ಕ್ರೀಡೆ

IPL 2023: ಗುಜರಾತ್‌ಗೆ ಆಘಾತ, ಕೋಲ್ಕತ್ತ ನೈಟ್ ರೈಡರ್ಸ್‌ಗೆ ಐತಿಹಾಸಿಕ ಗೆಲುವು

ಅಹಮದಾಬಾದ್: ರಿಂಕು ಸಿಂಗ್ ಸಿಡಿಸಿದ ಸತತ ಐದು ಸಿಕ್ಸರ್‌ಗಳ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಎದುರು ರೋಚಕ ಜಯ ದಾಖಲಿಸಿತು. ಐಪಿಎಲ್‌ನಲ್ಲಿ ಹೊಸ ಇತಿಹಾಸ ರಚನೆಯಾಯಿತು.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಗುಜರಾತ್ ತಂಡವು ನೀಡಿದ್ದ 205 ರನ್‌ಗಳ ಗುರಿಯನ್ನು ಕೋಲ್ಕತ್ತ ಬೆನ್ನಟ್ಟಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 29 ರನ್‌ಗಳ ಅಗತ್ಯವಿತ್ತು. ಬಹುತೇಕ ಅಸಾಧ್ಯ ಎಂಬಂತಿದ್ದ ಭಾವನೆಯನ್ನು ರಿಂಕು ತಲೆಕೆಳಗು ಮಾಡಿದರು.

ಮಧ್ಯಮವೇಗಿ ಯಶ್ ದಯಾಳ್ 20ನೇ ಓವರ್‌ ಬೌಲಿಂಗ್ ಮಾಡಿದರು. ಅವರ ಮೊದಲ ಎಸೆತವನ್ನು ಎದುರಿಸಿದ ಉಮೇಶ್ ಯಾದವ್ ಒಂದು ರನ್‌ ಪಡೆಯುವಲ್ಲಿ ಯಶಸ್ವಿಯಾದರು. ಸ್ಟ್ರೈಕ್‌ಗೆ ಬಂದ ರಿಂಕು ಸಿಂಗ್ ಆಸಾಧ್ಯ ಸವಾಲನ್ನು ‘ಸಾಧ್ಯ’ ಮಾಡಿದರು.

ನಂತರ ಐದು ಎಸೆತಗಳಲ್ಲಿಯೂ ಸಿಕ್ಸರ್‌ಗಳನ್ನು ಎತ್ತಿದರು. ಮೂರು ಫುಲ್‌ ಟಾಸ್, ಒಂದು ಲೆಂಗ್ತ್ ಮತ್ತು ಒಂದು ನಿಧಾನಗತಿಯ ಶಾರ್ಟ್‌ ಎಸೆತಗಳನ್ನು ಪ್ರೇಕ್ಷಕರ ಗ್ಯಾಲರಿಗೆ ಕಳಿಸುವಲ್ಲಿ ಎಡಗೈ ಬ್ಯಾಟರ್ ರಿಂಕು ಯಶಸ್ವಿಯಾದರು.

ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಸಹ ಆಟಗಾರರು ಕ್ರೀಡಾಂಗಣಕ್ಕೆ ಧಾವಿಸಿದರು. ರಿಂಕು ಸಿಂಗ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಇತ್ತ ಯಶ್ ದಯಾಳ್ ಕಣ್ಣೀರು ಹಾಕುತ್ತ ಕುಸಿದರು. ಗುಜರಾತ್ ತಂಡದ ಸಹ ಆಟಗಾರರು ಅವರನ್ನು ಸಂತೈಸಿದರು.

ಈ ಆವೃತ್ತಿಯಲ್ಲಿ ಮೂರನೇ ಪಂದ್ಯವಾಡಿದ ಗುಜರಾತ್‌ಗೆ ಇದು ಮೊದಲ ಸೋಲು. ಕೆಕೆಆರ್‌ಗೆ ಎರಡನೇ ಗೆಲುವು. ಈಚೆಗೆ ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತ ತಂಡವು ಆರ್‌ಸಿಬಿ ಎದುರು ಜಯಿಸಿತ್ತು.

ಮೊದಲೆರಡು ಪಂದ್ಯಗಳನ್ನು ಜಯಿಸಿ ಆತ್ಮವಿಶ್ವಾಸದಲ್ಲಿದ್ದ ಗುಜರಾತ್ ಬಳಗವು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು.

ಸಾಯಿ ಸುದರ್ಶನ್ (53; 38ಎ, 4X3) ಹಾಗೂ ವಿಜಯ್ ಶಂಕರ್ (ಔಟಾಗದೆ 63: 24ಎ, 4X4, 6X5) ಅವರ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 204 ರನ್‌ ಗಳಿಸಿತು. ಕೆಕೆಆರ್ ತಂಡದ ಸುನೀಲ್ ನಾರಾಯಣ್ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಹಾರ್ದಿಕ್ ಪಾಂಡ್ಯ ಗೈರು ಹಾಜರಿಯಲ್ಲಿ ತಂಡವನ್ನು ಮುನ್ನಡೆಸಿದ ರಶೀದ್ ಖಾನ್ ಬೌಲಿಂಗ್‌ನಲ್ಲಿ ಯಶಸ್ವಿಯಾದರು. ಆದರೆ ಬೌಲರ್‌ಗಳ ನಿಯೋಜನೆಯಲ್ಲಿ ಎಡವಿದರು.

ಗುರಿ ಬೆನ್ನಟ್ಟಿದ್ದ ಕೋಲ್ಕತ್ತ ತಂಡಕ್ಕೆ ಆರಂಭದಲ್ಲಿಯೇ ಮೊಹಮ್ಮದ್ ಶಮಿ ಮತ್ತು ಜೋಶುವ ಲಿಟಲ್ ಪೆಟ್ಟುಕೊಟ್ಟಿದ್ದರು. ಆದರೆ, ವೆಂಕಟೇಶ್ ಅಯ್ಯರ್ (83; 40ಎ) ಹಾಗೂ ನಿತೀಶ್ ರಾಣಾ (45; 29ಎ) ಅವರು ತಂಡದ ಹೋರಾಟವನ್ನು ಜೀವಂತವಾಗಿಟ್ಟರು.

ಆದರೆ ಅವರಿಬ್ಬರೂ ಔಟಾದ ನಂತರ ಇನಿಂಗ್ಸ್ ಹೊಣೆ ರಿಂಕು ಸಿಂಗ್ ಮೇಲೆ ಬಿತ್ತು. ರಸೆಲ್, ಸುನೀಲ್, ಶಾರ್ದೂಲ್ ಅವರು ಹೀಗೆ ಬಂದು ಹಾಗೆ ಹೋದರು. ಈ ನಡುವೆಯೂ ಆಬ್ಬರಿಸಿದ ಉತ್ತರಪ್ರದೇಶದ ಹುಡುಗ ರಿಂಕು ತಂಡವನ್ನು ಗೆಲ್ಲಿಸಿದರು.

andolanait

Recent Posts

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

39 seconds ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

31 mins ago

ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ : ಓರ್ವ ಬಂಧನ

ಹನೂರು : ಜಮೀನಿನಲ್ಲಿ ಅಕ್ರಮ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಹಾಗೂ 5 ಲಕ್ಷ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ…

1 hour ago

ಯುವ ರೈತರ ಮದುವೆಯಾಗುವ ಯುವತಿಯರಿಗೆ 5 ಲಕ್ಷ ನೀಡಲಿ ; ಮನನೊಂದ ರೈತ ಮಕ್ಕಳು ಮುಖ್ಯಮಂತ್ರಿಗೆ ಮನವಿ

ಮಂಡ್ಯ : ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹವಾಗಿ ೫ ಲಕ್ಷ ರೂ.ಗಳನ್ನು ನೀಡುವಂತೆ ಮನನೊಂದ ರೈತ ಮಕ್ಕಳು ಮುಖ್ಯಮಂತ್ರಿಗಳಿಗೆ…

1 hour ago

ಕಾಲುಜಾರಿ ನೀರಿನಲ್ಲಿ ಮುಳುಗಿ ಯುವಕ ಸಾವು

ಸರಗೂರು : ನಾಲೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋದಾಗ ಯುವಕನೊಬ್ಬ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮೇಗೌಡರ…

1 hour ago

ನಗರಾಭಿವೃದ್ಧಿ ಇಲಾಖೆಯಿಂದ ಯುಜಿಡಿ ನಿರ್ವಹಣೆ ಅಸಾಧ್ಯ : ಸಚಿವ ಬೈರತಿ ಸುರೇಶ್

ವಿಧಾನಸಭೆ : ನಗರಾಭಿವೃದ್ಧಿ ಇಲಾಖೆಯಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಒಳಚರಂಡಿ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳ ನಿರ್ವಹಣೆ ಅಸಾಧ್ಯ ಎಂದು…

1 hour ago