ಕ್ರೀಡೆ

IND vs ENG 2nd Test: ಇಂಗ್ಲೆಂಡ್‌ 253 ರನ್‌ಗಳಿಗೆ ಆಲ್‌ಔಟ್; 2ನೇ ದಿನದಾಟದಂತ್ಯಕ್ಕೆ ಭಾರತಕ್ಕೆ 171 ರನ್‌ಗಳ ಮುನ್ನಡೆ‌

ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತ ಟೀಮ್‌ ಇಂಡಿಯಾ ನಿನ್ನೆಯಿಂದ ( ಫೆಬ್ರವರಿ 2 ) ವಿಶಾಖಪಟ್ಟಣದ ವೈಎಸ್‌ ರಾಜಶೇಖರ ರೆಡ್ಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಮೊದಲ ಎರಡನೇ ದಿನದಾಟದಂತ್ಯಕ್ಕೆ 171 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 336 ರನ್‌ ಗಳಿಸಿದ್ದ ಟೀಮ್‌ ಇಂಡಿಯಾ ಎರಡನೇ ದಿನದಾಟ ಆರಂಭಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್‌ಗಳಿಗೆ ಆಲ್‌ಔಟ್‌ ಆಯಿತು. ಯಶಸ್ವಿ ಜೈಸ್ವಾಲ್‌ 209 ರನ್‌ ಗಳಿಸಿ ಅಬ್ಬರಿಸಿದರು. ಅತ್ತ ತನ್ನ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಕೇವಲ 253 ರನ್‌ಗಳಿಗೆ ಆಲ್‌ಔಟ್‌ ಆಯಿತು. ಎರಡನೇ ದಿನವೇ ತನ್ನ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಭಾರತ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 28 ರನ್‌ ಗಳಿಸಿದೆ. ಯಶಸ್ವಿ ಜೈಸ್ವಾಲ್‌ ಅಜೇಯ 15 ಹಾಗೂ ನಾಯಕ ರೋಹಿತ್‌ ಶರ್ಮಾ ಅಜೇಯ 13 ರನ್‌ ಗಳಿಸಿದ್ದಾರೆ.

ಭಾರತದ ಮೊದಲ ಇನ್ನಿಂಗ್ಸ್:‌ ಯಶಸ್ವಿ ಜೈಸ್ವಾಲ್‌ 209, ರೋಹಿತ್‌ ಶರ್ಮಾ 14, ಶುಬ್‌ಮನ್‌ ಗಿಲ್‌ 34, ಶ್ರೇಯಸ್‌ ಅಯ್ಯರ್‌ 27, ರಜತ್‌ ಪಾಟಿದಾರ್‌ 32, ಅಕ್ಷರ್‌ ಪಟೇಲ್‌ 27 ಹಾಗೂ ಶ್ರೀಕರ್‌ ಭರತ್‌ 17 ರನ್‌, ರವಿಚಂದ್ರನ್‌ ಅಶ್ವಿನ್‌ 20, ಜಸ್‌ಪ್ರೀತ್‌ ಬುಮ್ರಾ 6, ಮುಖೇಶ್‌ ಕುಮಾರ್‌ ಶೂನ್ಯ ಹಾಗೂ ಕುಲ್‌ದೀಪ್‌ ಯಾದವ್‌ ಅಜೇಯ 8 ರನ್‌ ಗಳಿಸಿದರು.

ಇಂಗ್ಲೆಂಡ್‌ ಪರ ಜೇಮ್ಸ್‌ ಆಂಡರ್‌ಸನ್‌, ಶೋಯೆಬ್‌ ಬಷೀರ್‌ ಹಾಗೂ ರೆಹಾನ್‌ ಅಹ್ಮದ್‌ ತಲಾ 3 ವಿಕೆಟ್‌ ಪಡೆದರು ಮತ್ತು ಟಾಮ್‌ ಹಾರ್ಟ್ಲಿ ಒಂದು ವಿಕೆಟ್‌ ಕಬಳಿಸಿದರು.

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್:‌ ಜಾಕ್‌ ಕ್ವಾವ್ಲಿ 76, ಬೆನ್ ಡಕೆಟ್‌ 21, ಓಲ್ಲಿ ಪೋಪ್‌ 23, ಜೋ ರೂಟ್‌ 5, ಜಾನಿ ಬೇರ್‌ಸ್ಟೋವ್‌ 25, ನಾಯಕ ಬೆನ್‌ ಸ್ಟೋಕ್ಸ್‌ 47, ಬೆನ್‌ ಫೋಕ್ಸ್‌ 6, ರೆಹಾನ್‌ ಅಹ್ಮದ್‌ 6, ಟಾಮ್‌ ಹಾರ್ಟ್ಲಿ 21, ಜೇಮ್ಸ್‌ ಆಂಡರ್‌ಸನ್‌ 6 ಹಾಗೂ ಶೋಯೆಬ್ ಬಷೀರ್‌ ಅಜೇಯ 8 ರನ್‌ ಗಳಿಸಿದರು.

ಭಾರತದ ಪರ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್‌, ಕುಲ್‌ದೀಪ್‌ ಯಾದವ್‌ 3 ವಿಕೆಟ್‌ ಹಾಗೂ ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಪಡೆದರು.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago