ನವದೆಹಲಿ: ಶತಕೋಟಿ ಭಾರತಿಯರೇ ಕಾತುರದಿಂದ ಎದುರು ನೋಡುತ್ತಿರುವ 2023ನೇ ಸಾಲಿನ ಐಸಿಸಿ ವಿಶ್ವಕಪ್ ಕ್ರಿಕೆಟ್ ಅಕ್ಟೋಬರ್ 5ರಿಂದ ಪ್ರಾರಂಭವಾಗಲಿದೆ.
ವಿಶೇಷವೆಂದರೆ ಇದೇ ಮೊದಲ ಬಾರಿಗೆ ಭಾರತ 48 ವರ್ಷದ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಪೂರ್ಣ ಪ್ರಮಾಣದ ಕ್ರಿಕೆಟ್‍ನ್ನು ಆಯೋಜಿಸಿದೆ.
ಈವರೆಗೂ ಏಷ್ಯಾ ಖಂಡಕ್ಕೆ ಕ್ರಿಕೆಟ್ ಆಯೋಜನೆ ಅವಕಾಶ ಸಿಕ್ಕಿದ್ದರೆ ಭಾರತ, ಬಾಂಗ್ಲಾ ದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ಸಹಭಾಗಿತ್ವದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಆಯೋಜನೆ ಮಾಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 5 ರಂದು ವಿಶ್ವಕಪ್ ಕ್ರಿಕೆಟ್‍ಗೆ ಚಾಲನೆ ದೊರಕಲಿದ್ದು, ನವೆಂಬರ್ 19ರಂದು ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಅಕ್ಟೋಬರ್ 5 ರಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಅಕ್ಟೋಬರ್ 8 ರಂದು ಭಾರತ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಸ್ಟ್ರೇಲಿಯ ಎದುರು ಎದುರಿಸಲಿದೆ.
ಅಕ್ಟೋಬರ್ 15 ರಂದು ಏಷ್ಯಾ ಖಂಡದ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 5 ಪಂದ್ಯಗಳು ನಡೆಯಲಿವೆ. ಇದರಲ್ಲಿ ಒಂದು ಕ್ವಾಲಿಫೈ ಪಂದ್ಯ ಕೂಡ ಇದೆ. ಈ ಹಿಂದೆ ಭಾರತ 2011ರಲ್ಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು. ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ದೋನಿ ನೇತೃತ್ವದ ತಂಡ ಶ್ರೀಲಂಕಾವನ್ನು ಮಣಿಸಿ ಪರಾಭವಗೊಳಿಸಿ 2ನೇ ಬಾರಿಗೆ ವಿಶ್ವ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
2015 ಮತ್ತು 2019ರಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯ ತಂಡಗಳು ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಜಂಟಿಯಾಗಿ ಆಯೋಜನೆ ಮಾಡಿದ್ದವು. ವಿಶೇಷವೆಂದರೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿವೆ. 1992, 1996, 1999, 2003, 2011, 2015, 2019ರಲ್ಲಿ ಎದುರಾಳಿಯಾಗಿದ್ದವು. ಆದರೆ ವಿಶ್ವಕಪ್‍ನಲ್ಲಿ ಭಾರತದ ಎದುರು ಪಾಕಿಸ್ತಾನ ಈವರೆಗೂ ಒಂದೇ ಒಂದು ಬಾರಿ ಗೆಲ್ಲಲು ಸಾಧ್ಯವಾಗಿಲ್ಲ. 2019ರಲ್ಲಿ ಇಂಗ್ಲೆಂಡ್‍ನ ಮ್ಯಾಂಚಿಸ್ಟರ್ನಲ್ಲಿ ನಡೆದ ಪಂದ್ಯದಲ್ಲಿ ನಡೆದ ಪಾಕಿಸ್ತಾನವನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಪಾಕಿಸ್ತಾನವನ್ನು 89 ರನ್‍ಗಳಿಂದ ಪರಾಭವಗೊಳಿಸಿತ್ತು.
ಈ ಬಾರಿಯ ಐಸಿಸಿ ವಲ್ರ್ಡ್ ಕಪ್‍ನಲ್ಲಿ ಹಾಲಿ ಇರುವ ನಿಯಮಗಳಲ್ಲಿ ಹೆಚ್ಚಿನ ಬದಲಾವಣೆ ಮಾಡದಿರಲು ಬಿಸಿಸಿಐ ತೀರ್ಮಾನಿಸಿದೆ.
ಏಕದಿನ ವಿಶ್ವಕಪ್ ವೇಳಾಪಟ್ಟಿ ರಿಲೀಸ್:
ಅಕ್ಟೋಬರ್ 5ರಂದು ಇಂಗ್ಲೆಂಡ್-ಕಿವೀಸ್ ಪಂದ್ಯ, ಅ.8ರಂದು ಚೆನ್ನೈನಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ, ಅ.11ರಂದು ಡೆಲ್ಲಿಯಲ್ಲಿ ಭಾರತ-ಅಪ್ಘಾನಿಸ್ತಾನ ಪಂದ್ಯ, ಅ.15ರಂದು ಅಹ್ಮದಾಬಾದ್‍ನಲ್ಲಿ ಭಾರತ-ಪಾಕ್ ಪಂದ್ಯ, ಅ.19ರಂದು ಪುಣೆಯಲ್ಲಿ ಭಾರತ-ಬಾಂಗ್ಲಾ ಪಂದ್ಯ, ಅ.22ರಂದು ಧರ್ಮಶಾಲಾದಲ್ಲಿ ಭಾರತ-ಕಿವೀಸ್ ಪಂದ್ಯ, ಅ.29ರಂದು ಲಕ್ನೋದಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ, ನ.2ರಂದು ಮುಂಬೈನಲ್ಲಿ ಭಾರತ-ಕ್ವಾಲಿಫೈಯರ್-2 ಪಂದ್ಯ, ನ.5ರಂದು ಕೋಲ್ಕತ್ತಾದಲ್ಲಿ ಭಾರತ-ಆಫ್ರಿಕಾ ಪಂದ್ಯ, ನ.11ರಂದು ಬೆಂಗಳೂರಿನಲ್ಲಿ ಭಾರತ-ಕ್ವಾಲಿಫೈಯರ್-1 ಪಂದ್ಯ, ನ.15ರಂದು ಮುಂಬೈನಲ್ಲಿ ಮೊದಲ ಸೆಮಿಫೈನಲ್, ನ.16ರಂದು ಕೋಲ್ಕತ್ತಾದಲ್ಲಿ 2ನೇ ಸೆಮಿಫೈನಲ್, ನ.19ರಂದು ಅಹಮದಾಬಾದ್‍ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೀಮ್ ಇಂಡಿಯಾ ಒಟ್ಟು ಒಂಭತ್ತು ಪಂದ್ಯಗಳನ್ನ ಆಡಲಿದೆ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಕ್ವಾಲಿಫೈಯರ್ 1, ಕ್ವಾಲಿಫೈಯರ್ 2 ವಿರುದ್ಧ ಸೆಣೆಸಾಟ ನಡೆಯಲಿದೆ.
ಪಾಕಿಸ್ತಾನದ ಆಕ್ಷೇಪಗಳ ಹೊರತಾಗಿಯೂ, ಭಾರತ ಹಾಗೂ ಪಾಕ್ ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್‍ನಲ್ಲೇ ನಡೆಯಲಿದೆ.
ಈ ಪಂದ್ಯವನ್ನು ಚೆನ್ನೈ, ಬೆಂಗಳೂರು ಅಥವಾ ಕೋಲ್ಕತ್ತಾಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ, ಇದೀಗ ಅಂತಿಮವಾಗಿ ಅಹ್ಮದಾಬಾದ್‍ನಲ್ಲೇ ನಡೆಸಲು ಒಪ್ಪಿಗೆ ನೀಡಲಾಗಿದೆ.
ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ 1,30,000 ಪ್ರೇಕ್ಷಕರಿಗೆ ಆತಿಥ್ಯ ವಹಿಸುತ್ತದೆ. ಇಲ್ಲಿ ಭಾರತ-ಪಾಕ್ ಪಂದ್ಯ ನಡೆದರೆ ಸ್ಟೇಡಿಯಂ ಹೌಸ್‍ಫುಲ್ ಆಗಲಿದ್ದು, ಟಿಕೆಟ್‍ಗಳಿಗೆ ಸಂಪೂರ್ಣ ಮಾರಾಟವಾಗುವ ನಿರೀಕ್ಷೆಯಿದೆ. ಹೀಗಾಗಿ ಬಿಸಿಸಿಐ ಅಥವಾ ಐಸಿಸಿ ಸ್ಥಳವನ್ನು ಬದಲಾಯಿಸಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ.
ಏಕದಿನ ವಿಶ್ವಕಪ್ ವೇಳಾಪಟ್ಟಿ
ಅಕ್ಟೋಬರ್- 5- ಇಂಗ್ಲೆಂಡ್-ನ್ಯೂಜಿಲೆಂಡ್ ( ಅಹಮ್ಮದಾಬಾದ್)
ಅಕ್ಟೋಬರ್- 6- ಪಾಕಿಸ್ತಾನ-ಕ್ವಾಲಿಫೈಯರ್ 1 ತಂಡ( ಹೈದರಾಬಾದ್)
ಅಕ್ಟೋಬರ್- 7- ಬಾಂಗ್ಲಾದೇಶ-ಆಫ್ಘಾನಿಸ್ತಾನ (ಧರ್ಮಶಾಲಾ)
ಅಕ್ಟೋಬರ್- 7- ಸೌತ್ ಆಫ್ರಿಕಾ-ಕ್ವಾಲಿಫೈಯರ್ 2 ತಂಡ (ದೆಹಲಿ)
ಅಕ್ಟೋಬರ್- 8- ಭಾರತ-ಆಸ್ಟ್ರೇಲಿಯಾ (ಚೆನ್ನೈ)
ಅಕ್ಟೋಬರ್- 9 -ನ್ಯೂಜಿಲೆಂಡ್-ಕ್ವಾಲಿಫೈಯರ್ (ಹೈದರಾಬಾದ್)
ಅಕ್ಟೋಬರ್ 10- ಇಂಗ್ಲೆಂಡ್ -ಬಾಂಗ್ಲಾದೇಶ (ದರ್ಮಶಾಲಾ)
ಅಕ್ಟೋಬರ್ 11- ಭಾರತ-ಅಪ್ಘಾನಿಸ್ತಾನ (ದೆಹಲಿ)
ಅಕ್ಟೋಬರ್ 12- ಪಾಕಿಸ್ತಾನ-ಕ್ವಾಲಿಫೈಯರ್ 2 ತಂಡ (ಹೈದರಾಬಾದ್)
ಅಕ್ಟೋಬರ್- 13 ಆಸ್ಟ್ರೇಲಿಯಾ-ಸೌತ್ ಆಫ್ರಿಕಾ (ಲಖನೌ)
ಅಕ್ಟೋಬರ್ 14 ಇಂಗ್ಲೆಂಡ್-ಆಫ್ಘಾನಿಸ್ತಾನ (ದೆಹಲಿ)
ಅಕ್ಟೋಬರ್ -14-ನ್ಯೂಜಿಲೆಂಡ್-ಬಾಂಗ್ಲಾದೇಶ (ಚೆನ್ನೈ)
ಅಕ್ಟೋಬರ್- 15- ಭಾರತ-ಪಾಕಿಸ್ತಾನ ( ಅಹಮ್ಮದಾಬಾದ್)
ಅಕ್ಟೋಬರ್- 16 ಆಸ್ಟ್ರೇಲಿಯಾ-ಕ್ವಾಲಿಫೈಯರ್ 2 ತಂಡ ( ಲಖನೌ)
ಅಕ್ಟೋಬರ್ -17- ಸೌತ್ ಆಫ್ರಿಕಾ-ಕ್ವಾಲಿಫೈಯರ್ 1 ತಂಡ (ದರ್ಮಶಾಲಾ)
ಅಕ್ಟೋಬರ್- 18: ನ್ಯೂಜಿಲೆಂಡ್-ಆಫ್ಘಾನಿಸ್ತಾನ (ಚೆನ್ನೈ)
ಅಕ್ಟೋಬರ್ 19 ಭಾರತ-ಬಾಂಗ್ಲಾದೇಶ ( ಪುಣೆ)
ಅಕ್ಟೋಬರ್ -20 ಆಸ್ಟ್ರೇಲಿಯಾ-ಪಾಕಿಸ್ತಾನ (ಬೆಂಗಳೂರು)
ಅಕ್ಟೋಬರ್- 21-ಇಂಗ್ಲೆಂಡ್-ಸೌತ್ ಆಫ್ರಿಕಾ (ಮುಂಬೈ)
ಅಕ್ಟೋಬರ್- 22- ಭಾರತ-ನ್ಯೂಜಿಲೆಂಡ್ (ಧರ್ಮಶಾಲಾ)
ಅಕ್ಟೋಬರ್ -23- ಪಾಕಿಸ್ತಾನ-ಆಫ್ಘಾನಿಸ್ತಾನ (ಚೆನ್ನೈ)
ಅಕ್ಟೋಬರ್- 24- ಸೌತ್ ಆಫ್ರಿಕಾ-ಬಾಂಗ್ಲಾದೇಶ (ಮುಂಬೈ)
ಅಕ್ಟೋಬರ್- 25- ಆಸ್ಟ್ರೇಲಿಯಾ-ಕ್ವಾಲಿಫೈಯರ್ 1 ತಂಡ (ದೆಹಲಿ)
ಅಕ್ಟೋಬರ್- 26- ಇಂಗ್ಲೆಂಡ್-ಕ್ವಾಲಿಫೈಯರ್ 2 ತಂಡ (ಬೆಂಗಳೂರು)
ಅಕ್ಟೋಬರ್- 27- ಪಾಕಿಸ್ತಾನ-ಸೌತ್ ಆಫ್ರಿಕಾ (ಚೆನ್ನೈ)
ಅಕ್ಟೋಬರ್ -28- ಕ್ವಾಲಿಫೈರ್ 1 ತಂಡ -ಬಾಂಗ್ಲಾದೇಶ ( ಕೋಲ್ಕತಾ)
ಅಕ್ಟೋಬರ್ -28- ಆಸ್ಟ್ರೇಲಿಯಾ-ನ್ಯೂಜಿಲೆಂಡ್ (ಧರ್ಮಶಾಲಾ)
ಅಕ್ಟೋಬರ್- 29- ಭಾರತ-ಇಂಗ್ಲೆಂಡ್ (ಲಖನೌ)
ಅಕ್ಟೋಬರ್- 30- ಆಫ್ಘಾನಿಸ್ತಾನ-ಕ್ವಾಲಿಯಫೈರ್ 1 (ಪುಣೆ)
ಅಕ್ಟೋಬರ್- 31- ಪಾಕಿಸ್ತಾನ-ಬಾಂಗ್ಲಾದೇಶ (ಕೋಲ್ಕತಾ)
ನವೆಂಬರ್ 1- ನ್ಯೂಜಿಲೆಂಡ್-ಸೌತ್ ಆಫ್ರಿಕಾ (ಪುಣೆ)
ನವೆಂಬರ್ -2 ಭಾರತ-ಕ್ವಾಲಿಫೈಯರ್ (ಮುಂಬೈ)
ನವೆಂಬರ್- 3- ಕ್ವಾಲಿಫೈಯರ್ 1-ಆಫ್ಘಾನಿಸ್ತಾನ (ಲಖನೌ)
ನವೆಂಬರ್- 4-:ನ್ಯೂಜೆಲೆಂಡ್-ಪಾಕಿಸ್ತಾನ (ಬೆಂಗಳೂರು)
ನವೆಂಬರ್- 5- ಭಾರತ-ದ.ಆಫ್ರಿಕಾ ಪಂದ್ಯ (ಕೊಲ್ಕತ್ತಾ)
ನವೆಂಬರ್- 6 ಬಾಂಗ್ಲಾದೇಶ-ಕ್ವಾಲಿಫೈಯರ್ (ದೆಹಲಿ)
ನವೆಂಬರ್- 7-ಆಸ್ಟ್ರೇಲಿಯಾ-ಆಫ್ಘಾನಿಸ್ತಾನ (ಮುಂಬೈ)
ನವೆಂಬರ್- 8 ಇಂಗ್ಲೆಂಡ್-ಕ್ವಾಲಿಫೈಯರ್ 1 (ಪುಣೆ)
ನವೆಂಬರ್- 9- ನ್ಯೂಜಿಲೆಂಡ್-ಕ್ವಾಲಿಫೈಯರ್ 2 (ಬೆಂಗಳೂರು)
ನವೆಂಬರ್- 10-ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ (ಅಹಮ್ಮಾದಾಬಾದ್)
ನವೆಂಬರ್ – 11– ಭಾರತ-ಕ್ವಾಲಿಫೈಯರ್ 1 (ಬೆಂಗಳೂರು)
ನವೆಂಬರ್- 12 ಇಂಗ್ಲೆಂಡ್-ಪಾಕಿಸ್ತಾನ (ಕೋಲ್ಕತಾ)
ನವೆಂಬರ್- 12 ಆಸ್ಟ್ರೇಲಿಯಾ-ಬಾಂಗ್ಲಾದೇಶ (ಪುಣೆ)
ನವೆಂಬರ್- 15 ಮುಂಬೈನಲ್ಲಿ ಮೊದಲ ಸೆಮಿಫೈನಲ್
ನವೆಂಬರ್- 16 ಕೋಲ್ಕತ್ತಾದಲ್ಲಿ 2ನೇ ಸೆಮಿಫೈನಲ್
ನವೆಂಬರ್ -19 ಅಹ್ಮದಾಬಾದ್‍ನಲ್ಲಿ ಫೈನಲ್ ಪಂದ್ಯ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…