ಕ್ರೀಡೆ

Asiacup 2024: ಯುಎಇ ಸೋಲಿಸಿ ಸೆಮಿಸ್‌ಗೆ ಲಗ್ಗೆಯಿಟ್ಟ ಹರ್ಮನ್‌ಪ್ರೀತ್‌ ಪಡೆ

ಡಂಬುಲ್ಲಾ: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್‌ ಹಾಗೂ ರಿಚಾ ಘೋಷ್‌ ಅವರ ಭರ್ಜರಿ ಬ್ಯಾಟಿಂಗ್‌ ಸಹಾಯದಿಂದ ಏಷ್ಯಾಕಪ್‌ 2024ರ ಐದನೇ ಲೀಗ್‌ ಪಂದ್ಯದಲ್ಲಿ ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) ವಿರುದ್ಧ ಟೀಂ ಇಂಡಿಯಾ 78 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ. ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಸೆಮಿಸ್‌ಗೆ ಲಗ್ಗೆಯಟ್ಟಿದೆ.

ಇಲ್ಲಿನ ರಂಗಿರಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್‌ 2024ರ ಟೂರ್ನಿಯ ಐದನೇ ಪಂದ್ಯದಲ್ಲಿ ಟಾಸ್‌ ಸೋತ ಭಾರತ ಮಹಿಳಾ ತಂಡ ಮೊದಲು ಬ್ಯಾಟ್‌ ಮಾಡಿತು. ಅದರಂತೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿ 202ರನ್‌ ಗಳ ಬೃಹತ್‌ ಮೊತ್ತದ ಸವಾಲೊಡ್ಡಿತು. ಈ ಮೊತ್ತ ಬೆನ್ನತ್ತಿದ ಯುಎಇ ಮಹಿಳಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 123 ರನ್‌ ಬಾರಿಸಿ 78 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಭಾರತ ಇನ್ನಿಂಗ್ಸ್‌: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರವಾಗಿ ಆರಂಭಿಕರಾಗಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದನಾ ಕಣಕ್ಕಿಳಿದರು. ಶಫಾಲಿ 37(18) ರನ್‌ ಗಳಿಸಿ ಔಟಾದರೇ, ಸ್ಮೃತಿ ಕೇವಲ 13(9)ರನ್‌ ಗಳಿಸಿ ನಿರ್ಗಮಿಸಿರು. ಬಳಿಕ ಬಂದ ಹೇಮಲತಾ 2(4)ರನ್‌ ಗಳಿಗೆ ಸುಸ್ತಾದರೇ, ರೋಡ್ರಿಗಸ್‌ 14(13)ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ನಂತರ ಒಂದಾದ ನಾಯಕಿ ಹರ್ಮನ್‌ಪ್ರೀತ್‌ ಹಾಗೂ ರಿಚಾ ಗೋಷ್‌ ಜೋಡಿ ಯುಎಇ ಬೌಲರ್‌ಗಳನ್ನು ಕಾಡಿದರು. ನಾಯಕಿ ಕೌರ್‌ 47 ಎಸೆತಗಳಲ್ಲಿ 7ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 66 ರನ್‌ ಬಾರಿಸಿದರೆ, ರಿಚಾ ಕೇವಲ 29 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿ ಔಟಾಗದೇ ಬರೋಬ್ಬರಿ 64 ರನ್‌ ಚಚ್ಚಿದರು. ಪೂಜಾ ಯಾವುದೇ ರನ್‌ ಗಳಿಸದೇ ಔಟಾಗದೇ ಉಳಿದರು.

ಯುಎಇ ಕವಿಶಾ ಎಗ್ಗೋಡ್ಗೆ ಎರಡು ವಿಕೆಟ್‌, ಹೀನಾ ಹೊತ್ಚಂದಾನಿ ಹಾಗೂ ಸಮೈರಾ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಯುಎಇ ಇನ್ನಿಂಗ್ಸ್‌: ಈ ಬೃಹತ್‌ ಮೊತ್ತ ಬೆನ್ನತ್ತಿದ ಯುಎಇಗೆ ನಿರೀಕ್ಷಿತಾ ಆರಂಭ ಕಂಡುಬರಲಿಲ್ಲ. ಆರಂಭಿಕ ಆಟಗಾರ್ತಿ ತೀರ್ಥಾ ಸತೀಶ್‌ ಕೇವಲ 4(12)ರನ್‌ ಗಳಿಸಿ ಔಟಾದರು. ನಾಯಕಿ ರೋಹಿತ್‌ ಓಜಾ 38(36) ರನ್‌, ರಿನಿತಾ ರಜಿತ್‌ 7(3)ರನ್‌, ಸಮೈರಾ 5(8)ರನ್‌, ಖುಷಿ ಶರ್ಮಾ 10(13)ರನ್‌, ಹೀನಾ ಹೊತ್ಚಂದಾನಿ 8(9)ರನ್‌, ರಿತಿಕಾ 6(7)ರನ್‌ ಗಳಿಸಿದರು.

ಕವಿಶಾ 32 ಎಸೆತ 3 ಬೌಂಡರಿ ಹಾಗು 1 ಸಿಕ್ಸರ್‌ ಸಹಿತ ಔಟಾಗದೇ 40 ರನ್‌ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಇನ್ನು ಕವಿಶಾ ಗಳಿಸಿದ್ದೇ ತಂಡದ ಪರವಾಗಿ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಟೀಂ ಇಂಡಿಯಾ ಪರವಾಗಿ ದೀಪ್ತಿ ಶರ್ಮಾ 2, ರೇಣುಕಾ ಠಾಕೂರ್‌, ತನುಜಾ, ಪೂಜಾ ಹಾಗೂ ರಾಧಾ ಯಾದವ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಪಂದ್ಯ ಶ್ರೇಷ್ಠ: ರಿಚಾ ಘೋಷ್‌

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ 4 ತಾಸು ಲಾಕ್‌ ಆದ ವ್ಯಕ್ತಿ

ಯಳಂದೂರು: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ 4 ತಾಸು ಒದ್ದಾಟ ನಡೆಸಿದ ಘಟನೆ ಯಳಂದೂರು ತಾಲ್ಲೂಕಿನ ಗಂಗವಾಡಿಯಲ್ಲಿ…

18 mins ago

“ಸಿದ್ದರಾಮಯ್ಯ ಅನಿವಾರ್ಯತೆ” ವಿಚಾರವಾಗಿ ನಾಳೆ ಅಹಿಂದ ಸಮಾವೇಶ ಕುರಿತು ಸಭೆ

ಮೈಸೂರು: ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಾದಾಟ ತೀವ್ರಗೊಳ್ಳುತ್ತಿದ್ದಂತೆ, ಅಹಿಂದ ಸಮಾವೇಶದ ಹೆಸರಿನಲ್ಲಿ ಭಾರೀ ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಮುಖ್ಯಮಂತ್ರಿ…

34 mins ago

ಮೈಸೂರು: ಬೀದಿನಾಯಿ ಹೊತ್ತೊಯ್ದ ಚಿರತೆ

ಮೈಸೂರು: ಚಿರತೆಯೊಂದು ರಾತ್ರೋರಾತ್ರಿ ಬೀದಿ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಮೈಸೂರಿನ ಹೊರವಲಯದ ಬೆಳಗಾವಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಕಾಡು…

53 mins ago

ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು,- ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್)…

1 hour ago

ಟೆಕ್ಸಾಸ್‌ ಕರಾವಳಿ ಬಳಿ ಮೆಕ್ಸಿಕನ್‌ ನೌಕಾಪಡೆ ವಿಮಾನ ಪತನ: 5 ಮಂದಿ ಸಾವು

ಅಮೇರಿಕಾ: ಯುವ ರೋಗಿಯನ್ನು ಹಾಗೂ ಇತರ ಏಳು ಜನರನ್ನು ಸಾಗಿಸುತ್ತಿದ್ದ ಮೆಕ್ಸಿಕ್ನ ನೌಕಾಪಡೆಯ ಸಣ್ಣ ವಿಮಾನವು ಗಾಲ್ವೆಸ್ಟನ್‌ ಬಳಿ ಪತನಗೊಂಡು…

2 hours ago

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ಪ್ರಕಾಶ್‌ ರಾಜ್‌ ಆಯ್ಕೆ

ಬೆಂಗಳೂರು: 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್‌ ರಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.…

2 hours ago