ಬೆಂಗಳೂರು : ರಜಿನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಭಾರೀ ಸದ್ದನ್ನು ಮಾಡಿದ್ದಾರೆ. ಜೈಲರ್ ನೋಡಿ ಬಂದಿರುವ ಸಿನಿಪ್ರಿಯರು ಶಿವರಾಜ್‌ಕುಮಾರ್ ಅವರು ಮಾಡಿರುವ ಸಣ್ಣ ಅವಧಿಯ ಪಾತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರ ರಜಿನಿಕಾಂತ್‌ರದ್ದಾಗಿದ್ದರೂ ಗಮನ ಸೆಳೆದಿದ್ದು ಶಿವರಾಜ್‌ಕುಮಾರ್ ಎಂದು ಅಭಿಮಾನಿಗಳು ಟ್ಟೀಟ್ ಮಾಡಿದ್ದು, ಇನ್ನು ಕೆಲವರು ಈ ಚಿತ್ರದಿಂದ ಶಿವರಾಜ್‌ಕುಮಾರ್ ಅವರ ಅಭಿಮಾನಿಗಳಾಗಿರುವುದಾಗಿ ಹೇಳಿಕೊಂಡಿದ್ದಾರೆ.
ನಾನು ಇದುವರೆಗೆ ಶಿವರಾಜ್‌ಕುಮಾರ್ ಅವರ ಯಾವುದೇ ಚಿತ್ರವನ್ನು ನೋಡಿಲ್ಲ, ಆದರೆ, ಜೈಲರ್‌ನಲ್ಲಿ ಅವರು ಕಣ್ಣಿನ ಮೂಲಕ ನೀಡುವ ರಿಯಾಕ್ಷನ್ ನೋಡಿದ ಮೇಲೆ ಇವರೊಳಗಿನ ನಟನ ದೈತ್ಯ ಪ್ರತಿಭೆ ಅರಿವಾಗಿದೆ, ಇವರ ಎಲ್ಲಾ ಸಿನೆಮಾಗಳನ್ನು ನೋಡಬೇಕು ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲವರು ಶಿವರಾಜ್‌ಕುಮಾರ್ ಅವರು ತಮಿಳಿನಲ್ಲಿ ಪೂರ್ಣ ಪ್ರಮಾಣದ ಮಾಸ್ ಸಿನೆಮಾ ಮಾಡಬಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದರೆ, ವೆಟ್ರಿಮಾರನ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸುವುದನ್ನು ನೋಡಬೇಕು ಎಂದು ಇನ್ನೊಬ್ಬರು ಆಸೆ ವ್ಯಕ್ತಪಡಿಸಿದ್ದಾರೆ.
ನೀನು ಗನ್‌ನಿಂದ ಹೆದರಿಸಿರುವುದಕ್ಕಿಂತ ಹೆಚ್ಚಿನ ಜನರನ್ನು ನಾನು ಕಣ್ಣಿಂದಲೇ ಹೆದರಿಸಿದ್ದೀನಿ ಎನ್ನುವ ಶಿವರಾಜ್‌ಕುಮಾರ್ ಅವರ ಡೈಲಾಗ್ ಅನ್ನು ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು ʼನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಇದನ್ನು ಸಾಬೀತು ಪಡಿಸಿ ತೋರಿಸಿದ್ದಾರೆʼ ಎಂದು ಹೇಳಿದ್ದಾರೆ.
ರಜಿನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಜೈಲರ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮಾತ್ರವಲ್ಲದೆ, ಮಲಯಾಳಂನಿಂದ ಮೋಹನ್ ಲಾಲ್, ವಿನಾಯಕನ್, ಹಿಂದಿಯಿಂದ ಜಾಕಿಶ್ರಾಫ್, ತೆಲುಗು ನಟ ಸುನಿಲ್ ಸೇರಿದಂತೆ ಹಲವಾರು ಘಟಾನುಘಟಿ ನಟ-ನಟಿಯರು ನಟಿಸಿದ್ದಾರೆ.
ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…
ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…
ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…
ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ…
ಸುಪ್ರೀಂ ಕೋರ್ಟ್ ಬಾಗಿಲು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತೆರೆದಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಆದರೆ ದೇಶದ ಉತ್ತರದ…
ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತಿಹಾಸದಿಂದ ಪ್ರಸ್ತುತ ಪೊಲೀಸ್ ಕರ್ತವ್ಯದವರೆಗೆ ಸಾರ್... ಎಲ್ಲ…