ಕೆಎಲ್ ರಾಹುಲ್ 61 ಎಸೆತಗಳಲ್ಲಿ 68 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, ಡೆತ್ ಓವರ್‌ಗಳಲ್ಲಿ ಮೊಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮಾ ಶಿಸ್ತುಬದ್ದ ದಾಳಿಯ ಎದುರು ಪಂಜಾಬ್ ತೀವ್ರ ಹಿನ್ನಡೆ ಅನುಭವಿಸಿತು.
ಕೊನೆಯ 3 ಓವರ್‌ಗಳಲ್ಲಿ 23 ರನ್ ಅಗತ್ಯವಿದ್ದಾಗ 18ನೇ ಓವರ್‌ನಲ್ಲಿ ಮೋಹಿತ್ ಶರ್ಮಾ ಕೇವಲ 6 ರನ್ ಕೊಟ್ಟರೆ, 19ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಕೇವಲ 5 ರನ್‌ಗೆ ಕೆ.ಎಲ್ ರಾಹುಲ್ ಪಡೆಯನ್ನು ನಿಯಂತ್ರಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ 12 ರನ್ ಅಗತ್ಯವಿದ್ದಾಗ ಮೊಹಿತ್ ಶರ್ಮಾ, ಕೆ.ಎಲ್ ರಾಹುಲ್, ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಔಟ್ ಮಾಡಿದರು. ಇದರ ಜೊತೆಗೆ ಆಯುಷ್ ಬದೋನಿ ಮತ್ತು ದೀಪಕ್ ಹೂಡ ರನ್‌ಔಟ್ ಆದರು. ಅಂತಿಮವಾಗಿ ಗುಜರಾತ್ ಟೈಟನ್ಸ್ 7 ರನ್ ರೋಚಕ ಗೆಲುವು ತನ್ನದಾಗಿಸಿಕೊಂಡಿತು. ಅದಹಾಗೆ ಲೋ ಸ್ಕೋರಿಂಗ್ ಪಂದ್ಯದ ಕೊನೆಯ 5 ಓವರ್‌ಗಳಿಗೆ ಕೇವಲ 19 ರನ್ ನೀಡಿದ ಗುಜರಾತ್ ಟೈಟನ್ಸ್ ಬೌಲರ್‌ಗಳಿಗೆ ಈ ಗೆಲುವಿನ ಶ್ರೇಯ ಸಲ್ಲಬೇಕು.
ಗುಜರಾತ್ ಟೈಟನ್ಸ್ ಪರ ನೂರ್ ಅಹ್ಮದ್ ಹಾಗೂ ಮೋಹಿತ್ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಕೇವಲ 3 ಓವರ್‌ಗಳಿಗೆ 17 ರನ್ ನೀಡಿ ಎರಡು ವಿಕೆಟ್ ಕಿತ್ತ ಮೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗುಜರಾತ್ ಟೈಟನ್ಸ್: 20 ಓವರ್‌ಗಳಿಗೆ 135-6 (ಹಾರ್ದಿಕ್ ಪಾಂಡ್ಯ 66, ವೃದ್ದಿಮಾನ್ ಸಹಾ 47; ಕೃಣಾಲ್ ಪಾಂಡ್ಯ 16ಕ್ಕೆ 2, ಮಾರ್ಕಸ್ ಸ್ಟೋಯ್ನಿಸ್ 20ಕ್ಕೆ 2)
ಲಖನೌ ಸೂಪರ್ ಜಯಂಟ್ಸ್: 20 ಓವರ್‌ಗಳಿಗೆ 128-7 (ಕೆ.ಎಲ್ ರಾಹುಲ್ 68, ಕೈಲ್ ಮೇಯರ್ಸ್ 24, ಕೃಣಾಲ್ ಪಾಂಡ್ಯ 23; ಮೋಹಿತ್ ಶರ್ಮಾ 17ಕ್ಕೆ 2, ನೂರ್ ಅಹ್ಮದ್ 18ಕ್ಕೆ 2)
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…
ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…
ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…
ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…
೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ,…