ಕ್ರೀಡೆ

IPL 2024: ಮುಂಬೈ ಮಣಿಸಿ ಶುಭಾರಂಭ ಮಾಡಿದ ಗುಜರಾತ್‌ ಟೈಟನ್ಸ್‌

ಅಹ್ಮದಾಬಾದ್:‌ ಇಲ್ಲಿನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 6 ರನ್‌ಗಳ ಗೆಲುವನ್ನು ಸಾಧಿಸಿ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಫೀಲ್ಡಿಂಗ್‌ ಆಯ್ದುಕೊಂಡು ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡವನ್ನು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 168 ರನ್‌ ಕಲೆಹಾಕಿದ ಗುಜರಾತ್‌ ಟೈಟನ್ಸ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಗೆಲ್ಲಲು 169 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 162 ರನ್‌ ಕಲೆಹಾಕಿದೆ.

ಗುಜರಾತ್‌ ಟೈಟನ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ವೃದ್ಧಿಮಾನ್‌ ಸಹಾ 19 (15) ಮತ್ತು ನಾಯಕ ಶುಭ್‌ಮನ್‌ ಗಿಲ್‌ 31 (22) ರನ್‌ ಕಲೆಹಾಕಿದರೆ, ಸಾಯಿ ಸುದರ್ಶನ್‌ 45 (39), ಅಜ್ಮತ್‌ಉಲ್ಲಾ ಒಮಾರ್ಜೈ 17 (11), ಡೇವಿಡ್‌ ಮಿಲ್ಲರ್‌ 12 (11), ರಾಹುಲ್‌ ತೆವಾಟಿಯ 22 (15), ವಿಜಯ್‌ ಶಂಕರ್‌ ಅಜೇಯ ಅಜೇಯ 6(5) ಮತ್ತು ರಶೀದ್‌ ಖಾನ್‌ ಅಜೇಯ 4 (3) ರನ್‌ ಕಲೆಹಾಕಿದರು.

ಮುಂಬೈ ಇಂಡಿಯನ್ಸ್‌ ಪರ ಜಸ್‌ಪ್ರೀತ್‌ ಬುಮ್ರಾ 3 ವಿಕೆಟ್‌, ಗೆರಾಲ್ಡ್‌ ಸೊಯೆಟ್ಜೆ 2 ಮತ್ತು ಪಿಯೂಷ್‌ ಚಾವ್ಲಾ ಒಂದು ವಿಕೆಟ್‌ ಪಡೆದರು.

ಮುಂಬೈ ಇಂಡಿಯನ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಇಶಾನ್‌ ಕಿಶನ್‌ ಮೊದಲ ಓವರ್‌ನಲ್ಲಿಯೇ ಯಾವುದೇ ರನ್ ಗಳಿಸದೇ ಔಟ್‌ ಆಗಿ ನಿರಾಸೆ ಮೂಡಿಸಿದರು. ರೋಹಿತ್‌ ಶರ್ಮಾ ಹಾಗೂ ಡೆವಾಲ್ಡ್‌ ಬ್ರೆವಿಸ್‌ ಗಮನಾರ್ಹ ಪ್ರದರ್ಶನ ನೀಡಿದರಾದರೂ ನಂತರ ಬಂದ ಆಟಗಾರರು ಗುಜರಾತ್‌ ಬೌಲಿಂಗ್‌ ದಾಳಿ, ಉತ್ತಮ ಕ್ಷೇತ್ರರಕ್ಷಣೆಯ ಎದುರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ರೋಹಿತ್‌ ಶರ್ಮಾ 43 (29) ರನ್‌, ನಮನ್‌ ಧೀರ್‌ 20 (10) ರನ್‌, ಡಿವಾಲ್ಡ್‌ ಬ್ರೆವಿಸ್‌ 46 (38) ರನ್‌, ಟಿಮ್‌ ಡೇವಿಡ್‌ 11 (10) ರನ್‌, ತಿಲಕ್‌ ವರ್ಮಾ 25 (19) ರನ್‌, ನಾಯಕ ಹಾರ್ದಿಕ್‌ ಪಾಂಡ್ಯ 11 (4) ರನ್‌, ಗೆರಾಲ್ಡ್‌ ಸೋಯೆಟ್ಜೆ 1 (3) ರನ್‌, ಪಿಯೂಷ್‌ ಚಾವ್ಲಾ ಡಕ್‌ಔಟ್‌, ಜಸ್‌ಪ್ರೀತ್‌ ಬುಮ್ರಾ ಅಜೇಯ 1 (1) ರನ್‌ ಮತ್ತು ಶಾಮ್ಸ್‌ ಮುಲಾನಿ ಅಜೇಯ 1 (1) ರನ್‌ ಕಲೆಹಾಕಿದರು.

ಗುಜರಾತ್‌ ಟೈಟನ್ಸ್‌ ಪರ ಅಜ್ಮತ್‌ಉಲ್ಲಾ ಒಮಾರ್ಜೈ 2, ಉಮೇಶ್‌ ಯಾದವ್‌ 2, ಸ್ಪೆನ್ಸರ್‌ ಜಾನ್ಸನ್‌ 2, ಮೋಹಿತ್‌ ಶರ್ಮಾ 2 ಹಾಗೂ ರವಿಶ್ರೀನಿವಾಸನ್‌ ಸಾಯಿ ಕಿಶೋರ್‌ 1 ವಿಕೆಟ್‌ ಪಡೆದರು.

andolana

Recent Posts

ಜನಗಣತಿ ಮಾಡುವ ವೇಳೆಯೇ ಹೃದಯಾಘಾತ: ಶಿಕ್ಷಕ ಸಾವು

ಕೆ.ಆರ್.ನಗರ: ಜನಗಣತಿ ಮಾಡುವ ವೇಳೆ ಸರ್ಕಾರಿ ಶಾಲೆಯ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ…

6 mins ago

ಓದುಗರ ಪತ್ರ: ಪಂಚ.. ತಂತ್ರ !

ಪಂಚ.. ತಂತ್ರ ! ಚುನಾವಣೆಯಲ್ಲಿ ಗೆದ್ದವರಿಗೆ ಸಿಎಂ ಚಿಂತೆ, ಸೋತವರಿಗೆ ಇವಿಎಂನದೇ ಚಿಂತೆ ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

2 hours ago

ಓದುಗರ ಪತ್ರ: ಮರದ ಕೊಂಬೆಯನ್ನು ತೆರವುಗೊಳಿಸಿ

ಮೈಸೂರಿನ ಕುವೆಂಪುನಗರದ ‘ಎಂ’ ಬ್ಲಾಕ್‌ನ ನೃಪತುಂಗ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹೊಸ…

2 hours ago

ಓದುಗರ ಪತ್ರ: ತಮಿಳುನಾಡಿನಲ್ಲಿ ವಿಜಯ್ ವಿಜಯ

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ೨೩೪ ಕ್ಷೇತ್ರಗಳ ಪೈಕಿ ೧೦೮ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ…

2 hours ago

ಓದುಗರ ಪತ್ರ: ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಪರ್ವ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು ೨೯೪ ಸ್ಥಾನಗಳ ಪೈಕಿ…

2 hours ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ: ಗಾಲಿ ಕುರ್ಚಿಯಿಂದ ಚಿಮ್ಮಿದ ಮೈಂಡ್‌ಸೆಟ್ ಕೋಚ್ ಜೈಕಿಶನ್!

ಲಕ್ಷಾಂತರ ಜನರಿಗೆ ಮೈಂಡ್ ಸೆಟ್ ಕೋಚ್ ಆಗಿ ಮಾರ್ಗದರ್ಶ ಗುಜರಾತಿನ ಅಹ್ಮದ್‌ನಗರದ ೩೮ ವರ್ಷ ಪ್ರಾಯದ ಜೈಕಿಶನ್ ಶರ್ಮಾ ಒಬ್ಬ…

4 hours ago