ಕ್ರೀಡೆ

ಐಪಿಎಲ್‌ 2025: ಮಾರ್ಚ್‌.23ರಿಂದ ಐಪಿಎಲ್‌ ಹಬ್ಬ

ಮುಂಬೈ: ಬಹುನಿರೀಕ್ಷಿತ ದೇಶಿಯ ಕ್ರಿಕೆಟ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)ನ 18ನೇ ಆವೃತ್ತಿಯು ಮಾರ್ಚ್‌.23ರಿಂದ ಆರಂಭವಾಗಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ.

ಇಲ್ಲಿಯವರೆಗೆ ಐಪಿಎಲ್‌ ಸಮಿತಿಯು ತನ್ನದೇ ಆದ ನಿಯಮಗಳನ್ನು ಪಾಲಿಸುತ್ತಿತ್ತು. ಆದರೆ ಇನ್ನು ಮುಂದೆ ಐಸಿಸಿ ನೀತಿಸಂಹಿತೆ ಜಾರಿಯಾಗಲಿದೆ. ಐಪಿಎಲ್‌ ಆಟಗಾರರೂ ಅಂತರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಐಪಿಎಲ್‌ ಕಾರ್ಯಕಾರಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಐಸಿಸಿಯ ಅಂತರಾಷ್ಟ್ರೀಯ ಟಿ20 ನಿಯಮಗಳ ಪ್ರಕಾರ ಲೆವೆಲ್‌ 1, 2, 3ಯ ಅಪರಾಧ ಮಾಡಿದ ಐಪಿಎಲ್‌ ಆಟಗಾರರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್)‌ ಟೂರ್ನಿಯ ಪಂದ್ಯಗಳು ನಾಲ್ಕು ನಗರಗಳಲ್ಲಿ ನಡೆಯಲಿದ್ದು, ಲಖನೌ, ಮುಂಬೈ, ಬರೋಡಾ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ಸಾದ್ಯತೆ ಇದೆ ಎಂದು ತಿಳಿಸಲಾಗಿದೆ.

 

ಆಂದೋಲನ ಡೆಸ್ಕ್

Recent Posts

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಇಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ…

1 min ago

ಪೆಟ್ರೋಲ್‌ ಖಾಲಿ ವದಂತಿ: ಬಂಕ್‌ಗಳಿಗೆ ಮುಗಿಬಿದ್ದ ಜನತೆ

ಚಾಮರಾಜನಗರ: ಇರಾನ್‌-ಇಸ್ರೇಲ್‌ ನಡುವಿನ ಸಂಘರ್ಷ ಮುಂದುವರಿದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಪರಿಣಾಮ ಸೋಷಿಯಲ್‌ ಮೀಡಿಯಾದಲ್ಲಿ ಪೆಟ್ರೋಲ್‌, ಡೀಸೆಲ್‌…

18 mins ago

ನಂಜನಗೂಡು| ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ

ನಂಜನಗೂಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ…

27 mins ago

ಇರಾನ್‌ ಜೊತೆ ಕದನ ವಿರಾಮ ಇಲ್ಲ: ಡೊನಾಲ್ಡ್‌ ಟ್ರಂಪ್‌ ಸ್ಪಷ್ಟನೆ

ವಾಷಿಂಗ್ಟನ್:‌ ಇರಾನ್‌ ಜೊತೆ ಕದನ ವಿರಾಮ್‌ ಮಾಡಿಕೊಳ್ಳಲು ಬಯಸಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. NATO ಮಿತ್ರರಾಷ್ಟ್ರಗಳನ್ನು…

1 hour ago

ಓದುಗರ ಪತ್ರ: ನಗುಮೊಗದ ಮೌನ ಸಾಧಕ!

ದಣಿವರಿಯದೆ ದುಡಿದಿರಿ ಆರೋಗ್ಯ ಶಿಕ್ಷಣ ಕ್ಷೇತ್ರಗಳಲಿ ಉಸಿರಾಗಿತ್ತು ನಿಮಗೆ ಸಮಾಜಸೇವೆ! ಧಿಕ್ಕರಿಸಿದಿರಿ ಮೌಢ್ಯಕಂದಾಚಾರಗಳ ಪ್ರೀತಿಸಿದಿರಿ ಎಲ್ಲರನೂ ಸಮಭಾವದಲಿ! ಮನಮಾಗಿದ ನಗುಮೊಗದ…

2 hours ago

ಓದುಗರ ಪತ್ರ: ಮಂಗನ ಕೈಗೆ ……….

ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ( ನಾಟೋ) ದೇಶಗಳ ಗುಂಪಿಗೆ ಸೇರಿದ ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮುಂತಾದ ದೇಶಗಳು ಇರಾನಿನ…

2 hours ago