ಕ್ರೀಡೆ

IND vs RSA 1st test: ಭಾರತ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಹರಿಣ ಪಡೆ

ಸೆಂಚುರಿಯನ್‌: ಇಲ್ಲಿನ ಸೂಪರ್‌ ಸ್ಪೋರ್ಟ್ಸ್‌ ಪಾರ್ಕ್‌ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೆ ಟೆಸ್ಟ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೌಥ್‌ ಆಫ್ರಿಕಾ ತಂಡ ಗೆಲುವಿನ ಸಿಹಿ ಕಂಡಿದೆ.

ಟೀಂ ಇಂಡಿಯಾ ವಿರುದ್ಧ ತವರು ನೆಲದಲ್ಲಿ ಏಕದಿನ ಸರಣಿ ಸೋತಿದ್ದ ಹರಿಣ ಪಡೆ, ಮೊಲದ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ ಮೂರನೇ ದಿನದಲ್ಲಿ ದಕ್ಷಿಣ ಆಫ್ರಿಕಾ ತಂಡ 408 ಪೇರಿಸಿ ಟೀಂ ಇಂಡಿಯಾಗೆ 163 ರನ್‌ ಗಳ ಟ್ರಯಲ್‌ ನೀಡಿತು. ಅದರಂತೆ ಎರಡನೇ ಇನ್ನಿಂಗ್ಸ್‌ಗೆ ಬ್ಯಾಟ್‌ ಮಾಡಲು ಬಂದ ಟೀಂ ಇಂಡಿಯಾ ಆರಂಭದಿಂದಲೇ ಕುಸಿತ ಅನುಭವಿಸಿತು. ಸತತ ಎರಡನೇ ಇನ್ನಿಂಗ್ಸ್‌ ನಲ್ಲಿಯೂ ರಬಾಡ ಎಸೆತಕ್ಕೆ ಕ್ಷೀನ್‌ ಬೋಲ್ಡ್‌ ಆಗುವ ಮೂಲಕ ನಾಯಕ ರೋಹಿತ್‌ ಶರ್ಮಾ ಶೂನ್ಯಕ್ಕೆ ಓಟಾಗಿ ಹೊರನಡೆದರು. ಯಶಸ್ವಿ ಜೈಸ್ವಾಲ್‌ (5) ಕೂಡಾ ಹೆಚ್ಚುಹೊತ್ತು ಕ್ರೀಸ್‌ ನಲ್ಲಿ ಉಳಿಯಲಿಲ್ಲ.

ವಿರಾಟ್‌ ಕೊಹ್ಲಿ (76) ಜಾಗೃತಿಯ ಆಟವಾಡಿದರು ಸಹಾ ತಂಡವನ್ನು ಸಂಕಷ್ಟದಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಶುಭಮನ್‌ ಗಿಲ್‌ (26) ಹೊರತುಪಡಿಸಿ ಟೀಂ ಇಂಡಿಯಾದ ಬೇರೊಬ್ಬ ಆಟಗಾರರು ಎರಡಂಕಿ ದಾಟಲಿಲ್ಲ. ಅಂತಿಮವಾಗಿ ಭಾರತ ತಂಡ 34.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 131 ಗಳಿಸಿ 32 ರನ್‌ ಹಾಗೂ ಇನ್ನಿಂಗ್ಸ್‌ ಸೋಲು ಅನುಭವಿಸಿತು.

ಇತ್ತ ಪ್ರಬಲ ಬೌಲಿಂಗ್‌ ದಾಳಿ ನಡೆಸಿದ ಆಫ್ರಿಕಾ ತಂಡದ ಪರ ಕಗಿಸೋ ರಬಾಡ 2, ಬರ್ಜರ್‌ 4 ಮತ್ತು ಮಾರ್ಕೋ ಎನ್ಸನ್‌ 3 ವಿಕೆಟ್‌ ಕಬಳಿಸಿದರು.

ಆ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ ಗಳಿಗೆ ಸರ್ವಪತನ ಕಂಡಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ 5 ವಿಕೆಟ್‌ಗೆ 266 ರನ್‌ ಗಳಿಸಿ 11ರನ್‌ ಗಳ ಮುನ್ನಡೆ ಕಾಯುಕೊಂಡು ಮೂರನೇ ದಿನಕ್ಕೆ ಕಾಲಿಟ್ಟಿತು.

ಇಂದು ಭಾರತ ತಂಡದ ದಿಟ್ಟ ಬೌಲಿಂಗ್‌ ಪಡೆ 138 ರನ್‌ ಗಳಿಗೆ ಹರಿಣ ಪಡೆಯನ್ನು ಕಟ್ಟಿಹಾಕಿತು. ಸೌಥ್‌ ಆಫ್ರಿಕಾ ಪರ ಡೀನ್‌ ಎಲ್ಗರ್‌ 185 ರನ್‌ ಗಳಿಸಿದರು. ಇನ್ನು ಆಲ್‌ರೌಂಡರ್‌ ಮಾರ್ಕೊ ಎನ್ಸೆನ್‌ 84 ರನ್‌ ಗಳಿಸಿ ಭಾರತ ಬೌಲರ್‌ ಗಳನ್ನು ಕಾಡಿದರು. ಬೇರೆ ಯಾರಿಂದಲೂ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 108.4 ಓವರ್‌ಗಳಲ್ಲಿ 408 ರನ್‌ ಗಳಿಸಿ ಸರ್ವಪತನ ಕಂಡಿತು. ಭಾರತಕ್ಕೆ 163 ರನ್‌ ಗಳ ಟ್ರಯಲ್‌ ನೀಡಿತು.

ಟೀಂ ಇಂಡಿಯಾ ಪರ ಬುಮ್ರಾ 4 ವಿಕೆಟ್‌ ಪಡೆದು ಮಿಂಚಿದರು. ಸಿರಾಜ್‌ ಎರಡು ವಿಕೆಟ್‌ ಪಡೆದರೇ, ಅಶ್ವಿನ್‌, ಠಾಕೂರ್‌ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಡೀನ್‌ ಎಲ್ಗರ್‌

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌: ಕೆ.ಎಲ್‌ ರಾಹುಲ್‌ (101), ವಿರಾಟ್‌ ಕೊಹ್ಲಿ (38), ಶ್ರೇಯಸ್‌ ಅಯ್ಯರ್‌ (34); ರಬಾಡ 59/5, ಬರ್ಜರ್‌50/3
ದ. ಆಫ್ರಿಕಾ ಮೊದಲ ಇನ್ನಿಂಗ್ಸ್‌: ಡೀನ್‌ ಎಲ್ಗರ್‌ (185), ಮಾರ್ಕೋ ಎನ್ಸನ್‌ (84); ಬುಮ್ರಾ 69/4, ಸಿರಾಜ್‌ 91/2
ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌: ವಿರಾಟ್‌ ಕೊಹ್ಲಿ (76), ಶುಭ್‌ಮನ್‌ ಗಿಲ್‌ (26); ರಬಾಡ 32/2, ಬರ್ಜರ್‌ 33/4, ಎನ್ಸನ್‌ 36/3

andolanait

Recent Posts

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

10 mins ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

15 mins ago

ಮೈಸೂರಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ಹೇಗಿರಬೇಕು?

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…

19 mins ago

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

9 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

10 hours ago