ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಜುಲೈ 7ಕ್ಕೆ ವಿಶೇಷ ಸ್ಥಾನಮಾನವಿದೆ. ಏಕೆಂದರೆ ಅಂದು ಕ್ರಿಕೆಟ್ ಲೋಕದ ದಿಗ್ಗಜ ಆಟಗಾರನು ಹುಟ್ಟಿದ ದಿನ. ಕ್ಯಾಪ್ಟನ್ ಕೂಲ್ ಎಂದೇ ಖಾತಿ ಪಡೆದ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಶುಕ್ರವಾರ (ಜುಲೈ 7) ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟಿಗರ ವೃತ್ತಿಬದುಕು 36-38ರ ಒಳಗೆ ಅಂತ್ಯವಾಗಿಬಿಡುತ್ತದೆ. ಅದರಲ್ಲೂ ವಿಕೆಟ್‌ಕೀಪರ್‌ಗಳು 35ರ ಬಳಿಕ ಆಟ ಮುಂದುವರಿಸುವುದು ಬಹಳಾ ಕಷ್ಟ. ಆದರೆ, ಸ್ಪರ್ಧಾತ್ಮ ಕ್ರಿಕೆಟ್‌ನಲ್ಲಿ ಮುಂದುವರಿಯುವ ತುಡಿತ ಹೊಂದಿರುವ ಎಂಎಸ್‌ಡಿ ಇದೇ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದುಕೊಟ್ಟು, ನಿವೃತ್ತಿ ಸದ್ಯಕ್ಕಿಲ್ಲ ಎಂದೇ ಸಂದೇಶ ರವಾನಿಸಿದ್ದರು.
“ಉತ್ತರ ಹುಡುಕುತ್ತಿದ್ದೇನೆ? ಟ್ರೋಫಿ ಗೆದ್ದಾಗ ನಿವೃತ್ತಿ ಹೇಳಲು ಸೂಕ್ತ ಸಮಯವಾಗಿರುತ್ತದೆ. ಆದರೆ, ಎಲ್ಲೆಡೆ ನನಗೆ ಸಿಕ್ಕಿರುವ ಪ್ರೀತಿಗೆ ಪ್ರತಿಯಾಗಿ ಏನಾದರೂ ಕೊಡಬೇಕಲ್ಲವೆ. ಇಲ್ಲಿಂದ ಆಟ ನಿಲ್ಲಿಸಿ ಹೊರ ನಡೆಯುವುದು ಸುಲಭ. ಆದರೆ, ಕಠಿಣ ಹಾದಿ ಏನೆಂದರೆ ಮುಂದಿನ 9 ತಿಂಗಳು ಕಷ್ಟ ಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ಅಭಿಮಾನಿಗಳಿಗೆ ನಾನು ನೀಡಲಿರುವ ಉಡುಗೊರೆ, ನನ್ನ ದೇಹಕ್ಕೆ ಇದು ಕಷ್ಟವಾದರೂ ಖಂಡಿತಾ ಪ್ರಯತ್ನಿಸಲಿದ್ದೇನೆ,” ಎಂದು ಐಪಿಎಲ್ 2023 ಫೈನಲ್ ಬಳಿಕ ಧೋನಿ ಹೇಳಿದ್ದರು.
ಮಂಡಿ ನೋವಿನ ಗಾಯದ ಸಮಸ್ಯೆ ಎದುರಿಸಿರುವ ಎಂಎಸ್ ಧೋನಿ, ಸಂಪೂರ್ಣ ಚೇತರಿಕೆ ಕಂಡರೆ ಮಾತ್ರವೇ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಸಿಎಸ್‌ಕೆ ಕೋಚಿಂಗ್ ಬಳಗ ಸೇರಿಕೊಳ್ಳಲಿದ್ದಾರೆ.
ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…
ಶಿವಮೊಗ್ಗ: ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…
ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…