ಕ್ರೀಡೆ

ಒಲಿಂಪಿಕ್ಸ್‌ ನಲ್ಲಿ ಪಯಣ ಅಂತ್ಯಗೊಳಿಸಿದ ಜೂಡೋ-ರೋಯಿಂಗ್

ಪ್ಯಾರಿಸ್‌: ಪುರುಷರ ಸಿಂಗಲ್ಸ್‌ ಸ್ಕಲ್‌ ಆಥ್ಲೀಟ್‌ ಬಾಲರಾಜ್‌ ಪನ್ವಾರ್‌ ಹಾಗೂ ಜೂಡೋಕಾ ತುಲಿಕಾ ಅವರು ತಮ್ಮ ಒಲಿಂಪಿಕ್ಸ್‌ ಪಯಣವನ್ನು ಕೊನೆಗೊಳಿಸಿದ್ದಾರೆ ಇದರೊಂದಿಗೆ ಸ್ಕಲ್‌ ನಲ್ಲಿ ಪದಕ ಗೆಲ್ಲು ಭಾರತದ ಆಸೆ ನಿರಾಸೆಯಾಗಿದೆ

ಎಡವಿದ ರೋಯಿಂಗ್: ಸಿಂಗಲ್ಸ್ ಸ್ಕಲ್ ಆಥ್ಲೀಟ್ ಸ್ಪರ್ಧೆಯಲ ಕೊನೆಯ ಡಿ ನಲ್ಲಿ 7:02.37 ಸಮಯದೊಂದಿಗೆ ಬಾಲರಾಜ್ 5 ನೇ ಸ್ಥಾನ ಪಡೆದು ಪ್ಯಾರಿಸ್ ಗೇಮ್‌ ನಿಂದ ಹೊರಬಿದ್ದಿದ್ದಾರೆ. ತಮ್ಮ ಮೊದಲ ಒಲಿಂಪಿಕ್ಸ್ನಲ್ಲಿ ಬಾಲರಾಜ್ ಒಟ್ಟಾರೆ 23ನೇ ಸ್ಥಾನ ಪಡೆದಿದ್ದು ಭಾರತದ ಪರವಾಗಿ ಒಲಿಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಬಾಲರಾಜ್ ಎಡವಿದ್ದಾರೆ

ತುಲಿಕಾ ಮಾನ್ ತಪಸ್ಸು ವಿಫಲ: ಜೂಡೋಕಾ ತುಲಿಕಾ ಮಾನ್ ಕ್ಯೂಬಾದ ಇಡಾಲಿಸ್ ಒರ್ಟಿಜ್ ವಿರುದ್ಧ 28 ಸಕೆಂಡ್ ಗಳ ನಂತರ 10-0 ಅಂತರದಲ್ಲಿ ಮಹಿಳೆಯರ 78+ ಕೆಜಿ ತೂಕ ವಿಭಾಗದ 32 ನೇ ಸುತ್ತಿನಲ್ಲಿ ಸೋಲುಕಂಡಿದ್ದಾರೆ. ಈ ಮೂಲಕ ಇವರು ಕೂಡ 2024 ಪ್ಯಾರಿಸ್‌ ಒಲಿಂಪಿಕ್‌ ನಿಂದ ಹೊರಬಿದ್ದಿದ್ದಾರೆ

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಕಾವೇರಿ ಕೊಳ್ಳದ ರೈತರಿಗೆ 4 ಕಟ್ಟು ನೀರು ; ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಬೆಂಗಳೂರು : ಮುಂಗಾರು ಮಳೆ ಕೊರತೆ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಾರದ ಹಿನ್ನೆಲೆಯಲ್ಲಿ,…

9 hours ago

ಮೈಸೂರು | ಭಾರತ್ ಜೋಡೋ ನೋಂದಣಿಗೆ ಚಾಲನೆ

ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರು ಯುವ ಶಕ್ತಿ ರಾಷ್ಟ್ರ ಶಕ್ತಿ ಎಂಬ ಶೀರ್ಷಿಕೆಯಡಿ ಭಾರತ್…

10 hours ago

ಎಂಡಿಎ ಬದಲಿ ನಿವೇಶನ ಹಂಚಿಕೆ ರದ್ದುಪಡಿಸಿ ಸರ್ಕಾರ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ…

10 hours ago

ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ : ಸಿ.ಎಂ ಡಿ.ಕೆ.ಶಿವಕುಮಾರ್*

ಬೆಂಗಳೂರು : ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ…

13 hours ago

ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ : ಸಚಿವ ಖಂಡ್ರೆ

ಬೆಂಗಳೂರು : ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ…

15 hours ago

ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿ…

16 hours ago