ಪ್ಯಾರಿಸ್: ಪೋಲೆಂಡ್‌ನ ಇಗಾ ಸ್ವಿಯಾಟೆಕ್ “ಪ್ಯಾರಿಸ್ ರಾಣಿ’”ಪಟ್ಟದಲ್ಲಿ ಮುಂದುವರಿದಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಅವರು ಶನಿವಾರದ ಪ್ರಶಸ್ತಿ ಕಾಳಗದಲ್ಲಿ ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಕ್ಸೋವಾ ಅವರ ಆಟವನ್ನು 6-2, 5-7, 6-4 ಅಂತರದಿಂದ ಮುಗಿಸಿದರು.
ಮೊದಲ ಸೆಟ್‌ನ್ನು ಸುಲಭದಲ್ಲಿ ವಶಪಡಿಸಿಕೊಂಡ ಸ್ವಿಯಾಟೆಕ್, ದ್ವಿತೀಯ ಸೆಟ್‌ನಲ್ಲಿ ಎಡವಿದರು. ನಿರ್ಣಾಯಕ ಸೆಟ್‌ನ ಒಂದು ಹಂತದಲ್ಲಿ ಹಿನ್ನಡೆಯಲ್ಲಿದ್ದರು. ಆದರೆ ಮುಕ್ಸೋವಾಗೆ ಅದೃಷ್ಟ ಕೈಕೊಟ್ಟಿತು.
ಈ ಜಯದೊಂದಿಗೆ ಸ್ವಿಯಾಟೆಕ್ ಮೂರೂ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಜಯಭೇರಿ ಮೊಳಗಿಸಿದಂತಾಯಿತು. ಮುಕ್ಸೋವಾ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಇರಿಸಿದ್ದರು.
22 ವರ್ಷದ ಸ್ವಿಯಾಟೆಕ್ 2005-07ರ ಬಳಿಕ ಇಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದು ಜಸ್ಟಿನ್ ಹೆನಿನ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದರು. ಹಾಗೆಯೇ ತಮ್ಮ ಮೊದಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಫೈನಲ್‌ಗಳನ್ನು ಗೆದ್ದ 3ನೇ ಆಟಗಾರ್ತಿ ಎನಿಸಿದರು. ಉಳಿ ದಿಬ್ಬರೆಂದರೆ ಮೋನಿಕಾ ಸೆಲೆಸ್ ಮತ್ತು ನವೋಮಿ ಒಸಾಕಾ.
ಮುಂಬೈ : ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ…
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರಾಚನೆಗೆ ಒತ್ತಡ ಹೆಚ್ಚಾಗಿದ್ದು, 20ಕ್ಕೂ ಹೆಚ್ಚು ಶಾಸಕರು ಇಂದು (ಭಾನುವಾರ)…
ಕನ್ನಡಕ್ಕೆ ಶ್ರೇಷ್ಠ ದಾಂಪತ್ಯ ಗೀತೆಗಳನ್ನು ನೀಡಿದ, ಪ್ರೇಮಕವಿಯೆಂದೇ ಹೆಸರಾದ ನಾಡಿನ ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಗೌರವಾರ್ಥವಾಗಿ ಹುಟ್ಟೂರಾದ ಕಿಕ್ಕೇರಿಯ…
ಮೈಸೂರಿನಲ್ಲಿ ಸ್ವಲ್ಪ ಮಳೆಯಾದರೂ ರೂಪಾನಗರ ಬಡಾವಣೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವೇಳೆ ಮಳೆ ಬಂದರಂತೂ ವಿದ್ಯುತ್ ಸಂಪರ್ಕಕಲ್ಪಿಸುವುದು ಬೆಳಿಗ್ಗೆಯೇ.…
ದೆಹಲಿ ಕಣ್ಣೋಟ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಳೆದ ಒಂದೂವರೆ ತಿಂಗಳಿಂದ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಇಂಧನ ಮತ್ತು ಅನಿಲ…
ಕನ್ನಡದ ನಾಲ್ವರು ಖ್ಯಾತ ಕವಿಗಳು ತಮ್ಮ ಮೊದಲ ಕವಿತೆಯ ನೆನಪಲ್ಲಿ ಹೇಗೆ ಕಳೆದು ಹೋಗಿದ್ದಾರೆ ನೋಡಿ. ಬಹುಶಃ, ಮೊದಲ ಕವಿತೆ…