ಲಕ್ನೋ: ಇಲ್ಲಿನ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್ ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಫೀಲ್ಡಿಂಗ್ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ 177 ರನ್‌ಗಳ ಗುರಿಯನ್ನು ನೀಡಿತು. ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕರಾದ ಡಿಕಾಕ್ ಹಾಗೂ ಕೆಎಲ್ ರಾಹುಲ್ ಭರ್ಜರಿ ಜತೆಯಾಟದ ನೆರವಿನಿಂದ 19 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರಚಿನ್ ರವೀಂದ್ರ ಗೋಲ್ಡನ್ ಡಕ್ ಆದರೆ, ಅಜಿಂಕ್ಯಾ ರಹಾನೆ 36 (24) ರನ್ ಗಳಿಸಿದರು. ಇನ್ನುಳಿದಂತೆ ರುತುರಾಜ್ ಗಾಯಕ್ವಾಡ್ 17 (13) ರನ್, ಶಿವಮ್ ದುಬೆ 3 (8) ರನ್, ಸಮೀರ್ ರಿಜ್ವಿ 1 (5) ರನ್, ಮೊಯಿನ್ ಅಲಿ 30 (20) ರನ್, ಎಂಎಸ್ ಧೋನಿ ಅಜೇಯ 28 (9) ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 57 ( 40 ) ರನ್ ಬಾರಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಪರ ಕೃನಾಲ್ ಪಾಂಡ್ಯ 2 ವಿಕೆಟ್, ಮೊಹ್ಸಿನ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯಿ ಹಾಗೂ ಮಾರ್ಕಸ್ ಸ್ಟಾಯಿನಿಸ್ ತಲಾ ಒಂದೊಂದು ವಿಕೆಟ್ ಪಡೆದರು.
ಲಕ್ನೋ ಸೂಪರ್‌ಜೈಂಟ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ಕೆಎಲ್ ರಾಹುಲ್ 134 ರನ್‌ಗಳ ಜತೆಯಾಟವಾಡುವುದರ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಡಿಕಾಕ್ 54 (43 ) ರನ್ ಕಲೆಹಾಕಿದರೆ, ರಾಹುಲ್ 82 (53) ರನ್ ಬಾರಿಸಿದರು. ಇನ್ನುಳಿದಂತೆ ನಿಕೋಲಸ್ ಪೂರನ್ ಅಜೇಯ 23 (12) ರನ್ ಮತ್ತು ಮಾರ್ಕಸ್ ಸ್ಟಾಯಿನಿಸ್ ಅಜೇಯ 8 (7) ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮುಸ್ತಫಿಜುರ್ ರಹಮಾನ್ ಹಾಗೂ ಮತೀಶ ಪತಿರಾನ ತಲಾ ಒಂದೊಂದು ವಿಕೆಟ್ ಪಡೆದರು.
ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…
ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…
ಮಂಡ್ಯ: ಇದೇ ಅಕ್ಟೋಬರ್.11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…
ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್…