ಜಾಕೀರ್ ಹಸನ್ ಶತಕ ಸಂಭ್ರಮ, ಮತ್ತೆ ಮಿಂಚಿದ ಸ್ಪಿನ್ನರ್ ಗಳು
ಚಿತ್ತಗಾಂಗ್ : ಬಂದರು ನಗರಿ ಚಿತ್ತಗಾಂಗ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ಗೆಲುವಿನತ್ತ ಮುಖ ಮಾಡಿದೆ. ದಿನದಾಟದಂತ್ಯಕ್ಕೆ ಬಾಂಗ್ಲಾ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿದೆ.
ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾ ಪರ ಜಾಕೀರ್ ಹಸನ್ ಶತಕ ಸಿಡಿಸಿ ಸಂಭ್ರಮಿಸಿದರೆ, ನಾಯಕ ಶಕೀಬ್ ಹಾಗೂ ಮೆಹದಿ ಹಸನ್ ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಬೇಕಾದರೆ ಕೊನೆಯ ದಿನದಲ್ಲಿ 241 ರನ್ ಗಳಿಸಬೇಕಿದೆ. ಟೀಂ ಇಂಡಿಯಾ ಗೆಲುವು ಸಾಧಿಸಬೇಕೆಂದರೆ ಬಾಂಗ್ಲಾ ತಂಡದಲ್ಲಿ ಉಳಿದಿರುವ 4 ವಿಕೆಟ್ಗಳನ್ನು ಉರುಳಿಸಬೇಕಿದೆ.
ಮೊದಲ ಇನಿಂಗ್ಸ್‌ನಲ್ಲಿ 404 ರನ್ ಗಳಿಸಿದ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಭಾರತ ನೀಡಿರುವ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ಪಡೆ, 3ನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 42 ರನ್ಗಳಿಸಿತ್ತು. ಬಳಿಕ ನಾಲ್ಕನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡದ ಆರಂಭಿಕ ಜೋಡಿ ನಜ್ಮುಲ್ ಹುಸೇನ್ ಶಾಂಟೊ ಮತ್ತು ಜಾಕಿರ್ ಹಸನ್ ಮೊದಲ ವಿಕೆಟ್‌ಗೆ 124 ರನ್ ಸೇರಿಸಿದರು. ಆದರೆ ಈ ಜೋಡಿ ಮುರಿದ ತಕ್ಷಣ ಬಾಂಗ್ಲಾದೇಶದ ಉಳಿದ ಬ್ಯಾಟರ್ ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಅಕ್ಷರ್ ಪಟೇಲ್, ಕುಲ್ದೀಪ್ ಮ್ಯಾಜಿಕ್ ಮುಂದೆ ಮಂಕಾದ ಬಾಂಗ್ಲಾ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಆದರೆ, ಇದಕ್ಕೂ ಮುನ್ನ ಶಾಂಟೊ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ಯಾದವ್ ಭಾರತಕ್ಕೆ ಮೊದಲ ವಿಕೆಟ್ ತಂದುಕೊಡುವಲ್ಲಿ ಯಶಸ್ವಿಯಾದರು. ತಮ್ಮ ಇನ್ನಿಂಗ್ಸ್ನಲ್ಲಿ 156 ಎಸೆತಗಳನ್ನು ಎದುರಿಸಿದ ಶಾಂಟೊ ಏಳು ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರು.
ಶಾಂಟೋ ವಿಕೆಟ್ ಬಳಿಕ ಅಕ್ಷರ್, ಯಾಸಿರ್ ಅಲಿಯನ್ನು ವಜಾ ಮಾಡಿದರು. ಲಿಟನ್ ದಾಸ್ ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡುವ ಮೂಲಕ ಭಾರತಕ್ಕೆ ನಾಲ್ಕನೇ ಯಶಸ್ಸು ತಂದುಕೊಟ್ಟರು. ಯಾಸಿರ್ ಐದು ರನ್ ಗಳಿಸಿದರೆ, ಲಿಟನ್ 19 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಶತಕ ಬಾರಿಸುವುದರೊಂದಿಗೆ ಭಾರತಕ್ಕೆ ತಲೆನೋವಾಗಿದ್ದ ಹಸನ್ರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಭಾರತಕ್ಕೆ ಐದನೇ ಯಶಸ್ಸು ನೀಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 224 ಎಸೆತಗಳನ್ನು ಎದುರಿಸಿದ ಹಸನ್, 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರು. ನಂತರ ಬಾಂಗ್ಲಾದೇಶಕ್ಕೆ ಐದನೇ ಹೊಡೆತವನ್ನು ನೀಡಿದ ಅಕ್ಷರ್, ಮುಶ್ಫಿಕ್ಮರ್ ರಹೀಮ್ ಅವರ ಇನ್ನಿಂಗ್ಸ್ ಅನ್ನು 23 ರನ್‌ಗಳಿಗೆ ಕೊನೆಗೊಳಿಸಿದರು. ಬಳಿಕ ನೂರುಲ್ ಹಸನ್ಗೂ ಪೆವಿಲಿಯನ್ ಹಾದಿ ತೋರಿಸಿದರು.
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…