ವೆಲ್ಲಿಂಗ್ಟನ್: ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ವರ್ಷವಿಡೀ ವಿಶ್ವದ ವಿವಿಧ ಮೈದಾನಗಳಲ್ಲಿ ಬೌಲರ್ಗಳನ್ನು ಧ್ವಂಸ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ನ್ಯೂಜಿಲೆಂಡ್ ಪ್ರವಾಸದಲ್ಲೂ ಅದೇ ರೀತಿ ಅಮೋಘ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಯುಜ್ವೇಂದ್ರ ಚಹಾಲ್ ಮತ್ತು ದೀಪಕ್ ಹೂಡಾ ಅವರ ಸ್ಪಿನ್ ಈ ಅಡಿಪಾಯದ ಮೇಲೆ ಯಶಸ್ವಿ ಕಟ್ಟಡವನ್ನು ನಿರ್ಮಿಸಿತು.
ಚೇಸಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಕಳೆದ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಆಟವಾಡಿದ್ದ ಆರಂಭಿಕ ಫಿನ್ ಅಲೆನ್ ವಿಕೆಟ್‌ಅನ್ನು 2ನೇ ಎಸೆತದಲ್ಲಿಯೇ ಕಳೆದುಕೊಂಡಿತ್ತು. ಆರಂಭದಲ್ಲಿಯೇ ಎದುರಾದ ಈ ಆಘಾತದ ಬಳಿಕ ನ್ಯೂಜಿಲೆಂಡ್ ತಂಡ ಚೇತಿರಿಸಿಕೊಳ್ಳಲಿಲ್ಲ. ಡೆವೋನ್ ಕಾನ್ವೆ (25) ಹಾಗೂ ನಾಯಕ ಕೇನ್ ವಿಲಿಯಮ್ಸನ್ (61) 2ನೇ ವಿಕಟ್‌ಗೆ 56 ರನ್ ಜೊತೆಯಾಟವಾಡಿದರೂ, ತಂಡದ ಬ್ಯಾಟಿಂಗ್ ನಿಧಾನಗತಿಯಲ್ಲಿತ್ತು. 22 ಎಸೆತಗಳಲ್ಲಿ 25 ರನ್ ಬಾರಿಸಿದ ಕಾನ್ವೆಯನ್ನು ವಾಷಿಂಗ್ಟನ್ ಸುಂದರ್ ಡಗ್‌ಔಟ್‌ಗೆ ಕಳಿಸಿದರೆ, 6 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್, ಬೌಂಡರಿಗಳಿದ್ದ 12 ರನ್ ಬಾರಿಸಿದ್ದ ಗ್ಲೆನ್ ಫಿಲಿಪ್ಸ್, ಚಾಹಲ್ ಎಸೆತದಲ್ಲಿ ಬೌಲ್ಡ್ ಆದರು.
ಆ ಬಳಿಕ ನ್ಯೂಜಿಲೆಂಡ್ ತಂಡದ ಹೋರಾಟ ಹೆಚ್ಚಾಗಿ ಉಳಿಯಲಿಲ್ಲ.ಡೇರಿಲ್ ಮಿಚೆಲ್ (10) ಅವರೊಂದಿಗೆ ಕೇನ್ ವಿಲಿಯಮ್ಸನ್ ಕೆಲ ಹೊತ್ತು ಆಟಡವಾಡಿದರು. ಒಂದು ಹಂತದಲ್ಲಿ 88 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ 99 ರನ್ ಬಾರಿಸುವ ವೇಳೆಗೆ 6 ವಿಕೆಟ್ ಕಳೆದುಕೊಂಡಿತು. ಡೇರಿಲ್ ಮಿಚೆಲ್, ಜಿಮ್ಮಿ ನೀಶಾಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ವಿಕೆಟ್ ಕಳೆದುಕೊಂಡಿದ್ದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ನಾಯಕ ಕೇನ್ ವಿಲಿಯಮ್ಸನ್ 52 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಇದ್ದ 61 ರನ್ ಬಾರಿಸಿ ಮೊಹಮದ್ ಸಿರಾಜ್‌ಗೆ ಔಟಾದರು. ಆ ಬಳಿಕ ಕಿವೀಸ್ ತಂಡದ ಗೆಲುವಿನ ಆಸೆ ಒಂಚೂರು ಉಳಿದುಕೊಂಡಿರಲಿಲ್ಲ.
4 ವಿಕೆಟ್ ಉರುಳಿಸಿದ ದೀಪಕ್ ಹೂಡಾ: ಡೇರಿಲ್ ಮಿಚೆಲ್ ವಿಕೆಟ್ ಉರುಳಿಸಿದ್ದ ದೀಪಕ್ ಹೂಡಾ, 19ನೇ ಓವರ್‌ನ ದಾಳಿಯಲ್ಲಿ, ಇಶ್ ಸೋಧಿ, ಟಿಮ್ ಸೌಥಿ ಹಾಗೂ ಆಡಂ ಮಿಲ್ನೆ ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅದರೊಂದಿಗೆ 10 ರನ್‌ಗೆ 4 ವಿಕೆಟ್ ಉರುಳಿಸುವ ಮೂಲಕ ಕೂಡ ಗಮನಸೆಳೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಸಿಡಿಸಿದ್ದ ಅಜೇಯ 111 ರನ್‌ಗಳ ನೆರವಿನಿಂದ 6 ವಿಕೆಟ್‌ಗೆ 191 ರನ್ ಪೇರಿಸಿತು.ಆರಂಭಿಕ ಆಟಗಾರ ಇಶಾನ್ ಕಿಶನ್ 31 ಎಸೆತಗಳಲ್ಲಿ 36 ರನ್ ಬಾರಿಸಿದರೆ, ರಿಷಭ್ ಪಂತ್ ಕೇವಲ 6 ರನ್ ಬಾರಿಸಿ ನಿರಾಸೆ ಕಂಡರು. ಶ್ರೇಯಸ್ ಅಯ್ಯರ್ (13), ನಾಯಕ ಹಾರ್ದಿಕ್ ಪಾಂಡ್ಯ (13) ಸೂರ್ಯಕುಮಾರ್ ಯಾದವ್‌ಗೆ ಉತ್ತಮ ಸಾಥ್ ನೀಡಿ ತಂಡದ ದೊಡ್ಡ ಮೊತ್ತಕ್ಕೆ ನೆರವಾದರು.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…