ಕ್ರೀಡೆ

IPL2025: ಚೆನ್ನೈ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆರ್‌ಸಿಬಿ

ಚೆನ್ನೈ: ಐಪಿಎಲ್‌ನ 18ನೇ ಆವೃತ್ತಿಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 50 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ಚೆಪಾಕ್‌ ಮೈದಾನದಲ್ಲಿ 17 ವರ್ಷಗಳ ನಂತರ ಮೊದಲ ಗೆಲುವು ದಾಖಲಿಸಿದೆ.

ಚೆನ್ನೈನ ಚೆಪಾಕ್‌ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಸಿಎಸ್‌ಕೆ ತಂಡ ಎದುರಾಳಿ ಆರ್‌ಸಿಬಿಯನ್ನು ಬ್ಯಾಟಿಂಗ್‌ ಆಹ್ವಾನಿಸಿದರು.

ಅದರಂತೆ ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ತಂಡದ ನಾಯಕ ರಜತ್‌ ಪಾಟೀದಾರ್‌ 51(32) ಅವರ ಅರ್ಧಶತಕದ ನೆರವಿನ ಜೊತೆಗೆ ಫಿಲ್‌ ಸಾಲ್ಟ್‌ 32(16), ವಿರಾಟ್‌ ಕೊಹ್ಲಿ 31(30), ದೇವದತ್‌ ಪಡಿಕ್ಕಲ್‌ 27(14), ಕೊನೆಯಲ್ಲಿ ಟಿಮ್‌ ಡೆವಿಡ್‌ 22(8) ಅವರ ಆಟದ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 196 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಚೆನ್ನೈ ಪರ ನೂರ್‌ ಅಹ್ಮದ್‌ 3 ವಿಕೆಟ್‌ ಪಡೆದರೆ ಮಥೀಶಾ ಪತಿರಾನ 2 ವಿಕೆಟ್‌, ಅಶ್ವಿನ್‌ ಹಾಗೂ ಖಲೀಲ್‌ ಅಹ್ಮದ್‌ ತಲಾ ಒಂದು ವಿಕೆಟ್‌ ಪಡೆದರು.

ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 146 ರನ್‌ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಆರಂಭಿಕ ಬ್ಯಾಟರ್‌ ರಚಿನ್‌ ರವೀಂದ್ರ 41(31) ರನ್‌ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, ಯಶ್‌ ದಯಾಳ್‌ ಅವರ ಬೌಲಿಂಗ್‌ನಲ್ಲಿ ಓಟಾಗುವ ಮೂಲಕ ಚೆನ್ನೈನ ಗೆಲುವಿನ ಆಸೆ ಕಮರಿತು. ಕೊನೆಯಲ್ಲಿ ಮಹೇಂದ್ರ ಸಿಂಗ್‌ ಧೋನಿ 16 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾಗದೇ ಉಳಿದರು.

ಆರ್‌ಸಿಬಿ ತಂಡದ ಪರ ಜೋಶ್‌ ಹ್ಯಾಜಲ್‌ವುಡ್‌ 3 ವಿಕೆಟ್‌ ಪಡೆದರೆ, ಯಶ್‌ ದಯಾಳ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ತಲಾ ಎರಡು ವಿಕೆಟ್‌ ಗಳಿಸಿದರು.

 

AddThis Website Tools
ಆಂದೋಲನ ಡೆಸ್ಕ್

Recent Posts

IPL 2025 | ಲಖನೌ ವಿರುದ್ಧ 12 ರನ್‌ಗಳ ಸೋಲೊಪ್ಪಿಕೊಂಡ ಮುಂಬೈ

ಲಖನೌ : ಮಿಚೆಲ್‌ ಮಾರ್ಷ್‌ ಅವರ ಅರ್ಧಶತಕದಾಟ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ನ ಬಿಗಿಬೌಲಿಂಗ್‌ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್‌…

2 hours ago

ಮೈಸೂರು | ಬಿಸಿಲ ನೆಲಕ್ಕೆ ತಂಪೆರೆದ ಮಳೆ

ಮೈಸೂರು : ನಗರ ಸೇರಿದಂತೆ ಜಿಲ್ಲೆಯ ವಿವಿಧೆ ಭಾಗಗಳಲ್ಲಿ ಶುಕ್ರವಾರ ರಾತ್ರಿ ಮಳೆಯಾಗಿದೆ. ಬಿಸಿಲ ಧಗೆಯಿಂದ ಬೆಂದಿದ್ದ ನೆಲ ಹಸಿರು…

3 hours ago

ಪತ್ರಿಕೋದ್ಯಮ : ವಿದ್ಯಾರ್ಹತೆ ಜೊತೆ ಕೌಶಲ ಮುಖ್ಯ

ಮೈಸೂರು: ಪತ್ರಿಕೋದ್ಯಮದ ದಾರಿ ಹಿಡಿಯುವ ವಿದ್ಯಾರ್ಥಿಗಳು ಅಧ್ಯಯನದ ಜೊತೆ ಜಾಗತಿಕ ವಿದ್ಯಮಾನಗಳ ಅರಿವು, ಕೌಶಲ್ಯಗಳನ್ನು ಅರಿಯಬೇಕಿದೆ  ಎಂದು ಪ್ರಜಾವಾಣಿಯ ಮೈಸೂರು…

3 hours ago

ಹೊಸ ತಲೆಮಾರಿನ ಕಲಾವಿದರ ಪ್ರೋತ್ಸಾಹ ಅಗತ್ಯ : ಪ್ರೊ.ಜಯಪ್ರಕಾಶ್‌ಗೌಡ

ಮೈಸೂರು: ಹೊಸ ತಲೆಮಾರಿನ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಕಲೆಯನ್ನು ಉಳಿಸಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಜಯಪ್ರಕಾಶ್‌ಗೌಡ…

3 hours ago

ಮೈಸೂರು ರೈಲ್ವೆ ಯೋಜನೆಗೆ ವೇಗ

ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿ ಮಾಡಿದ ಸಂಸದ ಯದುವೀರ್ ಹೊಸದಿಲ್ಲಿ: ಮೈಸೂರಿನ ರೈಲ್ವೆ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು…

4 hours ago

ಬೆಲೆ ಏರಿಕೆ ಹಿಂಪಡೆಯಲು ಆಗ್ರಹ

ಮಂಡ್ಯ: ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತದಿಂದ ಕೂಡಿದ ರಾಜ್ಯ ಸರ್ಕಾರ ಬೆಲೆಗಳ ಏರಿಕೆ ಮಾಡಿಕೊಂಡು ತಮ್ಮ ಗ್ಯಾರೆಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ…

4 hours ago