ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಶಿಸ್ತು ಪ್ರದರ್ಶಿಸಿದ ಭಾರತದ ಕುಸ್ತಿಪಟು ಅಂತಿಮ್ ಪಂಘಲ್ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಮೂರು ವರ್ಷಗಳ ಕಾಲ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗೇಮ್ ವಿಲೇಜ್‌ಗೆ ಪ್ರವೇಶಿಸಲು ಅಂತಿಮ್ ಪಂಘಾಲ್ ಅವರ ಅಧಿಕೃತ ಕಾರ್ಡ್‌ನ್ನು ಅವರ ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಈ ಕಾರ್ಡ್ ಆಟಗಾರರಲ್ಲದವರು ಬಳಸುವಂತಿಲ್ಲ ಎಂಬ ನಿಯಮವಿದೆ. ಭಾರತೀಯ ತಂಡ ಪ್ಯಾರಿಸ್‌ನಲ್ಲಿ ನಿಯಮ ಮುರಿದ ಮುಜುಗರಕ್ಕೆ ಒಳಗಾದ ಹಿನ್ನೆಲೆ ಐಒಎ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಬುಧುವಾರ(ಆ.8) ನಡೆದ ಮಹಿಳೆಯರ ಕುಸ್ತಿ 53 ಕೆ.ಜಿ ವಿಭಾಗದ ಆರಂಭಿಕದಲ್ಲೇ ಸೋತಾ ಅಂತಿಮ್ ಕ್ರೀಡಾಕೂಟದಿಂದ ನಿರ್ಗಮಿಸಿದ್ದರು. ಇದೀಗ ಅಂತಿಮ್ ಅವರು ಭಾರತಕಕೆ ಆಗಮಿಸಿದ ಬಳಿಕ ನಿಷೇಧಸ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ.
ಕ್ರೀಡಾಕೂಟದಿಂದ ಸೋತ ಬಳಿಕ ಅಂತಿಮ್ ಪಂಘಲ್ ಅವರು ಅಥ್ಲೇಟ್ಸ್ ವಿಲೇಜ್‌ಗೆ ತೆರಳದೆ ಕೋಚ್‌ಗಳಿದ್ದ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ತಮ್ಮ ಸಹೋದರಿಗೆ ಕಾರ್ಡ್ ನೀಡಿ ಅಥ್ಲೆಟ್ ವಿಲೇಜ್‌ನಿಂದ ತಮ್ಮ ವಸ್ತುಗಳನ್ನು ತರುವಂತೆ ಹೇಳಿ ಕಳುಹಿಸಿದ್ದರು. ಅವರ ಸಹೋದರಿಯನ್ನು ಪ್ರವೇಶ ಮಾಡಿದ ಸಮಯದಲ್ಲಿ ತಡೆಹಿಡಿದ ಭದ್ರತಾ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೈಸೂರು: ಇಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಅರಮನೆಯ…
ಬೆಂಗಳೂರು: ಮಾರ್ಚ್.28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಕಮಿಷನರ್ ಸೀಮಂತ್ ಕುಮಾರ್…
ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಇಂದು ಸಂಜೆ ತಿಗಳರಪೇಟೆಯ…
ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್.27ರವರೆಗೆ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ಮಾರ್ಚ್.26ರಂದು ಕೊನೆಗೊಳ್ಳಲಿದೆ.…
ಬೊಗೋಟಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್ ಕೆಲ ಸಮಯದಲ್ಲಿ ಪತನಗೊಂಡು 66 ಜನರು ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ…
ಬಾ ಮಳೆಯೇ ಬಾ.. ನೊಂದು - ಬೆಂದು ಬಸವಳಿದ ರೈತನ ಬಾಳಿಗೆ ಹೂವಾಗಿ ಬಾ ಕಾದ ಭೂತಾಯ ಒಡಲಿಂಗೆ ಹನಿ…