ಬೆಂಗಳೂರು : ಆಧುನಿಕ ಗರಡಿ ಮನೆ ತಗಡಾ ರಹೋಗೆ ಫಿಟ್ನೆಸ್ ಸ್ಟಾರ್ಟಪ್ ಗೆ ಮಹೇಂದ್ರ ಸಿಂಗ್ ಧೋನಿ ಹೂಡಿಕೆ ಮಾಡಲಿದ್ದಾರೆ. ತಗ್ಡಾ ರಹೋ ವ್ಯಾಯಾಮ ಶಾಲೆಯು ಸಾಂಪ್ರದಾಯಿಕ ಶೈಲಿಯ ವ್ಯಾಯಾಮ ಪದ್ದತಿಗೆ ಆಧುನಿಕ ಸ್ಪರ್ಷ ನೀಡುವ ಕಂಪನಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಮಹೇಂದ್ರ ಸಿಂಗ್ ಧೋನಿ ತಗ್ಡಾ ರಹೋ ತುಂಬಾ ಕುತೂಹಲಕಾರಿ ಎನಿಸುತ್ತದೆ. ಜನರು ಮರೆತು ಹೋಗಿರುವ ದೈಹಿಕ ಕಸರತ್ತನ್ನು ಮರಳಿ ತರುತ್ತಿದೆ ಎಂದಿದ್ದಾರೆ.
ತಗ್ಡಾ ರಹೋ ಮಾದರಿಯ ತರಬೇತಿಯನ್ನು ಈಗಾಗಲೇ ಲಕ್ನೋ ಸೂಪರ್ ಜೇಂಟ್ಸ್ ಹರ್ಯಾಣ ಸ್ಟೀಲರ್ಸ್ ಕಬಡ್ಡಿ ತಂಡ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
ಸಾಂಪ್ರದಾಯಿಕ ಗರಡಿಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ತರಬೇತಿ ಕೊಡಲಾಗುತ್ತದೆ.
ಈ ರೀತಿಯ ವ್ಯಾಯಾಮ ಶಾಲೆಯನ್ನು ಮನಿಶ್ ಮಲ್ಹೋತ್ರಾ ಅವರು ಸ್ಥಾಪನೆ ಮಾಡಿದ್ದಾರೆ. ಇದರ ಮುಖ್ಯ ಶಾಖೆಯು ಬೆಂಗಳೂರಿನಲ್ಲಿದೆ.
ಇದರ ತರಬೇತಿ ಕೇಂದ್ರಗಳನ್ನು ಡಗ್ ಔಟ್ ಎಂದು ಕರೆಯಲಾಗುತ್ತದೆ. ಈಗಾಗಲೇ ಇದರಲ್ಲಿ ಬಹಳ ಜನರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಅಲಸೂರಿನ ಎಸ್ ಯುಎಫ್‌ಸಿ ಗ್ರೌಂಡ್ಸ್ ಹಾಗೂ ಎಚ್‌ಎಸ್‌ಆರ್ ಲೇಔಟ್ ನಲ್ಲಿ ಇದರ ಎರಡು ಶಾಖೆಗಳಿವೆ.
ಇಲ್ಲಿ ಗರಡಿ ಮನೆಯಲ್ಲಿ ಬಳಸಲಾಗುತ್ತಿದ್ದ ಸಾಂಪ್ರದಾಯಿಕ ಸಲಕರಣೆಗಳನ್ನು ಬಳಸಿಕೊಂಡು ಆಧುನಿಕ ಶೈಲಿಯ ವ್ಯಾಯಾಮವನ್ನು ಕಲಿಸಲಾಗುತ್ತದೆ.
ಮುಂದಿನ ವರ್ದಲ್ಲಿ ನಾಲ್ಕರಿಂದ ಐದು ರಾಜ್ಯಗಳಿಗೆ ಈ ಡಗ್ ಹೌಸ್ ವ್ಯವಾಹರವನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ.
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…