ಧರ್ಮಾಶಾಲಾ: ರವೀಂದ್ರ ಜಡೇಜಾ ಆಲ್‌ರೌಂಡರ್ ಆಟದ ಫಲವಾಗಿ ಚೆನ್ನೈಸೂಪರ್ ಕಿಂಗ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭದ ಗೆಲುವು ದಕ್ಕಿದೆ. ಆ ಮೂಲಕ ಕಳೆದ ಮೂರು ಸೀಸನ್‌ಗಳ ಬಳಿಕ ಪಂಜಾಬ್ ವಿರುದ್ಧ ಸಿಎಸ್‌ಕೆ ಮೊದಲ ಗೆಲುವು ದಾಖಲಿಸಿದೆ.
ಇಲ್ಲಿನ ಹಿಮಾಚಲ ಪ್ರದೇಶ ಮೈದಾನದಲ್ಲಿ ನಡೆದ ಐಪಿಎಲ್ ಸೀಸನ್ 53ನೇ ಪಂದ್ಯದಲ್ಲಿ ಸಿಎಸ್‌ಕೆ ಹಾಗೂ ಪಿಬಿಎಸ್‌ಕೆ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167ರನ್ ಗಳಿಸಿ 168 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಪಂಜಾಬ್ 20ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139ರನ್ ಗಳಿಸಿ 28 ರನ್‌ಗಳ ಅಂತರದಿಂದ ಸೋಲನುಭವಿಸಿತು.
ಚೆನ್ನೈ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈಗೆ ರಹಾನೆ ಮತ್ತೊಮ್ಮೆ ನೀರಸ ಪ್ರದರ್ಶನ ನೀಡಿದರು. ರಹಾನೆ 9(7) ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಜತೆಯಾದ ಋತುರಾಜ್ ಗಾಯಕ್ವಾಡ್ 32(21) ಹಾಗೂ ಡೆರೆಲ್ ಮಿಚೆಲ್ 30(19) ಚೇತರಿಕೆ ಆಟವಾಡಿದರು. ಶಿವಂ ದುಬೆ ಶೂನ್ಯಕ್ಕೆ ಔಟಾದರೇ, ಮೋಯಿನ್ ಅಲಿ 17(20) ರನ್ ಬಾರಿಸಿದರು. ತಂಡ ಸಂಕಷ್ಟದ ಸಮಯದಲ್ಲಿದ್ದಾಗ ಬಂದು ಜಾಣ್ಮೆಯಿಂದ ಬ್ಯಾಟ್ ಬೀಸಿದ ಆಲ್‌ರೌಂಡರ್ ಜಡೇಜಾ 26ಎಸೆತ 3ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 43 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಸ್ಯಾಂಟ್ನರ್ 11(11), ಠಾಕೂರ್ 17(11), ಧೋನಿ ಶೂನ್ಯ ಸಂಪಾದಿಸಿದರು. ಗ್ಲೇಸನ್ 2(2) ರನ್ ಕಲೆಹಾಕಿದರು.
ಪಂಜಾಬ್ ಪರ ರಾಹುಲ್ ಚಾಹರ್ ಹಾಗೂ ಹರ್ಷಲ್ ಪಟೇಲ್ ತಲಾ 3, ಅರ್ಷದೀಪ್ ಸಿಂಗ್ 2 ಹಾಗೂ ಕರನ್ ಒಂದು ವಿಕೆಟ್ ಪಡೆದು ಮಿಂಚಿದರು.
ಪಂಜಾಬ್ ಇನ್ನಿಂಗ್ಸ್: ತನ್ನ ತವರಿನಂಗಳದಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಂಜಾಬ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಜಾನಿ ಬೇರ್‌ಸ್ಟೋ 7(6), ರೂಸೋ ಶೂನ್ಯಕ್ಕೆ ಔಟಾದರು. ಪ್ರಬ್‌ಸಿಮ್ರಾನ್ 30(23) ಹಾಗೂ ಶಶಾಂಕ್ ಸಿಂಗ್ 27(20) ರನ್ ಬಾರಿಸಿ ಔಟಾದರು. ಬಳಿಕ ಬಂದ ಬೇರಾರಿಂದಲೂ ಗೆಲುವಿನ ಆಟ ಕಂಡು ಬರಲಿಲ್ಲ. ನಾಯಕ ಕರನ್ 7(11), ಜಿತೇಶ್ ಶರ್ಮಾ ಶೂನ್ಯ, ಅಶುತೋಷ್ ಶರ್ಮಾ 3(10), ಹರ್ಪ್ರೀತ್ ಬ್ರಾರ್ 17(13), ಹರ್ಷಲ್ ಪಟೇಲ್ 12(13), ರಾಹುಲ್ ಚಾಹರ್ 16(10) ಹಾಗೂ ರಬಾಡ 11(10) ರನ್ ಬಾರಿಸಿಯೂ ಕಡಿಮೆ ಮೊತ್ತ ಬೆನ್ನತ್ತುವಲ್ಲಿ ಪಂಜಾಬ್ ವಿಫಲವಾಯಿತು.
ಸಿಎಸ್‌ಕೆ ಪರ ಜಡೇಜಾ 3, ಸಮರ್‌ಜಿತ್ ಸಿಂಗ್ ಹಾಗೂ ತಷಾರ್ ದೇಶ್‌ಪಾಂಡೆ ತಲಾ 2, ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದುಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಗಮನಸೆಳೆದರು.
ಪಂದ್ಯ ಶ್ರೇಷ್ಠ: ರವೀಂದ್ರ ಜಡೇಜಾ
ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…
ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…
ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…
ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…
ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…
ಚಾಮರಾಜನಗರ : ಇತ್ತೀಚೆಗೆ ಸುರಿದ ಗಾಳಿ ಸಹಿತ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯ ದೊಡ್ಡಮೋಳೆ, ಕಟ್ನವಾಡಿ, ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದ…