ನವದೆಹಲಿ : ಮಾಜಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ಶೀತಲ ಸಮರ ಎಲ್ಲರಿಗೂ ಗೊತ್ತೇ ಇದೆ. ಆದರೆ, ಇತ್ತೀಚೆಗೆ ಸೌರವ್ ಗಂಗೂಲಿ, ವಿರಾಟ್ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದು, ತಾವು ವಿರಾಟ್ ನಾಯಕತ್ವದಿಂದ ಕೆಳಗಿಳಿಯಲು ಹೊಣೆಗಾರರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಿಯಾಲಿಟಿ ಶೋ ದಾದಾಗಿರಿ ಅನ್‌ಲಿಮಿಟೆಡ್ ಸೀಸನ್-೧೦ ರಲ್ಲಿ ಭಾಗವಹಿಸಿ ಮಾತನಾಡಿರುವ ದಾದಾ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಅವರನ್ನು ನಾನು ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಸಿಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಇದರ ಬಗ್ಗೆ ಮಾತನಾಡಿದ್ದೇನೆ. ಭಾರತ ತಂಡವು ೨೦೨೧ರ ವಿಶ್ವಕಪ್ ನಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ವಿರಾಟ್ ಟಿ೨೦ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಹೀಗಾಗಿ ಅವರು ನಾಯಕತ್ವದಿಂದ ವಹಿಸಲು ಆಸಕ್ತಿ ಇಲ್ಲದೇ ಇರುವುದರಿಂದ ನಾಯಕತ್ವ ತೊರೆಯಲು ನಿರ್ಧಿರಿಸಿದ್ದಾಗ, ನೀವು ತೊರೆಯುವುದಾದರೇ ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್‌ನಿಂದ ಹಿಂದೆ ಸರಿಯುವುದು ಉತ್ತಮ ಎಂದು ಸಲಹೆ ನೀಡಿದ್ದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಆಗ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ, ಏಕದಿನ ಹಾಗೂ ಟೆಸ್ಟ್ ನಾಯಕತ್ವದಲ್ಲಿ ಮುಂದುವರಿಯಲು ಕೊಹ್ಲಿ ಇಚ್ಛಿಸುತ್ತಾರೆ. ಆದರೆ, ಟಿ-20 ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಬಿಸಿಸಿಐ ಎಂದಿಗೂ ವಿರಾಟ್ ಅವರನ್ನು ಕೇಳಲಿಲ್ಲ ಎಂದು ಹೇಳುವ ಮೂಲಕ ಗಂಗೂಲಿ ಅಚ್ಚರಿ ಮೂಡಿಸಿದ್ದರು. ಕೊಹ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಾನು ಹೊಣೆಗಾರನಲ್ಲ ಎಂದಿದ್ದು, ವಿರಾಟ್ ಮತ್ತು ಗಂಗೂಲಿನ ನಡುವಿನ ಬಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎಂದು ನಂಬಲಾಗಿತ್ತು.
ಭಾರತೀಯ ಕ್ರಿಕೆಟ್‌ನ ಸುಧಾರಣೆಗಾಗಿ ಕೆಲಸ ಮಾಡಲು ನನ್ನನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಎಂದು ಗಂಗೂಲಿ ಹೇಳಿದ್ದರು
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ಅವರು ಎಲ್ಲಾ ಮೂರು ಮಾದರಿಗೆ ನಾಯಕತ್ವ ವಹಿಸಿಕೊಳ್ಳಲು ನಿರಾಕರಿಸಿದರು, ಆದರೆ ನಾನು ಅವರಿಗೆ ನಾಯಕತ್ವ ವಹಿಸಿಕೊಳ್ಳುವಂತೆ ಅವನ ಮನವೋಲಿಸಲು ಪ್ರಯತ್ನಿಸಿದ್ದೆ. ಬಹುಶಃ ಇದರಲ್ಲಿ ನನ್ನ ಕೊಡುಗೆ ಇರಬಹುದು ಎಂದರು.
2021ರ ಟಿ-20 ವಿಶ್ವಕಪ್‌ನಲ್ಲಿ ಕಳಪೆ ಅಭಿಯಾನ ಕೈಗೊಂಡ ನಂತರ ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದರು. ಆಗ ಕೊಹ್ಲಿ ಹಾಗೂ ಗಂಗುಲಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕೊಹ್ಲಿ ಆ ನಂತರ ಏಕದಿನ ಹಾಗೂ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು. ಇದಾದ ನಂತರ ಐಪಿಎಲ್-೨೩ ರಲ್ಲಿ ಡೆಲ್ಲಿ ವಿರುದ್ಧದ ಆರ್‌ಸಿಬಿ ಪಂದ್ಯದಲ್ಲಿ ಕೊಹ್ಲಿ ಮತ್ತು ಗಂಗೂಲಿ ಹಸ್ತಲಾಘವ ನೀಡದೆಯೇ ಸಾಗಿದ್ದು ಮತ್ತು ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದು ಡೆಲ್ಲಿ ಡಗ್‌ಔಟ್ ಕಡೆ ನೋಡಿ ಸಂಭ್ರಮಿಸುತ್ತಾ ಹೋಗಿದ್ದು, ಈ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಭೀತು ಪಡಿಸುವಂತಿತ್ತು.
ಈ ಎಲ್ಲಾ ವಿಚಾರಗಳ ಬಗ್ಗೆ ದಾದಾ ಮತ್ತೊಮ್ಮೆ ಮೌನ ಮುರಿದು ಮಾತನಾಡಿದ್ದು, ವಿರಾಟ್ ನಾಯಕತ್ವದಿಂದ ಇಳಿಯಲು ನಾನು ಕಾರಣರಲ್ಲ ಎಂದು ಹೇಳಿದ್ದು, ವಿರಾಟ್ ಮುಂದಿನ ನಡೆ ಬಗ್ಗೆ ಹಲವಾರು ಕುತೂಹಲ ಮತ್ತು ಚರ್ಚೆಗಳು ಹೆಚ್ಚಾಗಿವೆ.
ಹೊಸದಿಲ್ಲಿ : 77ನೇ ಗಣರಾಜ್ಯೋತ್ಸವದ ಅಂಗವಾಗಿ ದಿಲ್ಲಿಯ ಕರ್ತವ್ಯ ಪಥದಲ್ಲಿ ಭಾರತವು ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ದೇಶದ ಸೇನಾ ಶಕ್ತಿ ಪ್ರದರ್ಶನ…
ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ,…
ಉಡುಪಿ : ಐಲ್ಯಾಂಡ್‌ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ…
ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…
ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…
ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…