ಕ್ರೀಡೆ

ಆಷಸ್‌ ಟೆಸ್ಟ್‌ ಸರಣಿ: ಇಂಗ್ಲೆಂಡ್‌ ಎದುರು ರೋಚಕ ಜಯ ದಾಖಲಿಸಿದ ಆಸ್ಟ್ರೇಲಿಯಾ!

ಬರ್ಮಿಂಗ್‌ಹ್ಯಾಮ್‌: ಪ್ರಸಕ್ತ ಸಾಲಿನ ದಿ ಆಷಸ್‌ ಟೆಸ್ಟ್‌ ಸರಣಿಯ ಮೊದಲ ಹಣಾಹಣಿಯ ಐದನೇ ಹಾಗೂ ಅಂತಿಮ ದಿನದಾಟದ ಕೊನೇ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕೈಲಿದ್ದ 3 ವಿಕೆಟ್‌ಗಳಿಂದ 73 ರನ್‌ ಕಲೆಹಾಕುವ ಸಂಕಷ್ಟದ ಸ್ಥಿತಿ ಎದುರಾಗಿತ್ತು. ಪಂದ್ಯದಲ್ಲಿ ಇಂಗ್ಲೆಂಡ್‌ ಬಹುಪಾಲು ಪ್ರಾಬಲ್ಯ ಮೆರದಿದ್ದ ಕಾರಣ ಗೆಲ್ಲುವ ಫೇವರಿಟ್‌ ಕೂಡ ಆಗಿತ್ತು. ಈ ಹಂತದಲ್ಲಿ ಇಂಗ್ಲೆಂಡ್‌ ಗೆಲ್ಲುತ್ತದೆ ಎಂದು ಬಾಜಿ ಕಟ್ಟಿದ್ದವರ ಸಂಖ್ಯೆಯೇ ಹೆಚ್ಚು. ಆದರೆ, ಛಲ ಬಿಡದೆ ಬ್ಯಾಟ್‌ ಬೀಸಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ (44*) ದಿಟ್ಟ ಆಟವಾಡಿ 9ನೇ ವಿಕೆಟ್‌ಗೆ ಸ್ಪಿನ್ನರ್‌ ನೇಥನ್ ಲಯಾನ್‌ (16*) ಜೊತೆಗೂಡಿ 72 ಎಸೆತಗಳಲ್ಲಿ ಮುರಿಯದ 55 ರನ್‌ಗಳ ಜೊತೆಯಾಟವಾಡುವ ಮೂಲಕ ಕಾಂಗರೂ ಪಡೆಗೆ 2 ವಿಕೆಟ್‌ಗಳ ಅವಿಸ್ಮರಣೀಯ ಜಯ ತಂದುಕೊಟ್ಟರು.

ಬ್ಯಾಝ್‌ ಬಾಲ್‌ ಕ್ರಿಕೆಟ್‌ ರಣತಂತ್ರ ಈ ಬಾರಿ ಇಂಗ್ಲೆಂಡ್‌ಗೆ ತಿರುಗುಬಾಣವಾಯಿತು. ಟೆಸ್ಟ್‌ ಕ್ರಿಕೆಟ್‌ ಅನ್ನು ಒಡಿಐ ಕ್ರಿಕೆಟ್‌ ಮಾದರಿ ಬಿರುಸಾಗಿ ಆಡಿದರೆ ಗೆಲುವು ಖಚಿತ ಎಂಬ ರಣತಂತ್ರ ಈ ಬಾರಿ ಇಂಗ್ಲೆಂಡ್‌ಗೆ ಯಶಸ್ಸು ತಂದುಕೊಡಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 400ಕ್ಕೂ ಹೆಚ್ಚು ರನ್‌ ಕಲೆಹಾಕುವ ಅವಕಾಶವಿದ್ದರೂ ಬೆನ್‌ ಸ್ಟೋಕ್ಸ್‌ ಸಾರಥ್ಯದ ಇಂಗ್ಲೆಂಡ್‌ 383/8 ರನ್‌ಗಳಿಗೆ ಮೊದಲ ದಿನವೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದ್ದು, ಸೋಲಿಗೆ ಬಹುಮುಖ್ಯ ಕಾರಣಗಳಲ್ಲಿ ಒಂದಾಯಿತು.

ಪ್ರಥಮ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ 7 ರನ್‌ಗಳ ಅಲ್ಪ ಮುನ್ನಡೆ ಲಭ್ಯವಾದರೂ, ತನ್ನ ಆಕ್ರಮಣಕಾರಿ ಆಟದಿಂದ ಪಂದ್ಯ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಈ ರೋಚಕ ಜಯದೊಂದಿಗೆ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡ 2023ರ ಸಾಲಿನ ಆಷಸ್‌ ಟೆಸ್ಟ್‌ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಆಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌:
78 ಓವರ್‌ಗಳಲ್ಲಿ 393/8 ಡಿಕ್ಲೇರ್‌ (ಜೋ ರೂಟ್ 118, ಜಾಣಿ ಬೈರ್‌ಸ್ಟೋವ್‌ 78; ನೇಥನ್ ಲಯಾನ್ 149ಕ್ಕೆ 4).
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 116.1 ಓವರ್‌ಗಳಲ್ಲಿ 386 ಆಲ್‌ಔಟ್‌ (ಉಸ್ಮಾನ್ ಖವಾಜ 141, ಅಲೆಕ್ಸ್‌ ಕೇರಿ 66; ಓಲೀ ರಾಬಿನ್ಸನ್ 55ಕ್ಕೆ 3).
ಇಂಗ್ಲೆಂಡ್‌: ದ್ವಿತೀಯ ಇನಿಂಗ್ಸ್: 66.2 ಓವರ್‌ಗಳಲ್ಲಿ 273ಕ್ಕೆ ಆಲ್‌ಔಟ್‌ (ಜೋ ರೂಟ್‌ 46, ಹ್ಯಾರಿ ಬ್ರೂಕ್ 46; ಪ್ಯಾಟ್‌ ಪಮಿನ್ಸ್‌ 61ಕ್ಕೆ 4).
ಆಸ್ಟ್ರೇಲಿಯಾ: ಎರಡನೇ ಇನಿಂಗ್ಸ್‌: (ಉಸ್ಮಾನ್‌ ಖವಾಜ 65, ಪ್ಯಾಟ್‌ ಕಮಿಮ್ಸ್‌ 44*)
ಪಂದ್ಯಶ್ರೇಷ್ಠ: ಉಸ್ಮಾನ್‌ ಖವಾಜ

ದಾಖಲೆ ಬರೆದ ಖವಾಜ
ಆಸ್ಟ್ರೇಲಿಯಾ ತಂಡದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ, ಎಡ್ಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. 2023ರ ಸಾಲಿನ ದಿ ಆಷಸ್‌ ಟೆಸ್ಟ್‌ ಸರಣಿಯ ಪ್ರಥಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 141 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 65 ರನ್‌ ಬಾರಿಸಿದ ಖವಾಜ, ಕಳೆದ 30 ವರ್ಷಗಳಲ್ಲಿ ಆಷಸ್ ಸರಣಿಯಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿದ ಆಸೀಸ್‌ನ ಮೊದಲ ಓಪನರ್‌ ಎಂಬ ಹೆಗ್ಗಳಿಕೆ ಸಂಪಾದಿಸಿದ್ದಾರೆ.

ಇದಕ್ಕೂ ಮುನ್ನ 1989ರಲ್ಲಿ ಮಾರ್ಕ್‌ ಟೇಲರ್‌ ಈ ಸಾಧನೆ ಮೆರೆದಿದ್ದರು. ಹೆಂಡಿಗ್ಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಟೇಲರ್‌ 136 ಮತ್ತು 60 ರನ್‌ ಬಾರಿಸಿದ್ದರು. ಉಸ್ಮಾನ್‌ ಖವಾಜ ತಮ್ಮ ಮನಮೋಹಕ ಬ್ಯಾಟಿಂಗ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವ ಪಡೆದುಕೊಂಡರು. ಸರಣಿಯ ಎರಡನೇ ಪಂದ್ಯ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಜೂನ್ 28ರಿಂದ ಜುಲೈ 2ರವರೆಗೆ ನಡೆಯಲಿದೆ.

andolanait

Recent Posts

ಕೃಷಿ ಜತೆಗೆ ಬೃಹತ್ ಕೈಗಾರಿಕಾ ಬೆಳವಣಿಗೆ ಅಗತ್ಯ; ಜಯಕುಮಾರ್

ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…

17 mins ago

ಕುವೈತ್‌ ಭೇಟಿ: ಅರೇಬಿಯನ್‌ ಗಲ್ಫ್‌ ಕಪ್‌ ಉದ್ಘಾಟನೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ

ಕುವೈತ್‌/ನವದೆಹಲಿ: 26ನೇ ಅರೇಬಿಯನ್‌ ಗಲ್ಫ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್‌ ದೊರೆ ಶೇಖ್‌ ಮಿಶಾಲ್‌…

23 mins ago

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ

371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…

24 mins ago

ಬಿಜೆಪಿಗೆ ಆತಂಕ ತಂದ ಶಾ ಅಂತರಾಳದ ಮಾತು

‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…

35 mins ago

ವೈಜ್ಞಾನಿಕ ಕಸ ವಿಲೇವಾರಿಗೆ ಜಾಗದ ಸಮಸ್ಯೆ

ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…

46 mins ago

ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಹಲವು ಸಮಸ್ಯೆಗಳು

ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…

1 hour ago