ಕ್ರೀಡೆ

ದೇವಧರ್‌ ಟ್ರೋಫಿ| ಸಾಯ್ ಸುದರ್ಶನ್‌ ಶತಕ: ಫೈನಲ್‌ ತಲುಪಿದ ದಕ್ಷಿಣ ವಲಯ

ಪುದುಚರಿ: ಸೋಲಿಲ್ಲದ ಸರದಾರನಂತೆ ಮೆರೆದಿರುವ ದಕ್ಷಿಣ ವಲಯ ತಂಡ 2023ರ ಸಾಲಿನ ಪ್ರತಿಷ್ಠಿತ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ಗೆ ದಾಪುಗಾಲಿಟ್ಟಿದೆ. ಆಗಸ್ಟ್‌ 1 (ಮಂಗಳವಾರ)ರಂದು ನಡೆದ ಪಂದ್ಯದಲ್ಲಿ ಯುವ ಬ್ಯಾಟರ್‌ ಸಾಯ್‌ ಸುದರ್ಶನ್‌ (132*) ಬಾರಿಸಿದ ಅಜೇಯ ಶತಕದ ಬಲದಿಂದ ಮಿಂಚಿದ ದಕ್ಷಿಣ ವಲಯ ತಂಡ 7 ವಿಕೆಟ್‌ಗಳಿಂದ ಕೇಂದ್ರ ವಲಯ ತಂಡವನ್ನು ಬಗ್ಗುಬಡಿಯುವ ಮೂಲಕ ಟೂರ್ನಿಯ ಫೈನಲ್‌ ಪ್ರವೇಶಿಸಿದೆ.

ಆಗಸ್ಟ್‌ 3ರಂದು ಇಲ್ಲಿನ ಸೈಚೆಮ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡ ಸೌರಭ್ ತಿವಾರಿ ಸಾರಥ್ಯದ ಪೂರ್ವ ವಲಯ ಎದುರು ಪೈಪೋಟಿ ನಡೆಸಲಿದೆ.

ರೌಂಡ್‌ ರಾಬಿನ್‌ ಹಂತದಲ್ಲಿ ದಕ್ಷಿಣ ವಲಯ ತಾನು ಆಡಿದ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದು ಒಟ್ಟಾರೆ 20 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನ ಪಡೆದುಕೊಂಡಿತು. ಫೈನಲ್‌ ತಲುಪಿರುವ ಈಸ್ಟ್‌ ಝೋನ್‌ ಎದುರು ನಡೆದಿದ್ದ ಪಂದ್ಯದಲ್ಲಿ 12 ರನ್‌ಗಳ ರೋಚಕ ಜಯ ದಕ್ಕಿಸಿಕೊಂಡಿತ್ತು. ಹೀಗಾಗಿ ಫೈನಲ್‌ನಲ್ಲಿ ದಕ್ಷಿಣ ಮತ್ತು ಪೂರ್ವ ವಲಯಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಈಸ್ಟ್‌ ಝೋನ್‌ ತನ್ನ ಕೊನೆ ಪಂದ್ಯದಲ್ಲಿ ವೆಸ್ಟ್‌ ಝೋನ್‌ ಎದುರು 157 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ್ದ ಕೇಂದ್ರ ವಲಯ
ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಕೇಂದ್ರ ವಲಯ (ಸೆಂಟ್ರಲ್‌ ಝೋನ್‌) ತಂಡ ತನ್ನ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 261 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಶಿವಂ ಚೌಧುರಿ (37), ಯಶ್‌ ದುಬೇ (77) ಮತ್ತು ಶಿವಂ ಮಾವಿ (38) ಬ್ಯಾಟಿಂಗ್‌ ನೆರವಿನಿಂದ ಕೇಂದ್ರ ವಲಯ 260ರ ಗಡಿ ದಾಟಿತು. ದಕ್ಷಿಣ ವಲಯ ಪರ ಮಿಂಚಿದ ಮೋಹಿತ್ ರೆದ್ಕಾಡ್‌ (51ಕ್ಕೆ 3), ವೈಶಾಕ್ ಕೌಶಿಕ್ (15ಕ್ಕೆ 2) ಮತ್ತು ಅರ್ಜುನ್‌ ತೆಂಡೂಲ್ಕರ್‌ (65ಕ್ಕೆ 2) ವಿಕೆಟ್‌ ಪಡೆದರು.

ಯಶಸ್ವಿ ರನ್‌ ಚೇಸ್‌ ಮಾಡಿದ ಸೌತ್ ಝೋನ್
ರನ್‌ ಚೇಸ್‌ ಆರಂಭಿಸಿದ ದಕ್ಷಿಣ ವಲಯಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಇನಿಂಗ್ಸ್‌ ಆರಂಭಿಸಿದ ನಾಯಕ ಮಯಾಂಕ ಅಗರ್ವಾಲ್‌ ಒಂದು ಎಸೆತವನ್ನೂ ಎದುರಿಸಿದರೆ, ಗಾಯದ ಸಮಸ್ಯೆಗೆ ತುತ್ತಾಗಿ ರಿಟೈರ್ಡ್‌ ಹರ್ಟ್‌ ಆದರು. ಮತ್ತೊಬ್ಬ ಓಪನರ್‌ ರೋಹನ್ ಕುನ್ನುಮಾಲ್‌ (24) ಸಿಕ್ಕ ಆರಂಭದ ಲಾಭ ತೆಗೆದುಕೊಳ್ಳಲಿಲ್ಲ.

3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಇನ್‌ ಫಾರ್ಮ್‌ ಬ್ಯಾಟರ್‌ ಸಾಯ್ ಸುದರ್ಶನ್‌, 136 ಎಸೆತಗಳಲ್ಲಿ 11 ಫೋರ್‌ ಮತ್ತೊಂದು ಸಿಕ್ಸರ್‌ ಒಳಗೊಂಡಂತೆ ಅಜೇಯ 132 ರನ್‌ ಬಾರಿಸಿದರು. ಅವರಿಗೆ ಇನಿಂಗ್ಸ್‌ ಮಧ್ಯದಲ್ಲಿ ರೋಹಿತ್‌ ರಾಯುಡು (37) ಮತ್ತು ವಾಷಿಂಗ್ಟನ್‌ ಸುಂದರ್‌ (47*) ಉತ್ತಮ ಸಾಥ್‌ ನೀಡಿದರು. 48.2 ಓವರ್‌ಗಳಲ್ಲಿ 262 ರನ್‌ ಕಲೆಹಾಕಿದ ಸೌತ್‌ಝೋನ್‌ 7 ವಿಕೆಟ್‌ಗಳ ಜಯ ತನ್ನದಾಗಿಸಿಕೊಂಡಿತು.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago