ದೋಹಾ: ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಎಫ್ ಬಣದ ಬೆಲ್ಜಿಯಂ ತಂಡವು ಮಿಚಿ ಬಥ್‌ಶುವಾಯಿ ಅವರ ಗೋಲು ಮತ್ತು ಥಿಬಾಟ್ ಕೋರ್ಟೊಯಿಸ್ ಅವರ ಅದ್ಭುತ ನಿರ್ವಹಣೆಯಿಂದ ಬಲಿಷ್ಟ ಕೆನಡಾ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು.
ಈ ಗೆಲುವಿನಿಂದ ಬೆಲ್ಜಿಯಂ ಬಣದಲ್ಲಿ ಮೊದಲ ಶ್ರೇಯಾಂಕ ಪಡೆಯಿತು. ರೊಮೆಲು ಲುಕಾಕು ಅವರು ಗಾಯಗೊಂಡ ಕಾರಣ ಬೆಲ್ಜಿಯಂನ ದಾಳಿಯ ನೇತೃತ್ವ ಬಥ್‌ಶುವಾಯಿ
ವಹಿಸಿದ್ದರು.
ಕೆನಡಾ ತಂಡವು ಸಹ ಅತ್ಯಂತ ಉತ್ಸಾಹದಿಂದ ಆಟ ಆರಂಭಿಸಿ ಭರ್ಜರಿ ಪ್ರದರ್ಶನ ನೀಡುವ ಸೂಚನೆ ನೀಡಿತ್ತು. ಪಂದ್ಯದ 11ನೇ ನಿಮಿಷದಲ್ಲಿ ಬೆಲ್ಜಿಯಂನ ಯಾನ್ನಿಕ್ ಕ್ಯಾರಾಸ್ಕೊ ಚೆಂಡನ್ನು ಕೈಯಲ್ಲಿ ಮುಟ್ಟಿದ ಕಾರಣ ಕೆನಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಅಲ್ಫಾನ್ಸೊ ಡೇವಿಸ್ ಪೆನಾಲ್ಟಿ ಹೊಡೆಯುವ ಅವಕಾಶ ಪಡೆದರು. ವಿಶ್ವದ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಕೋರ್ಟೊಯಿಸ್ ಅವರು ಡೇವಿಸ್ ಅವರಿಗೆ ಐತಿಹಾಸಿಕ ಗೋಲು ದಾಖಲಿಸಲು ನಿರಾಕರಿಸಿದರು. ಅವರ ಉತ್ತಮ ಹೊಡೆತವನ್ನು ಕೋಟೋಯಿಸ್ ಅದ್ಭುತ ರೀತಿಯಲ್ಲಿ ತಡೆದರು.
ಇದರಿಂದ ಕೆನಡಾ ಮುನ್ನಡೆ ಸಾಧಿಸಲು ಸಾಧ್ಯವಾಗಲೇಯಿಲ್ಲ.
ಕೆನಡಾ ತಂಡ 36 ವರ್ಷಗಳ ಸುದೀರ್ಘ ಸಮಯದ ಬಳಿಕ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ
ಪಡೆದಿತ್ತು. 1986ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆಡಿದ್ದ ಕೆನಡಾ ತಂಡವು ಆರಂಭದ ಮೂರು ಪಂದ್ಯಗಳಲ್ಲಿ ಸೋಲು ಕಂಡಿತಲ್ಲದೇ ಒಂದೇ ಒಂದು ಗೋಲು ಹೊಡೆಯಲು ಸಾಧ್ಯವಾಗಿರಲಿಲ್ಲ.
ಮೊರಾಕ್ಕೊ ಮತ್ತು ಕ್ರೊವೇಷ್ಯಾ ನಡುವಣ ಪಂದ್ಯ 0-0 ಅಂತರದಿಂದ ಡ್ರಾ ಆದ್ದರಿಂದ ಬೆಲ್ಜಿಯಂ ಮೇಲುಗೈ ಸಾಧಿಸಲು ಯಶಸ್ವಿಯಾಯಿತು.
ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು…
ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…
ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…
ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ…
ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…