ಕ್ರೀಡೆ

Paris Olympics 2024: ಸ್ಕೀಟ್‌ನಲ್ಲಿ ಭಾರತ ಕೈ ತಪ್ಪಿದ ಮತ್ತೊಂದು ಪದಕ

ಪ್ಯಾರಿಸ್‌: ಸ್ಕೀಟ್‌ ಮಿಶ್ರ ತಂಡವು ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲರಾದರು.

ಶೂಟರ್‌ಗಳಾದ ಮಹೇಶ್ವರಿ ಚೌಹಾನ್‌ ಹಾಗೂ ಅನಂತ್‌ಜೀತ್‌ ಸಿಂಗ್‌ ನರುಕಾ ಅವರು ಚೀನಾ ವಿರುದ್ಧ ಕೂದಲೆಳೆ ಅಂತರದಿಂದ ಸೋಲು ಕಂಡರು. ಆ ಮೂಲಕ ಒಂದೇ ದಿನ ಎರಡು ಪದಕಗಳನ್ನು ಭಾರತ ಕಳೆದುಕೊಂಡಿದೆ.

ಚೀನಾದ ಶೂಟರ್‌ಗಳಾದ ಜಿಯಾಂಗ್‌ ಯಿಟಿಂಗ್‌ ಹಾಗೂ ಜಿಯಾನ್ಲಿನ್‌ ಲ್ಯು ವಿರುದ್ಧ ನಡೆದ ಕಂಚಿನ ಪದಕ ಹೋರಾಟದಲ್ಲಿ ಕೇವಲ ಒಂದು ಅಂಕಗಳ ಅಂತರದಿಂದ ಸೋಲು ಕಂಡಿದೆ. 44-43 ಅಂಕಗಳಿಸಿ ಕೇವಲ ಒಂದು ಅಂಕದಿಂದ ಕಂಚಿನ ಪದಕ ಕಳೆದುಕೊಂಡಿತು.

ಇತ್ತ ಇಟಲಿ 45 ಅಂಕಗಳೊಂದಿಗೆ ಚಿನ್ನ ಗೆದ್ದರೇ, 44 ಅಂಕಗಳಿಸಿದ ಅಮೇರಿಕಾ ಬೆಳ್ಳಿ ಪದಕ ಗೆದ್ದು ಬೀಗಿತು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

1 hour ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

1 hour ago

ಓದುಗರ ಪತ್ರ: ಕಾವೇರಿ: ರಾಜ್ಯಕ್ಕೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…

1 hour ago

ಓದುಗರ ಪತ್ರ: ವಿಷಗಳಿಗೆ ಬರದಂತೆ ತಡೆಯೋಣ

ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು,…

1 hour ago

ಅಂಬಾರಿ ಹೊರುವ ಗಜರಾಜನ ಮೇಲೆ ದಯೆ ಇರಲಿ

ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ? ಮೈಸೂರಿನ ಮಹಾನ್ ಯದುಕುಲ…

1 hour ago

ಮೀಸಲಾತಿ ಪ್ರಕಟ: ಗರಿಗೆದರಿದ ರಾಜಕೀಯ

ಕೆ.ಬಿ.ರಮೇಶ ನಾಯಕ ಮೈಸೂರು: ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಜಿಪಂ, ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು…

2 hours ago