ಲಂಡನ್: 2026ಕ್ಕೆ ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯಲಿರುವ 23ನೇ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಿಂದ ಕ್ರಿಕೆಟ್ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
2026ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಬಜೆಟ್ ಸ್ನೇಹಿಗೊಳಿಸುವ ಉದ್ದೇಶದಿಂದ ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಕುಸ್ತಿ ಹಾಗೂ ಶೂಟಿಂಗ್ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ನಿರ್ಧಾರ ಭಾರತದ ಮೇಲೆ ಪ್ರಭಾವ ಬೀರಲಿದ್ದು, ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಪದಕ ಗೆಲ್ಲುವ ಸಾಧ್ಯತೆ ಇದೆ. ಏಕೆಂದರೆ ಈ ಬಾರಿ ಹೊರಗಿಡಲಾಗಿರುವ ಹತ್ತು ಕ್ರೀಡೆಗಳಲ್ಲಿ ಭಾರತ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿತ್ತು. ಹೀಗೆ ಭಾರತ ಬಲಿಷ್ಠವಾಗಿರುವ ಕ್ರೀಡೆಗಳನ್ನು ಕ್ರೀಡಾಕೂಟದಿಂದ ತೆಗೆದುಹಾಕಿರುವುದು ಹಿನ್ನಡೆಯನ್ನುಂಟುಮಾಡಿದಂತಾಗಿದೆ.
ಯಾವ ಹತ್ತು ಕ್ರೀಡೆಗಳು ಕಾಮನ್‌ವೆಲ್ತ್‌ನಲ್ಲಿ ಇರುವುದಿಲ್ಲ; ಹಾಕಿ, ಕ್ರಿಕೆಟ್, ಟೇಬಲ್ ಟೆನಿಸ್, ಕುಸ್ತಿ, ಬ್ಯಾಡ್ಮಿಂಟನ್, ರಗ್ಬಿ ಸೆವೆನ್ಸ್, ಬೀಚ್ ವಾಲಿಬಾಲ್, ಮೌಂಟೈನ್ ಬೈಕಿಂಗ್, ಸ್ಕ್ವಾಷ್ ಮತ್ತು ರಿಥೆಮಿಕ್ ಜಿಮ್ನಾಸ್ಟಿಕ್.
ವಕ್ಫ್ ನಲ್ಲಿ ಜಮೀನು ಲೂಟಿಯಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ: ಪ್ರತಿಪಕ್ಷ ನಾಯಕ ಕೋಲಾರ: ವಕ್ಫ್ ಅಧಿಕಾರಿಗಳು ರೈತರ ಬಳಿ ಬಂದರೆ…
ಮಂಡ್ಯ: ಇಲ್ಲಿನ ಬೂದನೂರು ಗ್ರಾಮದ ಬಳಿ ಅನ್ಯಕ್ರಾಂತವಾಗದ ಜಮೀನಿನಲ್ಲಿ ಹುಕ್ಕಾ ಬಾರ್ ನಡೆಸಲು ಅನಧಿಕೃತ ಲೈಸೆನ್ಸ್ ನೀಡಿದ ಪಿಡಿಓ ವಿನಯ್‌ಕುಮಾರ್‌ನನ್ನು…
ಮಡಿಕೇರಿ: ಶನಿವಾರಸಂತೆಯ ವಿಜಯ ವಿನಾಯಕ ದೇವಾಲಯದಲ್ಲಿ ಭಾನುವಾರ ರಾತ್ರಿ ಬಾಗಿಲು ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊತ್ತು ಕಳ್ಳರು…
ಬೆಂಗಳೂರು: ಇನ್ನೂ ತಮ್ಮ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡದ ವಾಹನ ಸವಾರರಿಗೆ ರಾಜ್ಯ ಸರ್ಕಾರ…
ಮೈಸೂರು : ಸಾಂಸ್ಕೃತಿಕ ನಗರದಲ್ಲಿ ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು ಯುವತಿಯ ಸ್ನೇಹಿತರಿಬ್ಬರು ವಿಜಯನಗರದ ಖಾಸಗಿ ಹೋಟೆಲ್…
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.…