ನವದೆಹಲಿ : ಇಂದಿನಿಂದ ಪ್ರಾರಂಭವಾಗಲಿರುವ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಗಾಗಿ ಗೂಗಲ್ ಸಂಸ್ಥೆಯು ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಈ ಬಾರಿ ಭಾರತವು ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿದ್ದು, 1975ರಲ್ಲಿ ಪ್ರಾರಂಭವಾದ ನಂತರ ಈ ಬಾರಿ 13ನೇ ಆವೃತ್ತಿಯ ವಿಶ್ವಕಪ್ ಆಗಿದೆ. ಅಧಿಕೃತ ವಿವರಗಳ ಪ್ರಕಾರ, 10 ರಾಷ್ಟ್ರೀಯ ತಂಡಗಳು ವಿಶ್ವಕಪ್ ನಲ್ಲಿ ಸೆಣಸಲಿವೆ.
ಈ ಬಾರಿಯ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ನಲ್ಲಿ ಒಟ್ಟು 45 ಪಂದ್ಯಗಳನ್ನು ಆಡಲಾಗುತ್ತದೆ. ಎಲ್ಲ ತಂಡಗಳೂ ವಿಶ್ವಕಪ್ ನಲ್ಲಿ ಭಾಗವಹಿಸಿರುವ ಇನ್ನಿತರ ಎಲ್ಲ ತಂಡಗಳೆದುರು ತಲಾ ಒಂದು ಪಂದ್ಯಗಳನ್ನಾಡಲಿವೆ. 13ನೇ ಆವೃತ್ತಿಯ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನೆದರ್ ಲೆಂಡ್ಸ್, ನ್ಯೂಝಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸುತ್ತಿವೆ.
ಹೀಗಾಗಿ ಗೂಗಲ್ ಸಂಸ್ಥೆಯು, ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಇಂದು (ಗುರುವಾರ) ಡೂಡಲ್ ಮೂಲಕ ಆಚರಿಸುತ್ತಿದೆ.
ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ…
ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…
ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ ಮದರ್ ಥೆರೇಸಾ ಈಗ ನಮ್ಮ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್ಐ…
ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ ಮಡಿಕೇರಿ:…