ನವದೆಹಲಿ : ಏಷ್ಯನ್ ಗೇಮ್ಸ್‌ನಲ್ಲಿ ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳಿಗೆ ವೀಸಾ ಹಾಗೂ ಮಾನ್ಯತೆ ನಿರಾಕರಿಸಿರುವ ಚೀನಾದ ಕ್ರಮದ ವಿರುದ್ಧ ಪ್ರತಿಭಟನೆಯಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಚೀನಾ ಪ್ರವಾಸ ರದ್ದುಪಡಿಸಿದ್ದಾರೆ.
ವುಶು ಕ್ರೀಡೆಯ ಮೂವರು ಆಟಗಾರರಾದ ನ್ಯೆಮನ್ ವಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಮ್ಗು ಅವರಿಗೆ ಚೀನಾಕ್ಕೆ ಪ್ರವೇಶ ನೀಡಲು ನಿರಾಕರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರ, ಅನುರಾಗ್ ಠಾಕೂರ್ ಅವರ ಚೀನಾ ಭೇಟಿಯನ್ನು ರದ್ದುಪಡಿಸಿದೆ.
ಭಾರತದ ವುಶು ತಂಡದ ಉಳಿದ ಏಳು ಮಂದಿ ಆಟಗಾರರು ಮತ್ತು ಸಿಬ್ಬಂದಿಯ ವೀಸಾಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅವರು ಹಾಂಕಾಂಗ್‌ಗೆ ತೆರಳಿ, ಅಲ್ಲಿಂದ ಚೀನಾದ ಹಾಂಗ್‌ಝೌ ವಿಮಾನ ಏರಿದ್ದಾರೆ. ಚೀನಾಕ್ಕೆ ಪ್ರಯಾಣಿಸಬೇಕಿದ್ದ ಅರುಣಾಚಲ ಪ್ರದೇಶದ ಮೂವರು ಆಟಗಾರರನ್ನು ದಿಲ್ಲಿಯ ಜವಹರಲಾಲ್ ನೆಹರೂ ಕ್ರೀಡಾಂಗಣದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ಗೆ ಮರಳಿ ಕರೆತರಲಾಗಿದೆ.
“ಚೀನಾದ ಹಾಂಗ್‌ಝೌದಲ್ಲಿ 19ನೇ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾ ಅಧಿಕಾರಿಗಳು ಪೂರ್ವ ನಿರ್ಧಾರಿತ ಮತ್ತು ಉದ್ದೇಶಿತ ರೀತಿಯಲ್ಲಿ ತಾರತಮ್ಯ ಎಸಗಿರುವುದು ಭಾರತ ಸರ್ಕಾರಕ್ಕೆ ತಿಳಿದುಬಂದಿದೆ” ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.
“ನಮ್ಮ ದೀರ್ಘಕಾಲದ ಮತ್ತು ಸ್ಥಿರ ನಿಲುವಿಗೆ ಪೂರಕವಾಗಿ ಭಾರತವು ಪ್ರಾದೇಶಿಕ ಅಥವಾ ಜನಾಂಗದ ಆಧಾರದಲ್ಲಿ ಭಾರತೀಯ ನಾಗರಿಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ತಾರತಮ್ಯ ಎಸಗುವುದನ್ನು ತಿರಸ್ಕರಿಸುತ್ತದೆ. ಅರುಣಾಚಲ ಪ್ರದೇಶವು ಈ ಹಿಂದೆ, ಈಗ ಮತ್ತು ಮುಂದೆ ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗವಾಗಿ ಇರುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಭಾರತದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮಾವೊ ನಿಂಗ್, “ಆತಿಥ್ಯ ವಹಿಸುವ ದೇಶವಾಗಿ ಚೀನಾವು ಎಲ್ಲಾ ದೇಶಗಳ ಕ್ರೀಡಾಪಟುಗಳು ಕಾನೂನುಬದ್ಧ ದಾಖಲೆಗಳೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಹಾಂಗ್‌ಝೌಗೆ ಬರುವುದನ್ನು ಚೀನಾ ಸ್ವಾಗತಿಸುತ್ತದೆ” ಎಂದಿದ್ದಾರೆ.
“ಹಾಗೆಯೇ ‘ಅರುಣಾಚಲ ಪ್ರದೇಶ’ ಎಂಬ ಜಾಗವನ್ನು ಚೀನಾ ಸರ್ಕಾರ ಪರಿಗಣಿಸುವುದಿಲ್ಲ. ಜಂಗ್ನಾನ್ ಚೀನಾ ಭೂಪ್ರದೇಶದ ಭಾಗ” ಎಂದು ನಿಂಗ್ ಹೇಳಿದ್ದಾರೆ. ಭಾರತದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿಲ್ಲ. ಆದರೆ ಪ್ರವಾಸ ದಾಖಲೆಗಳನ್ನು ನೀಡಿದ ಬಳಿಕ ಅವರೇ ಅದನ್ನು ಒಪ್ಪಿಕೊಂಡಿಲ್ಲ ಎಂದು ವಾದಿಸಿದ್ದಾರೆ.
“ಭಾರತದ ಈ ಅಥ್ಲೀಟ್‌ಗಳಿಗೆ ಚೀನಾ ಪ್ರವೇಶಿಸಲು ಈಗಾಗಲೇ ವೀಸಾ ದೊರಕಿದೆ. ಯಾವುದೇ ವೀಸಾವನ್ನು ಚೀನಾ ನಿರಾಕರಿಸಿಲ್ಲ. ದುರದೃಷ್ಟವಶಾತ್ ಅವರು ಈ ವೀಸಾವನ್ನು ಅಥ್ಲೀಟ್‌ಗಳು ಒಪ್ಪಿಕೊಂಡಿಲ್ಲ. ಚೀನಾದಲ್ಲಿ ಸ್ಪರ್ಧಿಸಲು ಪ್ರಮಾಣೀಕರಿಸಿದ ಅರ್ಹತೆ ಹೊಂದಿರುವ ಎಲ್ಲಾ ಅಥ್ಲೀಟ್‌ಗಳಿಗೂ ಅವಕಾಶ ನೀಡಲು ಚೀನಾ ಒಪ್ಪಿಕೊಂಡಿರುವುದರಿಂದ ಇದು ಒಸಿಎ ಸಮಸ್ಯೆ ಅಲ್ಲ” ಎಂದು ಏಷ್ಯಾ ಒಲಿಂಪಿಕ್ ಮಂಡಳಿ (ಒಸಿಎ) ನೀತಿ ಸಮಿತಿ ಅಧ್ಯಕ್ಷ ವೀ ಜಿಝಾಂಗ್ ತಿಳಿಸಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…