ಮೈಸೂರು

ಔಷಧಿ ಕೊಳ್ಳಲು ಮೆಡಿಕಲ್ ಸ್ಟೋರ್‌ಗೆ ಹೋದಾಗ ಹೃದಯಾಘಾತ : ವ್ಯಕ್ತಿ ಸಾವು

ಮೈಸೂರು : ಔಷಧಿ ಕೊಳ್ಳಲು ಮೆಡಿಕಲ್‌ ಸ್ಟೋರ್‌ಗೆ ಹೋಗಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ (38) ಮೃತ ವ್ಯಕ್ತಿ. ಉದಯಗಿರಿಯ ಮೆಡಿಕಲ್ ಸ್ಟೋರ್‌ಗೆ ಔಷಧಿ ಕೊಳ್ಳಲು ಹೋಗಿದ್ದಾಗ ಜಗದೀಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಗದೀಶ್ ಮೆಡಿಕಲ್ ಸ್ಟೋರ್‌ಗೆ ಔಷಧಿ ಕೊಳ್ಳಲು ಬಂದಿದ್ದರು. ಜಗದೀಶ್ ನೋವಿನ ಹಿನ್ನೆಲೆ ತಮ್ಮ ಎದೆಗೆ ಕೈಹಿಡಿದುಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಮೆಡಿಕಲ್ ಸಿಬ್ಬಂದಿ ಜಗದೀಶ್ ಅವರನ್ನು ವಿಚಾರಿಸುತ್ತಿದ್ದ ವೇಳೆಯೇ ಏಕಾಏಕಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಮೆಡಿಕಲ್ ಸಿಬ್ಬಂದಿ ಜಗದೀಶ್ ಕಡೆಗೆ ಓಡಿ ಹೋಗಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಜಗದೀಶ್ ಪ್ರಾಣಪಕ್ಷಿ ಹಾರಿಹೋಗಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

lokesh

Recent Posts

ಓದುಗರ ಪತ್ರ: ಹೊಸ ರಾಜ್ಯಪಾಲರು ರಾಜ್ಯದ ಪ್ರಗತಿಗೆ ಮಾರ್ಗದರ್ಶನ ನೀಡಲಿ

ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…

3 mins ago

ಓದುಗರ ಪತ್ರ: ದರ ವ್ಯತ್ಯಾಸ: ಗ್ರಾಹಕರ ಹಿತವೇ ಮುಖ್ಯ

ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…

6 mins ago

ದೇವಭೂಮಿ ದ್ವಾರಕಾದ ‘ಮೀಟಾಪುರ್ ಮದರ್ ಥೆರೇಸಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ  ಮದರ್ ಥೆರೇಸಾ ಈಗ ನಮ್ಮ…

9 mins ago

‘ಸರೆಂಡರ್ ಆದ ಹುಡುಗರು ಬೇರೆ ಕಥೆ ಹೇಳುತ್ತಿದ್ದಾರೆ!?’

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್‌ಐ…

17 mins ago

ಮಡಿಕೇರಿ ದಸರಾ: ಕೆಎಸ್‌ಆರ್‌ಟಿಸಿ ಪ್ರವಾಸಿ ಪ್ಯಾಕೇಜ್

ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ  ಮಡಿಕೇರಿ:…

30 mins ago

ದಸರಾ ಖರ್ಚಿನ ಭಾರ ಇಳಿಸಿದ ಟಿಕೆಟ್ ಮಾರಾಟದ ಆದಾಯ

ಕೆ.ಬಿ.ರಮೇಶನಾಯಕ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಟಿಕೆಟ್ ಸೋಲ್ಡ್ ಔಟ್ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಪ್ಲಾನ್ ಯಶಸ್ವಿ ಮೈಸೂರು:…

50 mins ago