ಕ್ರೀಡೆ

ಕ್ರಿಕೆಟ್‌ ಇತಿಹಾಸದಲ್ಲಿ ʼಟೈಮ್ಡ್‌ ಔಟ್ʼ ಗೆ ಬಲಿಯಾದ ಮೊದಲ ಆಟಗಾರ ಆ್ಯಂಜೆಲೊ ಮ್ಯಾಥ್ಯೂಸ್‌

ನವದೆಹಲಿ : ಕ್ರಿಕೆಟಿನಲ್ಲಿ ಬ್ಯಾಟರ್ ಹಲವು ರೀತಿಗಳಲ್ಲಿ ಔಟ್‌ ಆಗುತ್ತಾರೆ, ಆದರೆ “ಟೈಮ್ಡ್‌ ಔಟ್”‌ ಕಾರಣ ಔಟ್‌ ಆಗುವುದು ಅಪರೂಪದಲ್ಲೇ ಅಪರೂಪ.

ಸೋಮವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ರಾಜಧಾನಿಯಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ, “ಟೈಮ್ಡ್‌ ಔಟ್”‌ ಆದ ಶ್ರೀಲಂಕಾದ ಆಟಗಾರ ಆ್ಯಂಜೆಲೊ ಮ್ಯಾಥ್ಯೂಸ್‌, ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಮೊದಲ ಬಾರಿ “ಟೈಮ್ಡ್‌ ಔಟ್”‌ ಆದ ಕ್ರಿಕೆಟಿಗ ಆಗಿದ್ದಾರೆ.

ಶ್ರೀಲಂಕಾ ತಂಡದ ನಂ. 6 ಬ್ಯಾಟರ್ ಆಗಿ ಕ್ರೀಸ್‌ನತ್ತ ನಡೆಯುತ್ತಿದ್ದ ಮ್ಯಾಥ್ಯೂಸ್‌ ಅವರಿಗೆ ಅವರ ಹೆಲ್ಮೆಟ್‌ನಲ್ಲಿನ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಕ್ರೀಸ್‌ ತಲುಪಲು ಸಾಧ್ಯವಾಗಲಿಲ್ಲ.

ಈ ಕಾರಣ ಔಟ್‌ ಅಪೀಲನ್ನು ಬಾಂಗ್ಲಾದೇಶ ತಂಡ ಮಾಡಿತು. ನಂತರ ಅಂಪೈರ್‌ಗಳು ಮ್ಯಾಥ್ಯೂಸ್‌ ಮತ್ತು ಬಾಂಗ್ಲಾದೇಶ ತಂಡದ ಆಟಗಾರರ ಜೊತೆ ಸಮಾಲೋಚನೆ ನಡೆಸಿ ಕೊನೆಗೆ ಮ್ಯಾಥ್ಯೂಸ್‌ ಅವರನ್ನು ಔಟ್‌ ಎಂದು ಘೋಷಿಸಿದರು.

ಟೈಮ್ಡ್‌ ಔಟ್‌ ಎಂದರೇನು? : ಐಸಿಸಿ ಪ್ರಕಾರ ಈ ಕೆಳಗಿನ ಸನ್ನಿವೇಶಗಳಲ್ಲಿ ಬ್ಯಾಟರ್ ಒಬ್ಬರನ್ನು ಟೈಮ್ಡ್‌ ಔಟ್‌ ಎಂದು ಘೋಷಿಸಲಾಗುತ್ತದೆ.

ಒಂದು ವಿಕೆಟ್‌ ಪತನಗೊಂಡಾಗ ಅಥವಾ ಬ್ಯಾಟರ್ ಒಬ್ಬರು ಯಾವುದೋ ಕಾರಣಕ್ಕೆ ಮೈದಾನದಿಂದ ಹೊರಹೋಗಲು ನಿರ್ಧರಿಸಿದಲ್ಲಿ ಹಾಗಾದ ಮೂರು ನಿಮಿಷಗಳೊಳಗೆ ಹೊಸ ಬ್ಯಾಟ್ಸ್‌ಮೆನ್‌ ಕ್ರೀಸಿಗೆ ಬಂದು ಮುಂದಿನ ಬಾಲ್‌ ಎದುರಿಸಲು ಸಜ್ಜಾಗಬೇಕು. ಇಲ್ಲದೇ ಹೋದಲ್ಲಿ ಟೈಮ್ಡ್‌ ಔಟ್‌ ಘೋಷಿಸಲಾಗುತ್ತದೆ.

ಆದರೆ ನಿಯಮಗಳ ಪ್ರಕಾರ ಈ ರೀತಿ ಟೈಮ್ಡ್‌ ಔಟ್‌ ಆದಾಗ ಅದರ ಶ್ರೇಯ ಬೌಲರ್‌ಗೆ ಹೋಗುವುದಿಲ್ಲ.

ಆದರೆ ಐಸಿಸಿ ವಿಶ್ವ ಕಪ್‌ 2023 ನಿಯಮಗಳ ಪ್ರಕಾರ ಕ್ರೀಸಿಗೆ ಬರಲು ಬ್ಯಾಟರ್ ಗೆ ಇರುವ ಸಮಯಾವಕಾಶ 2 ನಿಮಿಷಗಳಾಗಿವೆ. ಒಬ್ಬ ಬ್ಯಾಟರ್ ಔಟ್‌ ಆದರೆ ಅಥವಾ ಆಟದಿಂದ ನಿವೃತ್ತರಾಗಿ ಹೊರಹೋದ ಎರಡು ನಿಮಿಷಗಳಲ್ಲಿ ಹೊಸ ಬ್ಯಾಟರ್ ಕ್ರೀಸಿಗೆ ಬಂದು ಬಾಲ್‌ ಎದುರಿಸಬೇಕು ಎಂದು ವಿಶ್ವಕಪ್‌ ನಿಯಮಗಳು ತಿಳಿಸುತ್ತವೆ.

andolanait

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

2 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

2 hours ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

2 hours ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

2 hours ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

2 hours ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

2 hours ago