ಕ್ರೀಡೆ

ದೇವಧರ್ ಟ್ರೋಫಿ: ಅಗರ್ವಾಲ್ ಸಾರಥ್ಯದ ದಕ್ಷಿಣ ವಲಯ ಚಾಂಪಿಯನ್ಸ್

ಪುದುಚೇರಿ : ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ದೇವಧರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಮಯಾಂಕ್ ಅಗರ್ವಾಲ್ ನೇತೃತ್ವದ ದಕ್ಷಿಣ ವಲಯ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಪೂರ್ವ ವಲಯ ತಂಡದ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದ ದಕ್ಷಿಣ ವಲಯ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ದಕ್ಷಿಣ ವಲಯ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹನ್ ಕುನ್ನುಮ್ಮಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್‌ಗೆ 181 ರನ್ ಪೇರಿಸಿದ ಈ ಜೋಡಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇದರ ನಡುವೆ ರೋಹನ್ ಕೇವಲ 68 ಎಸೆತಗಳಲ್ಲಿ ಬಿರುಸಿನ ಸೆಂಚುರಿ ಸಿಡಿಸಿದರು. ಅಲ್ಲದೆ ಕೇವಲ 75 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಮತ್ತೊಂದೆಡೆ ಮಯಾಂಕ್ ಅಗರ್ವಾಲ್ 83 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 63 ರನ್ ಕಲೆಹಾಕಿದರು.

ಆ ಬಳಿಕ ಬಂದ ಎನ್. ಜಗದೀಸನ್ (54) ಅರ್ಧಶತಕದ ಕೊಡುಗೆ ನೀಡಿದರೆ, ರೋಹಿತ್ ರಾಯುಡು 26 ರನ್ಗಳ ಕಾಣಿಕೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಅಜೇಯ 24 ರನ್ ಬಾರಿಸಿ ಸಾಯಿ ಕಿಶೋರ್ ಅಬ್ಬರಿಸಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ದಕ್ಷಿಣ ವಲಯ ತಂಡವು 8 ವಿಕೆಟ್ ಕಳೆದುಕೊಂಡು 328 ರನ್ ಕಲೆಹಾಕಿತು.

329 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪೂರ್ವ ವಲಯ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅಭಿಮನ್ಯು ಈಶ್ವರನ್ (1) ಅನ್ನು ವಿ ಕೌಶಿಕ್ ಔಟ್ ಮಾಡಿದರೆ, ಉತ್ಕರ್ಷ್ ಸಿಂಗ್ (4) ವಿಧ್ವತ್ ಕಾವೇರಪ್ಪ ಎಸೆತದಲ್ಲಿ ಔಟಾದರು. ಇನ್ನು ವಿರಾಟ್ ಸಿಂಗ್ (6) ಕೌಶಿಕ್‌ಗೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಸಂದೀಪ್ ಕುಮಾರ್ 41 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನು ನಾಯಕ ಸೌರಭ್ ತಿವಾರಿ 28 ರನ್ಗಳಿಸಿ ಔಟಾದರು. ಪರಿಣಾಮ ಕೇವಲ 115 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಪೂರ್ವ ವಲಯ ಸಂಕಷ್ಟಕ್ಕೆ ಸಿಲುಕಿತ್ತು.

ಈ ವೇಳೆ ಕ್ರೀಸ್ಗೆ ಆಗಮಿಸಿದ ರಿಯಾನ್ ಪರಾಗ್ ಅಕ್ಷರಶಃ ಅಬ್ಬರಿಸಿದರು. ಕುಮಾರ್ ಕುಶಾಗ್ರ ಜೊತೆಗೂಡಿ ಬ್ಯಾಟ್ ಬೀಸಿದ ಪರಾಗ್ ದಕ್ಷಿಣ ವಲಯ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಯುವ ದಾಂಡಿಗನ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳು ಮೂಡಿಬಂದವು.

6ನೇ ವಿಕೆಟ್ಗೆ 105 ರನ್ಗಳ ಜೊತೆಯಾಟವಾಡಿದ ರಿಯಾನ್ ಪರಾಗ್ ಹಾಗೂ ಕುಮಾರ್ ಕುಶಾಗ್ರರನ್ನು ಬೇರ್ಪಡಿಸುವಲ್ಲಿ ಕೊನೆಗೂ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. 65 ಎಸೆತಗಳಲ್ಲಿ 95 ರನ್ ಬಾರಿಸಿದ್ದ ರಿಯಾನ್ ಪರಾಗ್ರನ್ನು ಸುಂದರ್ ಎಲ್ಬಿಡಬ್ಲ್ಯೂ ಮಾಡಿದರು.

ಇದರ ಬೆನ್ನಲ್ಲೇ 58 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 68 ಬಾರಿಸಿದ್ದ ಕುಮಾರ್ ಕುಶಾಗ್ರಗೂ ವಾಷಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಸಿಗುತ್ತಿದ್ದಂತೆ ಮೇಲುಗೈ ಸಾಧಿಸಿದ ದಕ್ಷಿಣ ವಲಯ ಬೌಲರ್ಗಳು 46.1 ಓವರ್ಗಳಲ್ಲಿ 283 ರನ್ಗಳಿಗೆ ಪೂರ್ವ ವಲಯವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ 45 ರನ್ಗಳ ಅಮೋಘ ಗೆಲುವು ದಾಖಲಿಸಿ ದಕ್ಷಿಣ ವಲಯ ತಂಡವು ದೇವಧರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ವಲಯ : 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 328 ರನ್ (ರೋಹನ್ ಕುನ್ನುಮಲ್ 107, ಮಯಾಂಕ್ ಅಗರ್ವಾಲ್ 63, ಎನ್. ಜಗದೀಶನ್ 54; ಉತ್ಕರ್ಷ್ ಸಿಂಗ್ 50ಕ್ಕೆ 2, ಶಹಬಾಝ್ ಅಹ್ಮದ್ 55ಕ್ಕೆ 2, ರಿಯಾನ್ ಪರಾಗ್ 60ಕ್ಕೆ 2).

ಪೂರ್ವ ವಲಯ : 46.1 ಓವರ್ ಗಳಲ್ಲಿ 283 ರನ್‌ಗೆ ಆಲ್‌ಔಟ್‌ (ರಿಯಾನ್ ಪರಾಗ್ 95, ಕುಮಾರ ಕುಶಾಗ್ರ 68; ವಾಷಿಂಗ್ಟನ್ ಸುಂದರ್ 60ಕ್ಕೆ 3, ವಾಸುಕಿ ಕೌಶಿಕ್ 49ಕ್ಕೆ 2, ವಿ. ವೈಶಾಕ್ 59ಕ್ಕೆ 2, ವಿದ್ವತ್ ಕಾವೇರಪ್ಪ 61ಕ್ಕೆ 2).

ಪಂದ್ಯ ಶ್ರೇಷ್ಠ: ರೋಹನ್ ಕುನ್ನುಮಲ್

ಸರಣಿ ಶ್ರೇಷ್ಠ: ರಿಯಾನ್ ಪರಾಗ್

andolanait

Recent Posts

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

22 mins ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

1 hour ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

1 hour ago

ಡಿ.ಕೆ.ಸಹೋದರರಿಗೆ ಮದುವೆ ಕರೆಯೋಲೆ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರಿಗೆ ನೀಡಿ…

2 hours ago

ಶುಚಿತ್ವ, ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡ ಜಯದೇವ :ಸಿ.ಎಂ ಪ್ರಶಂಸೆ

ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…

2 hours ago

ಪ್ರಹ್ಲಾದ್‌ ಜೋಶಿರವರ ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಕೇಂದ್ರ ಸಚಿವ ಸ್ಥಾನಕ್ಕೆ ಶೋಭೆ ತರಲ್ಲ-ಎಚ್‌.ಕೆ.ಪಾಟೀಲ

ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್‌ ಎನ್‌ಕೌಂಟರ್‌ ಹೇಳಿಕೆ…

2 hours ago