ಕ್ರೀಡೆ

2023ರ ಮಹಿಳಾ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ದಿನಾಂಕ ಫಿಕ್ಸ್‌ ಮಾಡಿದ ಬಿಸಿಸಿಐ

ನವದೆಹಲಿ : ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಕ್ರಿಕೆಟ್‌ ಟೂರ್ನಿ 2023ರ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ಮೂಲಗಳಿಂದ ಮಾಹಿತಿ ಲಭಿಸಿದ್ದು, ಟೂರ್ನಿಯಲ್ಲಿ 5 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಗೊತ್ತಾಗಿದೆ. ಮಹಿಳಾ ಐಪಿಎಲ್‌ ಕ್ರಿಕೆಟ್‌ ಟೂರ್ನಿ ಲೀಗ್‌ ಹಂತದಲ್ಲಿ 20 ಪಂದ್ಯಗಳು ಇರಲಿದ್ದು, ಪ್ರತಿ ತಂಡಗಳು ಪರಸ್ಪರ 2 ಬಾರಿ ಮುಖಾಮುಖಿಯಾಗಲಿವೆ. ಲೀಗ್‌ನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಪ್ರತಿ ತಂಡ ಆಡುವ 11ರ ಬಳಗದಲ್ಲಿ 5 ವಿದೇಶಿ ಆಟಗಾರ್ತಿಯರನ್ನು ಹೊಂದುವ ಅವಕಾಶವಿದೆ.

ಮಹಿಳಾ ಐಪಿಎಲ್ ಟೂರ್ನಿಯಲ್ಲಿ ತಂಡವೊಂದರ ಆಡುವ ಹನ್ನೊಂದರ ಬಳಗದಲ್ಲಿ ನಾಲ್ವರು ವಿದೇಶಿ ಆಟಗಾರ್ತಿಯರು(ಐಸಿಸಿ ಪೂರ್ಣ ಸದಸ್ಯತ್ವ ಹೊಂದಿದ ಆಟಗಾರ್ತಿಯರು) ಹಾಗೂ ಅಸೋಸಿಯೇಟ್‌ ರಾಷ್ಟ್ರದ ಓರ್ವ ಆಟಗಾರ್ತಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಇನ್ನು ಎರಡನೇ ಹಾಗೂ ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ವಿಜೇತ ತಂಡವು ಫೈನಲ್‌ ಪಂದ್ಯದಲ್ಲಿ ಸೆಣಸಾಡಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 9ರಿಂದ 26ರ ವರೆಗೆ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದ್ದು, ಆ ಬಳಿಕ ಐಪಿಎಲ್‌ ನಡೆಯುವ ನಿರೀಕ್ಷೆಯಿದೆ. ಕ್ಯಾರವಾನ್‌ ಮಾದರಿಯಲ್ಲಿ 2 ತಾಣಗಳಲ್ಲಿ ತಲಾ 10 ಪಂದ್ಯಗಳನ್ನು ಆಡಿಸುವ ನಿರೀಕ್ಷೆಯಿದೆ. ವಲಯವಾರು ಆಧರಿಸಿ ಬೆಂಗಳೂರು, ಅಹ್ಮದಾಬಾದ್‌, ಚೆನ್ನೈ, ಡೆಲ್ಲಿ, ಕೋಲ್ಕತಾ ಮತ್ತು ಮುಂಬೈ ನಗರಗಳು ಪಂದ್ಯ ಆಯೋಜಿಸುವ ಆಯ್ಕೆ ಪಟ್ಟಿಯಲ್ಲಿವೆ. ಟೂರ್ನಿ ಬಗ್ಗೆ ಐಪಿಎಲ್‌ ಆಡಳಿತ ಮಂಡಳಿ ಮತ್ತು ಬಿಸಿಸಿಐ ಪದಾಧಿಕಾರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

andolana

Recent Posts

ಮಂಡ್ಯ | ಕೆರೆಯಲ್ಲಿ ಬಾಲಕನ ಶವ ಪತ್ತೆ ; ಕೊಲೆ ಶಂಕೆ

ಮಿಮ್ಸ್ ಎದುರು ಪ್ರತಿಭಟನೆ ಮಂಡ್ಯ: 15 ವರ್ಷದ ಬಾಲಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ…

9 hours ago

10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ: ಸ್ನೇಕ್ ಮಧು ಕಾರ್ಯಕ್ಕೆ ಮೆಚ್ಚುಗೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ತಾಪುರ ಗ್ರಾಮದ ವಿಜಿ…

14 hours ago

ವಿದ್ಯುತ್ ಸ್ಪರ್ಶ: ಲೈನ್‌ಮ್ಯಾನ್ ಕಾರ್ತಿಕ್‌ ಸ್ಥಿತಿ ಗಂಭೀರ, ಆದರೆ ಸ್ಥಿರ: ವೈದ್ಯರಿಂದ ಮಾಹಿತಿ

ಮೈಸೂರು: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ಲೈನ್‌ಮ್ಯಾನ್ ಕಾರ್ತಿಕ್ ಅವರ ಆರೋಗ್ಯ ಸ್ಥಿತಿ ಗಂಭೀರ, ಆದರೆ ಸ್ಥಿರವಾಗಿದೆ ಎಂದು ವೈದ್ಯರು…

15 hours ago

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆ

ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ…

15 hours ago

ನಿರೋಡಿ ನಿಧನ; ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ…

18 hours ago

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

22 hours ago