BREAKING NEWS

ವಿಜಯ್‌ ಹಜಾರೆ ಟ್ರೋಫಿ: ಗೆಲುವಿನ ಶುಭಾರಂಭ ಮಾಡಿದ ಕರ್ನಾಟಕ; ಜಮ್ಮು ವಿರುದ್ಧ 222 ರನ್‌ ಜಯ

ಇಂದಿನಿಂದ ( ನವೆಂಬರ್‌ 23 ) ವಿಜಯ್‌ ಹಜಾರೆ ಟ್ರೋಫಿ ಆರಂಭವಾಗಿದ್ದು, ಗ್ರೂಪ್‌ ಹಂತದ ಮೊದಲ ಸುತ್ತಿನ ಪಂದ್ಯಗಳು ನಡೆದಿವೆ. ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ಬರೋಬ್ಬರಿ 222 ರನ್‌ಗಳ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 402 ರನ್‌ ಕಲೆಹಾಕಿ ಜಮ್ಮು ಕಾಶ್ಮೀರ ತಂಡಕ್ಕೆ ಗೆಲ್ಲಲು 403 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಜಮ್ಮು ಕಾಶ್ಮೀರ 30.4 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಕರ್ನಾಟಕ ಇನ್ನಿಂಗ್ಸ್: ಕರ್ನಾಟಕದ ಪರ ಆರಂಭಿಕರಾಗಿ ಆರ್‌ ಸಮರ್ಥ್‌ 120 ಎಸೆತಗಳಲ್ಲಿ 123 ರನ್ ಬಾರಿಸಿದರೆ, ಮಯಾಂಕ್‌ ಅಗರ್ವಾಲ್‌ 133 ಎಸೆತಗಳಲ್ಲಿ 157 ರನ್‌ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್‌ ಪಡಿಕ್ಕಲ್‌ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ ಸಹಿತ ಅಜೇಯ 71 ರನ್‌ ಚಚ್ಚಿದರೆ, ಮನೀಶ್‌ ಪಾಂಡೆ 14 ಎಸೆತಗಳಲ್ಲಿ ಅಜೇಯ 23 ರನ್‌ ಬಾರಿಸಿದರು.

ಕರ್ನಾಟಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಎಲ್ಲಿಯೂ ಯಶಸ್ವಿಯಾದ ಜಮ್ಮು ಕಾಶ್ಮೀರ ಬೌಲರ್‌ಗಳು ಹೈರಾಣಾದರು. ರಶಿಖ್‌ ಸಲಾಂ ಹಾಗೂ ಸಾಹಿಲ್ ಲೋತ್ರ ತಲಾ ಒಂದೊಂದು ವಿಕೆಟ್‌ ಪಡೆದರೆ ಇನ್ನುಳಿದ ಯಾವುದೇ ಬೌಲರ್ ಸಹ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ಜಮ್ಮು ಕಾಶ್ಮೀರ ಇನ್ನಿಂಗ್ಸ್: ಕರ್ನಾಟಕ ನೀಡಿದ ಬೃಹತ್‌ ಗುರಿಯನ್ನು ಬೆನ್ನಟ್ಟಲು ಮುಂದಾದ ಜಮ್ಮು ಕಾಶ್ಮೀರ ಅಕ್ಷರಶಃ ಮಕಾಡೆ ಮಲಗಿದೆ. ತಂಡದ ಪರ ನಾಯಕ ಶುಭಂ ಕಜುರಿಯಾ, ವಿವ್ರಂತ್‌ ಶರ್ಮಾ ಹಾಗೂ ಯುಧ್ವೀರ್‌ ಸಿಂಗ್‌ ಚರಕ್‌ ಹೊರತುಪಡಿಸಿ ಉಳಿದ ಯಾವುದೇ ಆಟಗಾರರೂ ಸಹ ಎರಡಂಕೆ ರನ್‌ ಮುಟ್ಟಲಿಲ್ಲ. ಶುಭಂ ಕಜುರಿಯಾ 29 ರನ್‌ ಕಲೆಹಾಕಿದರೆ, ವಿವ್ರಂತ್‌ ಶರ್ಮಾ 41 ರನ್‌ ಬಾರಿಸಿದರು ಹಾಗೂ ಯುಧ್ವೀರ್‌ ಸಿಂಗ್‌ ಚರಕ್‌ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 64 ರನ್‌ ಬಾರಿಸಿದರು. ಇನ್ನುಳಿದಂತೆ ಕಮ್ರಾನ್‌ ಇಕ್ಬಾಲ್‌ 5 ರನ್‌, ಹೆನನ್‌ ನಜೀರ್‌ ಮಲಿಕ್‌ 2 ರನ್‌, ಅಬ್ದುಲ್‌ ಸಮದ್‌ 2, ಫಜಿಲ್‌ ರಶೀದ್‌ 4 ರನ್‌, ಸಹಿಲ್‌ ಲೋತ್ರ 13 ರನ್‌, ಅಬಿದ್ ಮುಸ್ತಕ್‌ 1 ರನ್‌, ರಸಿಕ್‌ ದರ್‌ ಸಲಾಮ್‌ ಅಜೇಯ 5 ರನ್‌ ಹಾಗೂ ಉಮ್ರಾನ್‌ ಮಲಿಕ್‌ ಶೂನ್ಯ ಸುತ್ತಿದರು.

ಕರ್ನಾಟಕದ ಪರ ವಿಜಯ್‌ಕುಮಾರ್‌ ವೈಶಾಖ್‌ 4 ವಿಕೆಟ್‌ ಕಬಳಿಸಿದರೆ, ಕೃಷ್ಣಪ್ಪ ಗೌತಮ್‌ 2, ಜಗದೀಶ ಸುಚಿತ್‌, ವಾಸುಕಿ ಕೌಶಿಕ್‌ ಹಾಗೂ ವಿದ್ವತ್‌ ಕಾವೇರಪ್ಪ ತಲಾ ಒಂದೊಂದು ವಿಕೆಟ್‌ ಪಡೆದರು.

andolana

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

11 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

12 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

13 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

14 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

17 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

17 hours ago