ಕ್ರೀಡೆ

ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಜಯ: ಭಾರತಕ್ಕೆ ಸರಣಿ ವಶ

ರಾಜ್‌ಕೋಟ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂಚೇತರಿಕೆ ಪ್ರದರ್ಶನ ನೀಡಿದ ಆಸ್ಪ್ರೇಲಿಯಾ ತಂಡ 3ನೇ ಏಕದಿನ ಪಂದ್ಯದಲ್ಲಿಆತಿಥೇಯ ಭಾರತ ತಂಡವನ್ನು ಸೋಲಿಸಿ, ವೈಟ್‌ವಾಷ್‌ ಮುಖಭಂಗದಿಂದ ಪಾರಾಯಿತು.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿಬುಧವಾರ ನಡೆದ ಪಂದ್ಯದಲ್ಲಿ352 ರನ್‌ ಬೆನ್ನಟ್ಟಿದ ಭಾರತ ತಂಡವನ್ನು 2 ಎಸೆತಗಳು ಬಾಕಿ ಇರುವಂತೆಯೇ 286 ರನ್‌ಗಳಿಗೆ ಕಟ್ಟಿಹಾಕಿದ ಕಾಂಗರೂ ಬಳಗ 66 ರನ್‌ಗಳ ಅಂತರದಿಂದ ಗೆದ್ದು ವಿಜಯೋತ್ಸವ ಆಚರಿಸಿತು.

ಮೊದಲೆರಡು ಪಂದ್ಯಗಳಲ್ಲಿಜಯ ಗಳಿಸಿದ್ದ ಟೀಮ್‌ ಇಂಡಿಯಾ, 2-1 ಅಂತರದಲ್ಲಿಏಕದಿನ ಸರಣಿ ಗೆದ್ದುಕೊಂಡಿತು. ಇದರೊಂದಿಗೆ ಅಕ್ಟೋಬರ್‌ 5ರಂದು ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೂ ಸಜ್ಜುಗೊಂಡಿದೆ.

ಪ್ರಮುಖ ಆಟಗಾರರ ಗೈರು ಹಾಜರಾತಿಯಲ್ಲಿಯೂ ಮೊದಲೆರಡು ಪಂದ್ಯಗಳಲ್ಲಿ ವಿಜೃಂಭಿಸಿದ್ದ ಭಾರತ, ಪೂರ್ಣ ಸದಸ್ಯರ ಲಭ್ಯತೆಯ ಹೊರತಾಗಿಯೂ ಕೆಳ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಸೋಲನುಭವಿಸಿತು. ರೋಹಿತ್‌ (81), ವಿರಾಟ್‌ ಕೊಹ್ಲಿ(56) ಮತ್ತು ಶ್ರೇಯಸ್‌ (48) ಭಾರತದ ಪರ ಉತ್ತಮ ಪ್ರದರ್ಶನ ನೀಡಿದರು. 10 ಓವರ್‌ಗಳಲ್ಲಿ40 ರನ್‌ ವೆಚ್ಚದಲ್ಲಿ4 ವಿಕೆಟ್‌ ಉರುಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಸೀಸ್‌ ಜಯದಲ್ಲಿಮುಖ್ಯ ಭೂಮಿಕೆ ವಹಿಸಿದರು.

ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳ ಅರ್ಧ ಶತಕಗಳ ಸಾಹಸದಿಂದ ಆಸ್ಪ್ರೇಲಿಯಾ ತಂಡ 352 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಮೊದಲೆರಡು ಸೋಲುಗಳಿಂದ ಹೊರಬರುವ ಒತ್ತಡದಲ್ಲಿಕಣಕ್ಕಿಳಿದ ಪ್ರವಾಸಿ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಡೇವಿಡ್‌ ವಾರ್ನರ್‌ ಮತ್ತು ಮಿಚೆಲ್‌ ಮಾಷ್‌ರ್‍, 78 ರನ್‌ಗಳ ಪಾಲುದಾರಿಕೆ ಆಟ ಪ್ರದರ್ಶಿಸಿ ತಂಡದ ಬೃಹತ್‌ ಮೊತ್ತಕ್ಕೆ ವೇದಿಕೆ ನಿರ್ಮಿಸಿದರು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ ವಾರ್ನರ್‌, ಕೇವಲ 34 ಎಸೆತಗಳಲ್ಲಿ6 ಫೋರ್‌, 4 ಸಿಕ್ಸರ್‌ ಒಳಗೊಂಡ 56 ರನ್‌ ಸಿಡಿಸಿ ಪ್ರಸಿದ್ಧ್‌ ಕೃಷ್ಣಾಗೆ ವಿಕೆಟ್‌ ಒಪ್ಪಿಸಿದರು.

ನಂತರ 2ನೇ ವಿಕೆಟ್‌ಗೆ ಜತೆಗೂಡಿದ ಮಿಚೆಲ್‌ ಮತ್ತು ಸ್ಮಿತ್‌ ಜೋಡಿ, ಆತಿಥೇಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡುವುದರೊಂದಿಗೆ 137 ರನ್‌ಗಳ ಜತೆಯಾಟ ನಿರ್ವಹಿಸಿತು. ಮಾಷ್‌ರ್‍ 4 ರನ್‌ಗಳ ಕೊರತೆಯಿಂದ ಶತಕ ವಂಚಿತರಾದರೆ, ಸ್ಮಿತ್‌ 74 ರನ್‌ ಕೊಡುಗೆ ನೀಡಿದರು. ಇವರು ಹಾಕಿಕೊಟ್ಟ ಬುನಾದಿ ಮೇಲೆ ಇನಿಂಗ್ಸ್‌ ಕಟ್ಟಿದ ಲ್ಯಾಬುಶೇನ್‌ ಕೇವಲ 58 ಎಸೆತಗಳಲ್ಲಿ72 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಭಾರತದ ಪರ ಬುಮ್ರಾ 3 ವಿಕೆಟ್‌ ಉರುಳಿಸಿದರೆ,ಕುಲ್ದೀಪ್‌ 2 ವಿಕೆಟ್‌ ತಮ್ಮದಾಗಿಸಿಕೊಂಡರು.

3ನೇ ಒಡಿಐ ಪಂದ್ಯದ ಸಂಕ್ಷಿಪ್ತ ಸ್ಕೋರ್‌:

ಆಸ್ಪ್ರೇಲಿಯಾ: 50 ಓವರ್‌ಗಳಲ್ಲಿ7 ವಿಕೆಟ್‌ಗೆ 352 (ಮಿಚೆಲ್‌ ಮಾರ್ಷ್‌ 96, ಡೇವಿಡ್‌ ವಾರ್ನರ್‌ 56, ಸ್ಟೀವನ್‌ ಸ್ಮಿತ್‌ 74, ಮರ್ನಾಸ್‌ ಲಾಬುಶೇನ್‌ 72; ಜಸ್‌ಪ್ರೀತ್‌ ಬುಮ್ರಾ 81ಕ್ಕೆ 3, ಕುಲ್ದೀಪ್‌ ಯಾದವ್‌ 48ಕ್ಕೆ 2).

ಭಾರತ: 49.4 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲ್‌ಔಟ್‌ (ರೋಹಿತ್‌ ಶರ್ಮಾ 81, ವಿರಾಟ್‌ ಕೊಹ್ಲಿ56, ಶ್ರೇಯರ್‌ ಅಯ್ಯರ್‌ 48; ಗ್ಲೆನ್‌ ಮ್ಯಾಕ್ಸ್‌ವೆಲ್‌ 38ಕ್ಕೆ 4, ಜಾಶ್‌ ಹೇಝಲ್‌ವುಡ್‌ 42ಕ್ಕೆ 2).

ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌

ಸರಣಿ ಶ್ರೇಷ್ಠ: ಶುಭ್‌ಮನ್‌ ಗಿಲ್‌

andolanait

Recent Posts

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

31 mins ago

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

43 mins ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

44 mins ago

ಓದುಗರ ಪತ್ರ: ಅಮೃತ ಬೇಕರಿ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…

1 hour ago

ಓದುಗರ ಪತ್ರ:  ತಂಬಾಕು ಉತ್ಪನ್ನ  ಸೆಸ್: ಕಠಿಣ ಕ್ರಮ ಅಗತ್ಯ

ನಿಕೋಟಿನ್, ಪಾನ್ ಮಸಾಲಾ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಆರೋಗ್ಯ ಮತ್ತು…

1 hour ago

ಓದುಗರ ಪತ್ರ:  ಚಾ.ನಗರ-ಮೈಸೂರು ನಡುವೆ ಹೆಚ್ಚಿನ ರೈಲು ಸೌಲಭ್ಯ ಕಲ್ಪಿಸಿ

ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…

2 hours ago