ಬೆಂಗಳೂರು: ಬೆಂಗಳೂರು ಬ್ಲಾಸ್ಟರ್ಸ್ ಅವರ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಗುಲ್ಬರ್ಗಾ ಮಿಸ್ಟಿಕ್ಸ್ ಅವರು ಮಹಾರಾಜ ಟ್ರೋಫಿ 2024ರ ಉದ್ಘಾಟನಾ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದೆ.
ಗುಲ್ಬರ್ಗಾ ವಿರುದ್ಧ ಗೆದ್ದ ಬೆಂಗಳೂರು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗಾ 16.4 ಓವರ್‌ಗಳಲ್ಲಿ ಆಲ್‌ಔಟ್ ಆಗಿ 116 ರನ್ ಕಲೆಹಾಕಿತು. ಆ ಮೂಲಕ ಎದುರಾಳಿಗೆ 117 ರನ್ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಬೆಂಗಳೂರು 11.2 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 117 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗುಲ್ಬರ್ಗಾ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಗುಲ್ಬರ್ಗಾ ಪರ ನಾಯಕ ದೇವ್‌ದತ್ ಪಡಿಕ್ಕಲ್ ಹಾಗೂ ಲುನ್ವಿತ್ ಸಿಸೋಡಿಯಾ ಇನ್ನಿಂಗ್ಸ್ ಆರಂಭಿಸಿದರು. ಸಿಸೋಡಿಯಾ 14(7), ನಾಯಕ ಪಡಿಕ್ಕಲ್ 20(9), ಅನೀಶ್ 4(8), ಸಮರನ್ 8(8), ಶರತ್ 13(13), ಪ್ರವೀಣ್ ದುಬೆ 19(23), ಯಶೋವರ್ಧನ್ ಔಟಾಗದೇ 11(14), ವೈಶಾಖ್ ವಿಜಯ್ ಕುಮಾರ್ ಡಕ್‌ಔಟ್, ಶೆಖಾವತ್ 10(9), ರಿತೇಶ್ ಭಟ್ಕಲ್ ಡಕ್‌ಔಟ್, ಶರಣ್ 4(6) ರನ್ ಗಳಿಸಿದರು.
ಬೆಂಗಳೂರು ಪರ ಆದಿತ್ಯಾ ಗೋಯಲ್ 3, ಲವೀಶ್ ಕುಶಾಲ್, ನವೀನ್, ಮೋಸಿನ್ ಖಾನ್ ತಲಾ ಎರಡೆರೆಡು ವಿಕೆಟ್, ಶುಭಾಂಗ್ ಹೆಗ್ಡೆ ಒಂದು ವಿಕೆಟ್ ಪಡೆದರು.
ಬೆಂಗಳೂರು ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಬೆಂಗಳೂರು ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಎಲ್ ಆರ್ ಚೇತನ್ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಬೌಂಡರಿ ಸಹಿತ 53 ರನ್ ಚಚ್ಚಿದರು.
ಬಳಿಕ ಒಂದಾದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಭುವನ್ ರಾಜು ಔಟಾಗದೇ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಮಯಾಂಕ್ 29 ಎಸೆತಗಳಲ್ಲಿ 47 ರನ್ ಗಳಿಸಿದರೇ, ಭುವನ್ 7(5) ರನ್ ಬಾರಿಸಿ ಗೆಲುವು ತಂದುಕೊಟ್ಟರು.
ಗುಲ್ಬರ್ಗಾ ಪರ ವೈಶಾಖ್ ವಿಜಯ್ ಕುಮಾರ್ ಒಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ನವೀನ್
ವಾಷಿಂಗ್ಟನ್ : ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಸಂಘರ್ಷದಲ್ಲಿ ಹೊರ್ಮುಜ್ ಜಲಸಂಧಿ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಈಗಾಗಲೇ ಅಮೆರಿಕ ನೌಕಾಪಡೆ ಈ ಜಲಸಂಧಿಯಲ್ಲಿ…
ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೈಸೂರು : ಬಡತನದ ಬೇಗೆಯ ನಡುವೆಯೂ ಸಾಧನೆಯ ಛಲ…
ಮಳವಳ್ಳಿ : ಜಾತ್ರೆ, ಉತ್ಸವ, ರಾಜಗೋಪುರ ಲೋಕಾರ್ಪಣೆಯಂತಹ ಧಾರ್ಮಿಕ ಆಚರಣೆಗಳಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ನಮ್ಮ ಸಂಸ್ಕೃತಿ,…
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ…
ಹುಣಸೂರು: ರಸ್ತೆ ಮಣ್ಣಿನ ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ…
ಹುಣಸೂರು: ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ…