ಕ್ರೀಡೆ

ಫಿಫಾ ವಿಶ್ವ ಕಪ್ ಕೆನಡಾ ವಿರುದ್ಧ ಬೆಲ್ಜಿಯಂ 1-0 ಗೋಲಿನಿಂದ ವಿಜಯ

ದೋಹಾ: ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಎಫ್ ಬಣದ ಬೆಲ್ಜಿಯಂ ತಂಡವು ಮಿಚಿ ಬಥ್‌ಶುವಾಯಿ ಅವರ ಗೋಲು ಮತ್ತು ಥಿಬಾಟ್‌ ಕೋರ್ಟೊಯಿಸ್‌ ಅವರ ಅದ್ಭುತ ನಿರ್ವಹಣೆಯಿಂದ ಬಲಿಷ್ಟ ಕೆನಡಾ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು.

ಈ ಗೆಲುವಿನಿಂದ ಬೆಲ್ಜಿಯಂ ಬಣದಲ್ಲಿ ಮೊದಲ ಶ್ರೇಯಾಂಕ ಪಡೆಯಿತು. ರೊಮೆಲು ಲುಕಾಕು ಅವರು ಗಾಯಗೊಂಡ ಕಾರಣ ಬೆಲ್ಜಿಯಂನ ದಾಳಿಯ ನೇತೃತ್ವ ಬಥ್‌ಶುವಾಯಿ
ವಹಿಸಿದ್ದರು.

ಪಂದ್ಯದ ಮೊದಲ ಅವಧಿಯಲ್ಲಿ ಬಥ್‌ಶುವಾಯಿ ಗೋಲು ಹೊಡೆದು ಮುನ್ನಡೆ ಕೊಟ್ಟರು. ಆನಂತರ ಥಿಬಾಟ್‌ ಕೋರ್ಟೊಯಿಸ್‌ ಅವರು ಕೆನಡಾದ ಅಲೊನ್ಸೊ ಡೇವಿಸ್‌ ಅವರಿಗೆ ಲಭಿಸಿದ ಪೆನಾಲ್ಟಿ ಅವಕಾಶವನ್ನು ತಡೆದು ಕೆನಡಾ ಸಮಬಲ ಸಾಧಿಸುವ ಅವಕಾಶ ತಪ್ಪಿಸಿದರು.

ಕೆನಡಾ ತಂಡವು ಸಹ ಅತ್ಯಂತ ಉತ್ಸಾಹದಿಂದ ಆಟ ಆರಂಭಿಸಿ ಭರ್ಜರಿ ಪ್ರದರ್ಶನ ನೀಡುವ ಸೂಚನೆ ನೀಡಿತ್ತು. ಪಂದ್ಯದ 11ನೇ ನಿಮಿಷದಲ್ಲಿ ಬೆಲ್ಜಿಯಂನ ಯಾನ್ನಿಕ್‌ ಕ್ಯಾರಾಸ್ಕೊ ಚೆಂಡನ್ನು ಕೈಯಲ್ಲಿ ಮುಟ್ಟಿದ ಕಾರಣ ಕೆನಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಅಲ್ಫಾನ್ಸೊ ಡೇವಿಸ್‌ ಪೆನಾಲ್ಟಿ ಹೊಡೆಯುವ ಅವಕಾಶ ಪಡೆದರು. ವಿಶ್ವದ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಕೋರ್ಟೊಯಿಸ್‌ ಅವರು ಡೇವಿಸ್‌ ಅವರಿಗೆ ಐತಿಹಾಸಿಕ ಗೋಲು ದಾಖಲಿಸಲು ನಿರಾಕರಿಸಿದರು. ಅವರ ಉತ್ತಮ ಹೊಡೆತವನ್ನು ಕೋಟೋಯಿಸ್‌ ಅದ್ಭುತ ರೀತಿಯಲ್ಲಿ ತಡೆದರು.
ಇದರಿಂದ ಕೆನಡಾ ಮುನ್ನಡೆ ಸಾಧಿಸಲು ಸಾಧ್ಯವಾಗಲೇಯಿಲ್ಲ.
ಕೆನಡಾ ತಂಡ 36 ವರ್ಷಗಳ ಸುದೀರ್ಘ‌ ಸಮಯದ ಬಳಿಕ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ
ಪಡೆದಿತ್ತು. 1986ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆಡಿದ್ದ ಕೆನಡಾ ತಂಡವು ಆರಂಭದ ಮೂರು ಪಂದ್ಯಗಳಲ್ಲಿ ಸೋಲು ಕಂಡಿತಲ್ಲದೇ ಒಂದೇ ಒಂದು ಗೋಲು ಹೊಡೆಯಲು ಸಾಧ್ಯವಾಗಿರಲಿಲ್ಲ.
ಮೊರಾಕ್ಕೊ ಮತ್ತು ಕ್ರೊವೇಷ್ಯಾ ನಡುವಣ ಪಂದ್ಯ 0-0 ಅಂತರದಿಂದ ಡ್ರಾ ಆದ್ದರಿಂದ ಬೆಲ್ಜಿಯಂ ಮೇಲುಗೈ ಸಾಧಿಸಲು ಯಶಸ್ವಿಯಾಯಿತು.

andolanait

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

9 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

10 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

11 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

13 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

13 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

17 hours ago