ಬೆಂಗಳೂರು : ಲಂಕೇಶ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಮಹಾರಾಜ ಟ್ರೋಫಿ 22ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಮಂಗಳೂರು ಡ್ರ್ಯಾಗನ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.
ಮಂಗಳೂರು ಡ್ರ್ಯಾಗನ್ ತಂಡವು ನೀಡಿದ 140 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ ತಂಡ ಕೇವಲ 16.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಮೂಲಕ ಟೂರ್ನಿಯಲ್ಲಿ 5ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡ, ಮೊನಿಶ್ ರೆಡ್ಡಿ (3/42) ಮತ್ತು ಜಗದೀಶ ಸುಚಿತ್ (2-24) ನೇತೃತ್ವದ ಶಿಸ್ತಿನ ಬೌಲಿಂಗ್‌ಗೆ ಮಂಡಿಯೂರಿತು. ರೋಹನ್ ಪಾಟೀಲ್ 52(42) ಹೊರತಾಗಿ ಮತ್ತಾರಿಂದಲೂ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ನಾಯಕ ಗೌತಮ್ 15(14), ಅನೀಶ್ವರ್ ಗೌತಮ್ 11(13) ತಂಡಕ್ಕೆ ಆಸರೆಯಾದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 140 ರನ್ ಗಳಿಸಲಷ್ಟೇ ಶಕ್ತರಾದರು.
ಈ ಮೊತ್ತವನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಸಮರ್ಥ 6(5) ಮತ್ತು ಭರತ್ ಧುರಿ 10(9) ಬೇಗ ಪೆವಿಲಿಯನ್ ಸೇರಿದರು. ನಾಯಕ ಕರುಣ್ ನಾಯರ್ 43(25) ಸಮಯೋಚಿತ ಆಟ ಹಾಗೂ ಲಂಕೇಶ್ ಕೆ.ಎಸ್ 68(45) ಅಮೋಘ ಬ್ಯಾಟಿಂಗ್ ಪ್ರದರ್ಶನ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
ಸ್ಕೋರ್ ಬೋರ್ಡ್:
ಮಂಗಳೂರು ಡ್ರಾಗನ್ಸ್: 20 ಓವರ್‌ಗಳಲ್ಲಿ 140-8: ರೋಹನ್ ಪಾಟೀಲ್ 52 (42), ಕೃಷ್ಣಪ್ಪ ಗೌತಮ್ 15(14), ಅನಿರುದ್ಧ ಜೋಶಿ 13(17), ಮೋನಿಶ್ ರೆಡ್ಡಿ 3-42, ಜಗದೀಶ ಸುಚಿತ್ 2-24, ಶ್ರೀಶ ಆಚಾರ್ 2-24.
ಮೈಸೂರು ವಾರಿಯರ್ಸ್: 16.3 ಓವರ್‌ಗಳಲ್ಲಿ 141-3: ಕೆ.ಎಸ್. ಲಂಕೇಶ್ 68*(45) , ಕರುಣ್ ನಾಯರ್ 43 (25), ಶೋಯಬ್ ಮ್ಯಾನೇಜರ್ 11 (15), ಎಂ.ಜಿ. ನವೀನ್ 1-12, ಪಾರಸ್ ಆರ್ಯ 1-35
ಪಂದ್ಯ ಶ್ರೇಷ್ಠ : ಕೆ.ಎಸ್.ಲಂಕೇಶ್
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…