ಕ್ರೀಡೆ

ಆಸ್ಟ್ರೇಲಿಯಾ ಆಟಗಾರರ ಜತೆ ಮಾತಿನ ಚಕಮಕಿ : ಮೂವರು ಸದಸ್ಯರನ್ನು ಅಮಾನತುಗೊಳಿಸಿದ ಎಂಸಿಸಿ

ಲಂಡನ್‌ : ಆಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರ ಜತೆ ಮಾತಿನ ಚಕಮಕಿ ನಡೆಸಿದ ಮೂವರು ಮೆಲ್ಬೋರ್ನ್‌ ಕ್ರಿಕೆಟ್‌ ಅಸೋಸಿಯೇಷನ್‌ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್ ಅವರ ಸ್ಟಂಪ್‌ ಔಟ್‌ ಸಂಬಂಧ ಈ ಘಟನೆ ನಡೆದಿತ್ತು.

ಭಾನುವಾರ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಮುಗಿದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 43 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಆಷಸ್ ಟೆಸ್ಟ್‌ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. ಅಂದ ಹಾಗೆ ಐದನೇ ದಿನ ಕ್ಯಾಮೆರಾನ್‌ ಗ್ರೀನ್‌ ಎಸೆದ ಬೌನ್ಸ್ ಅನ್ನು ಜಾನಿ ಬೈರ್‌ಸ್ಟೋವ್‌ ಆಡದೆ ಹಿಂದಕ್ಕೆ ಬಿಟ್ಟಿದ್ದರು. ನಂತರ ಬೈರ್‌ಸ್ಟೋವ್‌ ಕ್ರೀಸ್‌ ಬಿಟ್ಟು ಮುಂದಕ್ಕೆ ನಡೆದು ಹೋಗುವ ವೇಳೆ ಅಲೆಕ್ಸ್‌ ಕೇರಿ ಸ್ಪಂಪ್‌ ಔಟ್‌ ಮಾಡಿದ್ದರು. ಇದನ್ನು ಜಾನಿ ಬೈರ್‌ಸ್ಟೋವ್‌ ನಿರೀಕ್ಷಿಸಿರಲಿಲ್ಲ. ಅಂಪೈರ್‌ ಕೂಡ ಇಂಗ್ಲೆಂಡ್‌ ಆಟಗಾರ ಔಟ್‌ ಎಂದು ತೀರ್ಪು ನೀಡಿದ್ದರು.

ಅಂದ ಹಾಗೆ 5ನೇ ದಿನ ಭೋಜನ ವಿರಾಮದ ವೇಳೆ ಡ್ರೆಸ್ಸಿಂಗ್ ಕೊಠಡಿಗೆ ತೆರಳುವಾಗ ಆಸ್ಟ್ರೇಲಿಯಾ ಆಟಗಾರರ ಜತೆ ಮೆಲ್ಬೋರ್ನ್‌ ಕ್ರಿಕೆಟ್‌ ಕ್ಲಬ್‌ನ ಕೆಲ ಸದಸ್ಯರು ಕಿರಿಕ್‌ ಮಾಡಿಕೊಂಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಹಾಗೂ ಉಸ್ಮಾನ್‌ ಖವಾಜ ಅವರ ಜತೆ ಎಂಸಿಸಿಯ ಕೆಲ ಸದಸ್ಯರು ಮಾತಿನ ಚಕಮಕಿ ನಡೆಸಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಘಟನೆ ನಡೆದ ಬಳಿಕ ಇದರ ವಿಡಿಯೋ ನೋಡಿದ ಎಂಸಿಸಿ ತನ್ನ ಮೂವರು ಸದಸ್ಯರನ್ನು ಅಮಾನತುಗೊಳಿಸಿದೆ. ತಮ್ಮ ಕೆಲ ಆಟಗಾರರ ಮೇಲೆ ದೈಹಿಕ ಸ್ಪರ್ಶವಾಗಿದೆ ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಹೇಳಿಲ್ಲ. ಆದರೂ ಈ ಘಟನೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಕ್ರಿಕೆಟ್‌ ಕಾನೂನು ಪಾಲಕರು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾ ಆಟಗಾರರ ಬಳಿ ಕ್ಷಮೆಯಾಚಿಸಿದ ಎಂಸಿಸಿ, ತನ್ನ ಕೆಲ ಸದಸ್ಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಕೆಲ ಸದಸ್ಯರ ವರ್ತನೆ ಸ್ವೀಕಾರರ್ಹವಲ್ಲ : “ತನ್ನ ಮೂವರು ಸದ್ಯಸರನ್ನು ಎಂಸಿಸಿ ಅಮಾನತುಗೊಳಿಸಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವವರೆಗೂ ಈ ಸದಸ್ಯರು ಲಾರ್ಡ್ಸ್ ಮೈದಾನಕ್ಕೆ ಪ್ರವೇಶವಿಲ್ಲ. ತಮ್ಮ ಕೆಲ ಸದಸ್ಯರ ವರ್ತನೆ ನಿಜವಾಗಲೂ ಸ್ವೀಕಾರರ್ಹವಲ್ಲ. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್ ಅವರು ಕೂಡ ದೈಹಿಕ ಕ್ರಿಯೆ ನಡೆದಿದೆ ಎಂದು ಹೇಳಿಲ್ಲ. ಆದರೆ, ಈ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ, ಇಂಥಾ ವರ್ತನೆಗಳು ಎಂಸಿಸಿ ಮೌಲ್ಯಗಳಿಗೆ ವಿರುದ್ದವಾಗಿವೆ,” ಎಂದು ಎಂಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

“ಈ ಘಟನೆಯನ್ನು ಎಂಸಿಸಿ ಖಂಡಿಸಲಿದೆ ಹಾಗೂ ಕೆಲ ಸದಸ್ಯರು ಮಾಡಿದ ತಪ್ಪಿನಿಂದ ಕ್ರಿಕೆಟ್‌ ಆಸ್ಟ್ರೇಲಿಯಾ ಬಳಿ ಕ್ಷಮೆಯಾಚಿಸುತ್ತೇವೆ. ಈ ವರ್ತನೆ ನಿಜಕ್ಕೂ ಒಪ್ಪಲು ಸಾಧ್ಯವಿಲ್ಲ. ಆದರೆ, ಪಂದ್ಯದ ಐದೂ ದಿನಗಳು ಅದ್ಭುತವಾಗಿದ್ದವು. ಆಸ್ಟ್ರೇಲಿಯಾ ತಂಡ ಗೆಲ್ಲುವ ಮೂಲಕ ಲಾರ್ಡ್ಸ್ ಟೆಸ್ಟ್‌ ಮುಕ್ತಾಯವಾಗಿದೆ,” ಎಂದು ಎಂಸಿಸಿ ಹೇಳಿದೆ.

ಜಾನಿ ಬೈರ್‌ಸ್ಟೋವನ್‌ ಅವರ ಸ್ಟಂಪ್ ಔಟ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್ ಹಾಗೂ ಕೋಚ್‌ ಬ್ರೆಂಡನ್‌ ಮೆಕಲಮ್‌ ಅವರ ಇದನ್ನು ಖಂಡಿಸಿದ್ದಾರೆ. ಆದರೆ, ಕೆಲ ಮಾಜಿ ಆಟಗಾರರು ಇದನ್ನು ಸಮರ್ಥಿಸಿಕೊಂಡಿದ್ದಾರೆ.

lokesh

Recent Posts

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

1 min ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

6 mins ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

14 mins ago

ಓದುಗರ ಪತ್ರ | ಮತದಾನ ಪದ್ಧತಿಯಲ್ಲೂ ಮಾರ್ಪಾಡಾಗಲಿ

ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ನಾವು ಅಗಾಧ ಸಾಧನೆ ಮಾಡಿದ್ದೇವೆ. ಹಾಗಾಗಿ ಇವತ್ತು ಜಗತ್ತು ಭಾರತದತ್ತ ತಿರುಗಿ…

18 mins ago

ಓದುಗರ ಪತ್ರ | ಎಸ್‌ಐಆರ್ ಗೊಂದಲ ಪರಿಹರಿಸಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಲ್ಲಿ ಸಮರ್ಪಕ ಮಾಹಿತಿ ಇಲ್ಲದ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಕರುಡು…

22 mins ago

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

18 hours ago