ಲಖನೌ: ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡಿತು. ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು.
ಆದರೆ, ಲಖನೌ ತಂಡದ ಆಯುಷ್ ಬಡೋಣಿಯ ಅರ್ಧಶತಕ ಕ್ರಿಕೆಟ್ ಅಭಿಮಾನಿಗಳಿಗೆ ಮುದ ನೀಡಿತು. ಬುಧವಾರ ಬೆಳಿಗ್ಗೆ ಸುರಿದಿದ್ದ ಮಳೆಯಿಂದಾಗಿ ಮೈದಾನ ಹಸಿಯಾಗಿತ್ತು. ಅದರಿಂದಾಗಿ 15 ನಿಮಿಷ ತಡವಾಗಿ ಪಂದ್ಯ ಆರಂಭವಾಯಿತು.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೋಯಿನ್ ಅಲಿ, ಮಹೀಷ ತೀಕ್ಷಣ ಮತ್ತು ಮಹೀಷ ಪತಿರಾಣಾ ಅವರು ಉತ್ತಮ ಬೌಲಿಂಗ್ ಮಾಡಿದರು. ಇದರಿಂದಾಗಿ ತಂಡವು ಕೇವಲ 44 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಆದರೆ ಏಳನೇ ಕ್ರಮಾಂಕದಲ್ಲಿ ಕೀಸ್‌ಗೆ ಬಂದ ಯುವ ಬ್ಯಾಟರ್ ಆಯುಷ್ ಬಡೋಣಿ ಔಟಾಗದೆ 59(33) ಲಖನೌ ತಂಡಕ್ಕೆ ಆಸರೆಯಾದರು. ನಿಕೊಲಸ್ ಪೂರನ್ 31 ಎಸೆತಗಳಲ್ಲಿ 20 ರನ್ ಗಳಿಸಿದರು.
ತಂಡವು 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 125 ರನ್ ಗಳಿಸಿದ ಸಂದರ್ಭದಲ್ಲಿ ಮಳೆ ಆರಂಭವಾಯಿತು. ಅದರೆ ಮಳೆ ನಿಲ್ಲದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಸಂಕ್ಷಿಪ್ತ ಸ್ಕೋರ್:
ಲಖನ್ ಸೂಪರ್ ಜೈಂಟ್ಸ್: 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 125 (ಮನನ್ ವೊಹ್ರಾ 10, ಕೈಲ್ ಮೇಯರ್ಸ್ 14, ನಿಕೊಲಸ್ ಪೂರನ್ 20, ಆಯುಷ್ ಬಡೋಣಿ ಅಜೇಯ 59, ಮೋಯಿನ್ ಅಲಿ 13ಕ್ಕೆ2, ಮಹೀಷ ತೀಕ್ಷಣ 37ಕ್ಕೆ2, ಮಹೀಷ ಪಥಿರಾಣ 22ಕ್ಕೆ2)
ಮಳೆಯಿಂದಾಗಿ ಪಂದ್ಯ ಸ್ಥಗಿತ.
ಬೆಂಗಳೂರು : ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ರೂ.1 ಲಕ್ಷದವರೆಗೆ ದಂಡ, ಮೂರು ವರ್ಷದವರೆಗೆ ಜೈಲು ಶಿಕ್ಷೆ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಟ್ಟಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್…
ಬೆಂಗಳೂರು : ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು,…
ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಸನಿಹದಲ್ಲಿರುವ ತೊಳಸಿಕೆರೆ ಗ್ರಾಮದ ದುಮ್ಮತಂಬಡಿ ಅವರಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ…
ನಂಜನಗೂಡು : ʻಹತ್ತೂರು ಜಾತ್ರೆಗೆ ಸುತ್ತೂರು ಜಾತ್ರೆʼ ಸಮ ಎಂಬ ಗಾದೆ ಹೊಂದಿರುವ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ…
ಕಿಕ್ಕೇರಿ : ಗ್ರಾಮೀಣ ಬದುಕಿನ ಸವಾಲುಗಳ ನಡುವೆ ಬೆಳೆದ ರೈತನ ಮಗಳು ತನ್ನ ಅಕ್ಷರಾಸಕ್ತಿಯಿಂದ ಇಡೀ ತಾಲ್ಲೂಕಿನ ಹೆಮ್ಮೆಯ ಮಗಳಾಗಿ…