ಕ್ರೀಡೆ

ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ ಒಂದಕ್ಕೆ 11 ಕೋಟಿ ರೂ. ಗಳಿಕೆ.?’: ಸ್ಪಷ್ಟನೆ ನೀಡಿದ ಕೊಹ್ಲಿ.!

ನವದೆಹಲಿ : ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದೇ ಒಂದು ಪ್ರಮೋಷನ್‌ ಪೋಸ್ಟ್‌ಗೆ 11. 45 ಕೋಟಿ ರೂ. ಸಂಭಾವನೆ ಪಡೆಯುತ್ತಾರೆಂಬ ಸುದ್ದಿ ಕಳೆದ ಎರಡು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದನ್ನು ಗಮನಿಸಿದ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಸಲೋಷನ್ಸ್‌ ಫ್ಲಾಟ್‌ಪಾರ್ಮ್‌ ಹಾಪರ್‌ ಎಚ್‌ಕ್ಯೂ ಶುಕ್ರವಾರ ವಿರಾಟ್‌ ಕೊಹ್ಲಿ ಸೋಶಿಯಲ್‌ ಮೀಡಿಯಾ ಆದಾಯದ ಬಗ್ಗೆ ವರದಿಯನ್ನು ಮಾಡಿತ್ತು. ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್‌ ಮೆಸ್ಸಿ ಬಳಿಕ ವಿಶ್ವದಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂರನೇ ಕ್ರೀಡಾಪಟು ವಿರಾಟ್‌ ಕೊಹ್ಲಿ ಎಂದು ತಿಳಿಸಿತ್ತು. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇದೀಗ ಸ್ವತಃ ವಿರಾಟ್‌ ಕೊಹ್ಲಿ ಅವರೇ ಸ್ಪಷ್ಟನೆ ನೀಡಿದ್ದಾರೆ. ತಾನು ಒಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ 11.45 ಕೋಟಿ ರೂ ಪಡೆಯುತ್ತೇನೆಂಬುದು ಸುಳ್ಳು ಎಂದು ಹೇಳಿದ್ದಾರೆ. “ನಾನು ನನ್ನ ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ, ನನ್ನ ಸೋಶಿಯಲ್‌ ಮೀಡಿಯಾ ಗಳೆಕೆಯ ಬಗ್ಗೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ,” ಎಂದು ವಿರಾಟ್‌ ಕೊಹ್ಲಿ ಶನಿವಾರ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಕೊಹ್ಲಿ ಸಕ್ರಿಯ

ವಿರಾಟ್‌ ಕೊಹ್ಲಿ ಕ್ರಿಕೆಟ್‌ ಚಟುವಟಿಕೆಗಳ ಜೊತೆಗೆ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿ ನಿತ್ಯ ಒಂದಲ್ಲ ಒಂದು ಪೋಸ್ಟ್ ಅನ್ನು ಮಾಡುತ್ತಿರುತ್ತಾರೆ. ವರ್ಕ್‌ಔಟ್‌ ವಿಡಿಯೋ, ಬ್ಯಾಟಿಂಗ್‌ ವಿಡಿಯೋ, ತಮ್ಮ ಪತ್ನಿ ಜೊತೆ ತರಬೇತಿ ಅವಧಿಯ ವಿಡಿಯೋಗಳನ್ನು ಹಾಕುತ್ತಾರೆ. ಇದರ ಜೊತೆಗೆ ಅವರು ಕೆಲ ಉತ್ಪನ್ನಗಳ ಪ್ರಮೋಷನ್‌ ಪೋಸ್ಟ್‌ಗಳನ್ನು ಕೂಡ ಹಾಕುತ್ತಾರೆ.

ವಿರಾಟ್‌ ಕೊಹ್ಲಿ ಒಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ 5 ರಿಂದ 8 ಕೋಟಿ ರೂ. ಪಡೆಯುತ್ತಿದ್ದಾರೆಂದು ಈ ಹಿಂದೆ ಹಲವು ಬಾರಿ ವರದಿಗಳಾಗಿವೆ. ಇದಕ್ಕೆ ವಿರಾಟ್‌ ಎಂದಿಗೂ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಶುಕ್ರವಾರ ಕೊಹ್ಲಿ 11.45 ಕೋಟಿ ಪಡೆಯುತ್ತಿದ್ದಾರೆಂಬ ವರದಿ ಓದಿದ ಸೆಲೆಬ್ರಿಟಗಳು ಸೇರಿದಂತೆ ಸಾಮಾನ್ಯ ಜನರಿಗೂ ಅಚ್ಚರಿಯಾಗಿತ್ತು. ಆದರೆ, ವಿರಾಟ್‌ ಕೊಹ್ಲಿಯೇ ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

andolanait

Recent Posts

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ: ಅಕ್ರಮ ಪತ್ತೆಗೆ ಎಸ್‌ಐಟಿ ರಚಿಸಿ ಎಂದ ಸಿ.ಟಿ.ರವಿ

ಬೆಳಗಾವಿ: ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತಾಗುತ್ತಿದ್ದು, ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಕ್ರಮ ಪತ್ತೆಗೆ ಎಸ್‌ಐಟಿ ರಚಿಸುವಂತೆ ಎಂಎಲ್‌ಸಿ ಸಿ.ಟಿ.ರವಿ ಆಗ್ರಹಿಸಿದರು. ಇಂದು…

18 mins ago

ಸ್ವಾತಂತ್ರ್ಯ ಚಳುವಳಿಗೆ ವಂದೇ ಮಾತರಂ ಶಕ್ತಿ ತುಂಬಿತು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…

2 hours ago

ಸಿಎಂ ಸಿದ್ದರಾಮಯ್ಯಗೆ ಬಿಗ್‌ಶಾಕ್‌ ಕೊಟ್ಟ ಸುಪ್ರೀಂಕೋರ್ಟ್‌

ನವದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿದೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ…

2 hours ago

ಬೆಳಗಾವಿ ಚಳಿಗಾಲದ ಅಧಿವೇಶನ: ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು. ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ…

2 hours ago

ಮುಂದುವರಿದ ಇಂಡಿಗೋ ಸಮಸ್ಯೆ: ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು 127…

2 hours ago

ನಟಿ ಮೇಲೆ ಅತ್ಯಾಚಾರ ಕೇಸ್‌: ಮಲಯಾಳಂ ಸ್ಟಾರ್‌ ನಟ ದಿಲೀಪ್‌ ಖುಲಾಸೆ

ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…

3 hours ago