ಕ್ರೀಡೆ

IPL 2025: ಮೊದಲ ಪಂದ್ಯ ಕೆಕೆಆರ್‌ v/s ಆರ್‌ಸಿಬಿ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌(ಕೆಕೆರ್‌) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ.

ಮಾರ್ಚ್‌ 22ರಂದು ಈ ಟೂರ್ನಿ ಆರಂಭವಾಗಲಿದ್ದು, ಫೈನಲ್‌ ಹಣಾಹಣಿಯು ಮೇ25ರಂದು ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹೋದ ಆವೃತ್ತಿಯಲ್ಲಿ ಕೆಕೆಆರ್‌ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದಾರೆ. ಈ ಬಾರಿ ಕೆಕೆಆರ್‌ ತಂಡವನ್ನು ಮುನ್ನಡೆಸುವವರು ಯಾರು ಎಂಬ ಕುತೂಹಲ ಮೂಡಿದೆ.

ಆರ್‌ಸಿಬಿ, ನೆನ್ನೆಯಷ್ಟೇ ತಂಡದ ನಾಯಕನಾಗಿ ರಜತ್‌ ಪಾಟೀದಾರ್‌ ಅವರನ್ನು ನೇಮಿಸಿದ್ದು, ತಂಡವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ತಂಡಗಳು ಹಿಂತಿವೆ

ಆರ್‌ಸಿಬಿ: ರಜತ್‌ ಪಾಟೀದಾರ್‌ (ನಾಯಕ), ವಿರಾಟ್‌ ಕೊಹ್ಲಿ, ಯಶ್‌ ದಯಾಳ್‌, ಜೋಶ್‌ ಹ್ಯಾಜಲ್‌ವುಡ್‌, ಫಿಲ್‌ ಸಾಲ್ಟ್‌, ಜಿತೇಶ್‌ ಶರ್ಮಾ, ಲಿಯಾಮ್‌ ಲಿವಿಂಗ್‌ಸ್ಟೋನ್‌, ರಸಿಕ್‌ ಧರ್, ಸುಯಾಷ್‌ ಶರ್ಮಾ, ಭವನೇಶ್ವರ್‌ ಕುಮಾರ್‌, ಕೃಣಾಲ್‌ ಪಾಂಡ್ಯ, ಟಿಮ್‌ ಡೆವಿಡ್‌, ಜೇಕಬ್‌ ಬೆಥಲ್‌, ದೇವದತ್ತ ಪಡಿಕಲ್‌, ನುವಾನ್‌ ತುಷಾರ್‌, ರೊಮಾರಿಯೊ ಶೆಫರ್ಡ್‌, ಲುಂಗಿ ಎನ್‌ಗಿಡಿ, ಸ್ವಪ್ನಿಲ್‌ ಸಿಂಗ್‌, ಮನೋಜ್‌ ಭಾಂಡಗೆ, ಸ್ವಿಸ್ತಿಕ್‌ ಛಿಕಾರ, ಮೋಹಿತ್‌ ರಾಥೆ, ಅಭಿನಂದನ್‌ ಸಿಂಗ್‌.

ಕೆಕೆಆರ್‌: ವೆಂಕಟೇಶ್‌ ಐಯ್ಯರ್‌, ಮೋಯಿನ್‌ ಅಲಿ, ಸುನೀಲ್‌ ನರೇನ್‌, ಆಂಡ್ರೆ ರಸೆಲ್‌, ಕ್ವಿಂಟಾನ್‌ ಡಿ ಕಾಕ್‌, ರಹಮನುಲ್ಲಾ ಗುರ್ಬಾಜ್‌, ಮನೀಷ್‌ ಪಾಂಡೆ, ಮಯಾಂಕ್‌ ಮಾರ್ಕಂಡೆ, ವೈಭವ್‌ ಆರೋರಾ, ಎನ್ರಿಚ್‌ ನೋಕಿಯೆ, ಉಮ್ರಾನ್‌ ಮಲಿಕ್‌, ಅಜಿಂಕ್ಯ ರಹಾನೆ, ರಿಂಕು ಸಿಂಗ್‌, ಲುವನೀತ್‌ ಸಿಸೋಡಿಯಾ, ವರುಣ್‌ ಚಕ್ರವರ್ತಿ, ಹರರ್ಷಿತ್‌ ರಾಣಾ, ಸ್ಪೆನ್ಸರ್‌ ಜಾನ್ಸನ್‌, ಅಂಗ್‌ಕ್ರಿಷ್‌ ರಘವಂಶಿ, ರೋವ್ಮನ್‌ ಪೊವೆಲ್‌, ಅನುಕೂಲ್‌ ರಾಯ್‌, ರಮಣ್‌ದೀಪ್‌ ಸಿಂಗ್‌.

ಆಂದೋಲನ ಡೆಸ್ಕ್

Recent Posts

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

2 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

3 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

4 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

4 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

10 hours ago

ಓದುಗರ ಪತ್ರ: ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ತಾತ್ಸಾರವೇಕೆ?

ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…

10 hours ago