ನವದೆಹಲಿ : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯುದ್ದಕ್ಕೂ ಭಾರತ ವಿರೋದ್ಧ ಹಲವಾರು ಗಂಭೀರ ಆರೋಪಗಳನ್ನು ಪಾಕಿಸ್ತಾನ ಮಾಡುತ್ತಾ ಬರುತ್ತಿದೆ.
ಭಾರತ ಆತಿಥ್ಯ ವಹಿಸಿದ್ದ ಏಕದಿನ ವಿಶ್ವಕಪ್ 2023 ರಲ್ಲಿ ನೀರಸ ಪ್ರದರ್ಶನ ತೋರಿದ ಪಾಕಿಸ್ತಾನ ಲೀಗ್ ಹಂತದಲ್ಲಿ ಟೂರ್ನಿಯಿಂದ ಹೊರ ನಡೆದಿತ್ತು. ಇದರಿಂದ ಅಸಮಧಾನಗೊಂಡಿದ್ದ ಪಾಕ್ ಮಾಜಿ ಆಟಗಾರರು ಭಾರತ ವಿರುದ್ಧ ಒಂದಲ್ಲಾ ಒಂದು ಆರೋಪ ಮಾಡುತ್ತಲೇ ಬರುತ್ತಿದ್ದಾರೆ.
ಪಾಕ್ ಆಟಗಾರ ಹಸನ್ ರಾಜಾ ಭಾರತ ಆಟಗಾರರಿಗೆ ಬೇರೆ ಚೆಂಡು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಬಾಲಿವುಡ್ ನಟಿ ಐಶ್ವರ್ಯ ರೈನ್ನು ಮದುವೆಯಾಗಿ ಸುಂದರವಾದ ಮಗುವನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಪಾಕ್ ಆಲ್‌ರೌಂಡರ್ ಅಬ್ದುಲ್ ರಝಾಕ್ ಇದೀಗ ಭಾರತ ವಿಶ್ವಕಪ್ ಸೋತಿದ್ದಕ್ಕೆ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.
ಭಾರತ ವಿಶ್ವಕಪ್ ಆಡಲು ತಮಗೆ ಬೇಕಾದ ಹಾಗೆ ಪಿಚ್ ಕಂಡಿಷನ್ ಅನ್ನು ಬದಲಾಯಿಸಿಕೊಂಡಿದೆ. ಇದು ಭಾರತಕ್ಕೆ ಅನುಕೂಲವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಜೊತೆಗೆ ಭಾರತ ತಂಡ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಸೋತಿದ್ದು ಒಳ್ಳೆಯದು. ಭಾರತ ಸೋತಿದ್ದಕ್ಕೆ ಕ್ರಿಕೆಟ್ ಗೆದ್ದಿತು ಎಂದು ಅವರು ಅಭಿಪ್ರಾಯಪಟ್ಟದ್ದಾರೆ. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲಿಯೂ ಹೀನಾಯ ಪ್ರದರ್ಶನ ತೋರಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೬ ವಿಕೆಟ್‌ಗಳ ಸೋಲು ಅನುಭವಿಸಿತ್ತು. ೧೨ ವರ್ಷಗಳ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಇತ್ತ ಅತ್ಯುತ್ತಮ ಪ್ರದರ್ಶನ ತೋರಿದ ಆಸೀಸ್ ತವರು ನೆಲದಲ್ಲಿ ಭಾರತವನ್ನು ಮಣಿಸಿ ೬ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ರಝಾಕ್ ಹೇಳಿದೇನು? : ಪಾಕ್ ನ ಖಾಸಗಿ ಟಿವಿ ಶೋ ಒಂದರಲ್ಲಿ ಮಾತನಾಡಿದ್ದ ರಝಾಕ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತ ಸೋಲಿನೊಂದಿಗೆ ಕ್ರಿಕೆಟ್ ಗೆದ್ದಿದೆ, ಏಕೆಂದರೆ ಭಾರತ ಅವರಿಗೆ ಬೇಕಾದ ಹಾಗೆ, ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದರು. ಒಂದು ವೇಳೆ ಅವರು ಈ ಟೂರ್ನಿಯಲ್ಲಿ ಭಾರತ ಗೆದ್ದಿದ್ದರೇ ಕ್ರಿಕೆಟ್ ಮೇಲೆ ಅವರು ಪ್ರಾಬಲ್ಯ ಸಾಧಿಸುತ್ತಿದ್ದರು. ಭಾರತ ತಂಡ ಫೈನಲ್ ನಲ್ಲಿ ಗೆದ್ದಿದ್ದರೇ ನನಗೆ ನಿಜವಾಗಿಯೂ ಬೇಸವಾಗುತ್ತಿತ್ತು. ಕ್ರಿಕೆಟ್ ಧೈರ್ಯ ಮತ್ತು ಮಾನಸಿಕವಾಗಿ ಸದೃಡವಾಗಿರುವ ತಂಡಕ್ಕೆ ನೆರವಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಭಾರತ ಗೆದ್ದಿದ್ದರೆ ನಿಜವಾಗಿಯೂ ನಾವು ಪಶ್ಚಾತಾಪ ಪಡುತ್ತಿದ್ದೆವು. ಅವರಿಗೆ ಬೇಕಾದ ಹಾಗೆ ಕಂಡಿಷನ್ ನ್ನು ಸಂಪೂರ್ಣವಾಗಿ ಬಳಸಕೊಂಡಿದ್ದಾರೆ. ಸೆಮಿಸ್ ನಲ್ಲಿ ಬೃಹತ್ ಮೊತ್ತ ಕಲೆಹಾಕಿ, ಫೈನಲ್‌ನಲ್ಲಿ ನಿಧಾನಗತಿಯಿಂದ ಪಿಚ್ ಕೂಡಿತ್ತು. ಇಲ್ಲಿ ಒಂದು ತಪ್ಪು ನಡೆದಿದೆ ಎಂದು ನನಗನಿಸುತ್ತಿದೆ. ಪಿಚ್‌ಗಳು, ಅವುಗಳ ವಾತಾವರಣ ಎರಡು ತಂಡಗಳಿಗೆ ಸಮತೋಲನದಿಂದ ಕೂಡಿರಬೇಕು. ಕೊಹ್ಲಿ ಶತಕ ಸಿಡಿಸಿದ್ದರೆ ಭಾರತ ಅದರ ಲಾಭ ಟೀಂ ಇಂಡಿಯಾ ಪಡೆಯುತ್ತಿತ್ತು. ಆ ಮೂಲಕ ಕಪ್ ಗೆಲ್ಲುತ್ತಿದ್ದರು ಎಂದು ಅವರು ದೂರಿದ್ದಾರೆ.
ವಿಶ್ವಕಪ್ ಟೂರ್ನಿ ವೇಳೆ ಭಾರತದ ಮೇಲೆ ವಿಭಿನ್ನ ಚೆಂಡು ಬಳಕೆ, ಡಿಆರ್‌ಎಸ್, ಪಿಚ್ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಲಾಗಿತ್ತು.
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…