ನವದೆಹಲಿ: ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್ ಸೀಸನ್‌ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ 19 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ. ಈ ಪಂದ್ಯ ಸೋಲುವ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡ ಭಾಗಶಃ ಟೂರ್ನಿಯಿಂದ ಹೊರ ಬಿದ್ದಂತೆಯೇ ಆಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್‌ಗಳಿಸಿತು. ಈ ಬೃಹತ್ ಮೊತ್ತ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿ, 19 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಡೆಲ್ಲಿ ಇನ್ನಿಂಗ್ಸ್: ಟೂರ್ನಿಯ ಕೊನೆಯ ಪಂದ್ಯ ಆಡುತ್ತಿರುವ ಡೆಲ್ಲಿ ತವರಿನಂಗಳದಲ್ಲಿ ಉತ್ತಮ ಪ್ರದರ್ಶನ ತೋರಿತು. ಆರಂಭಿಕ ಜೇಕ್ ಪ್ರೇಸರ್ ಮೆಕ್ ಗಾರ್ಕ್ ಶೂನ್ಯಕ್ಕೆ ಔಟಾದರು. ಬಳಿಕ ಜತೆಯಾದ ಅಭಿಷೇಕ್ ಪೋರೆಲ್ ಹಾಗೂ ಶಾಯ್ ಹೋಪ್ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ ತಂಡಕ್ಕೆ 90 ರನ್‌ಗಳ ಕೊಡುಗೆ ನೀಡಿತು. ಅಭಿಷೇಕ್ ಪೋರೆಲ್ 58(33), ಶಾಯ್ ಹೋಪ್ 38(27), ನಾಯಕ ಪಂತ್ 33(23) ರನ್ ಗಳಿಸಿದರು.
ಕೊನೆಯಲ್ಲಿ ಔಟಾಗದೇ ಅಬ್ಬರಿಸಿದ ಟ್ರಿಸ್ಟನ್ ಸ್ಟಬ್ಸ್ 25 ಎಸೆತ ಎದುರಿಸಿ 3ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 57ರನ್ ಬಾರಿಸಿದರು. ಇವರಿಗೆ ಅಕ್ಷರ್ ಪಟೇಲ್ 14(10) ರನ್ ಗಳಿಸಿ ಸಾಥ್ ನೀಡಿದರು.
ಲಖನೌ ಪರ ನವೀನ್ ಉಲ್-ಹಕ್ 2, ಹರ್ಷದ್ ಖಾನ್ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದರು.
ಲಖನೌ ಇನ್ನಿಂಗ್ಸ್: ಈ ಬೃಹತ್ ಮೊತ್ತ ಬೆನ್ನತ್ತಿದ ಲಖನೌ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಆರಂಭಿಕರಿಬ್ಬರು ಕೈಕೊಟ್ಟರು. ನಾಯಕ ಕೆ.ಎಲ್ ರಾಹುಲ್ 5(3), ಡಿಕಾಕ್ 12(8)ರನ್ ಗಳಿಸಿ ಬೇಗನೇ ನಿರ್ಗಮಿಸಿದರು. ನಿಕೋಲಸ್ ಪೂರನ್ ಆಟ ತಂಡಕ್ಕೆ ಚೇತರಿಕೆ ನೀಡಿತು. ನಿಕೊಲಸ್ ಪೂರನ್ 27ಎಸೆತಗಳಲ್ಲಿ 6ಬೌಂಡರಿ ಹಾಗೂ 4ಸಿಕ್ಸರ್ ಸಹಿತ 61ರನ್ ಗಳಿಸಿದರು.
ಉಳಿದಂತೆ ಸ್ಟೋಯ್ನಿಸ್ 5(7), ದೀಪಕ್ ಹೂಡಾ ಶೂನ್ಯ, ಆಯೂಷ್ ಬದೋನಿ 6(9), ಕೃನಾಲ್ ಪಾಂಡ್ಯ 18(18), ಯದುವೀರ್ ಸಿಂಗ್ 14(7), ರವಿ ಬಿಷ್ಣೋಯಿ 2(2) ರನ್‌ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ತಂಡ ರನ್ ಗಳಿಸುವಲ್ಲಿ ಪರದಾಡಿತು.
ಔಟಾಗದೇ ಕೊನೆಯಲ್ಲಿ ಅಬ್ಬರಿಸಿದ ಅರ್ಷದ್ ಸಿಂಗ್ ಕೇವಲ 33ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 58 ರನ್ ಗಳಿಸಿ ಐಪಿಎಲ್ ಚೊಚ್ಚಲ ಅರ್ಧಶತಕ ದಾಖಲಿಸಿದರು. ಆಗಿದ್ದರೂ ತಂಡವನ್ನು ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಇವರಿಗೆ ಜತೆಯಾಗಿ ನವೀನ್ ಉಲ್-ಹಕ್ 2(4) ರನ್ ಗಳಿಸಿದರು.
ಡೆಲ್ಲಿ ಪರ ಇಶಾಂತ್ ಶರ್ಮಾ 3, ಖಲೀಲ್ ಅಹ್ಮದ್, ಅಕ್ಷರ್ ಪಟೇಲ್, ಮುಖೇಶ್ ಕುಮಾರ್, ಕುಲ್ದೀಪ್ ಯಾದವ್ ಹಾಗೂ ಸ್ಟಬ್ಸ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…