ನೈರೋಬಿ: ಬೆಂಗಳೂರಿನ ಅದಿತಿ ಅಶೋಕ್ ಭಾನುವಾರ ಇಲ್ಲಿ ಕೊನೆಗೊಂಡ ಮ್ಯಾಜಿಕಲ್ ಕೀನ್ಯಾ ಲೇಡೀಸ್ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಲೇಡಿಸ್ ಯುರೋಪಿಯನ್ ಟೂರ್ (ಎಲ್‌ಇಟಿ)ನಲ್ಲಿ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ನೈರೋಬಿಯಲ್ಲಿ ಉತ್ತಮವಾಗಿ ಆಡಿದ ಅವರು 9 ಶಾಟ್ಸ್ ಅಂತರದಿಂದ ಗೆಲುವು ಸಾಧಿಸಿದರು. ಮುಂದಿನ ತಿಂಗಳು 25 ವರ್ಷಕ್ಕೆ ಕಾಲಿಡಲಿರುವ ಅದಿತಿ, ನವೆಂಬರ್ 2017 ರಲ್ಲಿ ಅಬುಧಾಬಿಯಲ್ಲಿ ಕೊನೆಯ ಬಾರಿಗೆ ಜಯಗಳಿಸಿದ್ದರು. ಅಲ್ಲಿಂದ ಬಹುಕಾಲದವರೆಗೆ ಪ್ರಶಸ್ತಿ ಬರ ಅನುಭವಿಸಿದ್ದರು.ಹೀರೋ ವುಮೆನ್ಸ್ ಇಂಡಿಯನ್ ಓಪನ್ ಮತ್ತು ಕತಾರ್ ಲೇಡೀಸ್ ಓಪನ್‌ನಲ್ಲಿ ಕಿರೀಟ ಧರಿಸಿದ್ದಾರೆ.
ಎಲ್‌ಇಟಿಯಲ್ಲಿ ಅದಿತಿಯ ದಾಖಲೆಯು ತುಂಬಾ ಉತ್ತಮವಾಗಿದೆ. ಏಕೆಂದರೆ ಅವರು ನಾಲ್ಕು ಬಾರಿ ಗೆದ್ದಿರುವುದಲ್ಲದೆ, 20 ಸಲ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ, ಮೊದಲ ಎಲ್‌ಪಿಜಿಎಯನ್ನು ಜಯಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಒಂದೊಮ್ಮೆ ಕನಸು ಕೈಗೂಡಿದರೆ ಈ ಸಾಧನೆ ಮಾಡಿದ ಭಾರತದ ಮೊದಲ ಗಾಲ್ಫ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದಿತಿ ಅವರು ಕೂದಲೆಳೆಯ ಅಂತರದಲ್ಲಿ ಪದಕವನ್ನು ಕೈತಪ್ಪಿಸಿಕೊಂಡಿದ್ದರು. ಅಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದರು. ಅದಿತಿ ನಾಲ್ಕು ಸುತ್ತುಗಳಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಅವರು ಕ್ರಮವಾಗಿ 67, 70, 69 ಮತ್ತು 74 ಸ್ಟ್ರೋಕ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿ ಒಟ್ಟು 280 ಸ್ಕೋರ್ ಮಾಡಿದರು.
ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ…
ಸಿದ್ದಾಪುರ: ನಿಷೇದಿತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ…
ಟಿ.ನರಸೀಪುರ: ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್ ಫ್ಯಾಕ್ಟರಿ ಆವರಣದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು…
ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…