ಕ್ರೀಡೆ

ಕೊನೆಗೂ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್‌!

ಮುಂಬೈ : ಕ್ರಿಕೆಟ್‌ ಪ್ರಿಯರು ಬಹುಸಮಯ ಕಾತುರದಿಂದ ಎದುರು ನೋಡಿದ್ದ ದಿನ ಬಂದಾಗಿದ್ದು, ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಕಣಕ್ಕಿಳಿದ ಎಡಗೈ ವೇಗದ ಬೌಲರ್‌ 24 ವರ್ಷದ ಅರ್ಜುನ್‌ ತೆಂಡೂಲ್ಕರ್‌ ತಮ್ಮ ಐಪಿಎಲ್‌ ವೃತ್ತಿಬದುಕು ಆರಂಭಿಸಿದರು.‌

ರೋಹಿತ್‌ ಶರ್ಮಾ ಕ್ಯಾಪ್‌ ತೊಡಿಸಿದರು
ಆಟದ ಹೊರೆ ನಿರ್ವಹಣೆ ನಿಟ್ಟಿನಲ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ವಿಶ್ರಾಂತಿ ತೆಗೆದುಕೊಂಡರು. ಅವರ ಜಾಗದಲ್ಲಿ ಸ್ಟಾರ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ಇನ್ನು ಮುಂಬೈ ಇಂಡಿಯನ್ಸ್‌ ತಂಡದ ಆಡುವ 11ರ ಬಳಗಕ್ಕೆ ಇಬ್ಬರು ಆಟಗಾರರು ಪದಾರ್ಪಣೆ ಮಾಡಿದರು. ರೋಹಿತ್‌ ಶರ್ಮಾ ಅವರಿಂದ ಕ್ಯಾಪ್‌ ಸ್ವೀಕರಿಸಿದ ಅರ್ಜುನ್‌ ತೆಂಡೂಲ್ಕರ್‌ ಮತ್ತು ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್‌ ಡುವಾನ್‌ ಯೆನ್ಸನ್‌ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.

ಪಂದ್ಯಕ್ಕೂ ಮುನ್ನ ಆನ್‌ ಫೀಲ್ಡ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ ಮತ್ತು ಸಚಿನ್ ತೆಂಡೂಲ್ಕರ್‌ ಒಟ್ಟಾಗಿ ಕಾಣಿಸಿಕೊಂಡರು. ಪುತ್ರನ ಪದಾರ್ಪಣೆಯ ಬಗ್ಗೆ ತಿಳಿದಿದ್ದ ಮಾಸ್ಟರ್‌ ಬ್ಲಾಸ್ಟರ್‌ ಕೆಲ ಮಹತ್ವದ ಸಲಹೆಗಳನ್ನು ನೀಡುತ್ತಿರುವುದು ಕಂಡುಬಂದಿತು. ಅಂತೆಯೇ ಮುಂಬೈ ಪರ ಬೌಲಿಂಗ್‌ನಲ್ಲಿ ಇನಿಂಗ್ಸ್‌ ಆರಂಭಿಸಿದ ಎಡಗೈ ವೇಗಿ ಅರ್ಜುನ್‌ ತೆಂಡೂಲ್ಕರ್‌, ಮೊದಲ ಎರಡು ಓವರ್‌ಗಳಲ್ಲಿ 18 ರನ್‌ ಕೊಟ್ಟರು. ಹೊಸ ಚೆಂಡಿನಲ್ಲಿ ಉತ್ತಮ ಸ್ವಿಂಗ್‌ ತರುವ ಮೂಲಕ ಗಮನ ಸೆಳೆದರು.

ಮುಂಬೈನಿಂದ ಗೋವಾ ತಂಡಕ್ಕೆ
ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಪರ ಆಡಿದ್ದ ಅರ್ಜುನ್‌ ತೆಂಡೂಲ್ಕರ್‌, ನಂತರ ಅವಕಾಶ ಹುಡುಕಿಕೊಂಡು ಗೋವಾ ಕ್ರಿಕೆಟ್‌ ಸಂಸ್ಥೆ ತಂಡದ ಪರ ಆಡಲು ಮುಂದಾದರು. ಈವರೆಗೆ ತಲಾ 7 ರಣಜಿ ಟ್ರೋಫಿ ಕ್ರಿಕೆಟ್‌ ಮತ್ತು ಲಿಸ್ಟ್‌ ‘ಎ’ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಅರ್ಜುನ್‌, ಕ್ರಮವಾಗಿ 12 ಮತ್ತು 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ 2021 ಟೂರ್ನಿ ಸಲುವಾಗಿ ನಡೆದ ಆಟಗಾರರ ಹರಾಜಿನಲ್ಲಿ ಅರ್ಜುನ್‌ ಮುಂಬೈ ಇಂಡಿಯನ್ಸ್‌ ಸೇರಿದ್ದರು, ಐಪಿಎಲ್‌ 2023 ಟೂರ್ನಿ ಸಲುವಾಗಿ ಮುಂಬೈ ತಂಡ ಹರಾಜಿನಲ್ಲಿ 30 ಲಕ್ಷ ರೂ. ನೀಡಿ ಅರ್ಜುನ್ ಸೇವೆಯನ್ನು ಮರಳಿ ತನ್ನದಾಗಿಸಿಕೊಂಡಿತ್ತು.

 

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago