ಇನ್ಮುಂದೆ ಗೂಗಲ್ ಪೇ ಫೋನ್ ಪೇ ಯಾವುದು ಬೇಡ ಈ ಒಂದು ಉಂಗುರ ಇದ್ದರೆ ಸಾಕು ಆನ್ಲೈನ್ ಪೇಮೆಂಟ್ ಅನ್ನು ಸುಲಭವಾಗಿ ಮಾಡಬಹುದು. ಡಿಜಿಟಲ್ ಪಾವತಿಗಾಗಿಯೇ ಇಂತಹ ವಿಶೇಷವಾದ ಉಂಗುರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ
ಒಂದು ಕಾಲದಲ್ಲಿ ಎಲ್ಲ ರೀತಿಯ ವಹಿವಾಟುಗಳು ಕೂಡ ಕರೆನ್ಸಿ ನೋಟುಗಳ ಮೂಲಕವೇ ನಡೆಯುತ್ತಿದ್ದವು. ಕ್ರಮೇಣ ಇದು ಎಟಿಎಂ ಕಾರ್ಡ್ ಆಗಿ ಬದಲಾಯಿತು ನಂತರ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಆ್ಯಪ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಈ ಆ್ಯಪ್ ಗಳು ಮಾರುಕಟ್ಟೆಗೆ ಬಂದ ನಂತರ ಜನಗಳು ತಮ್ಮ ಕೆಲಸವನ್ನು ಸುಲಭವಾಗಿಸಿಕೊಳ್ಳಲು ಈ ತಂತ್ರಜ್ಞಾನ ಗಳನ್ನು ಬಳಸುತ್ತಿದ್ದಾರೆ. ಇದೀಗ ಅದರ ಮುಂದುವರಿದ ಬೆಳವಣಿಗೆಯಾಗಿ ಸ್ಮಾರ್ಟ್ ರಿಂಗನ್ನು ಬಿಡುಗಡೆ ಮಾಡುವ ಮೂಲಕ ತಂತ್ರಜ್ಞಾನ ಹೊಸ ಪಾವತಿ ವಿಧಾನವನ್ನು ಪರಿಚಯಿಸಿದೆ.
ಸಾಮಾನ್ಯವಾಗಿ ಎಲ್ಲರೂ ಕೂಡ ಕೈಗೆ ಉಂಗುರ ಹಾಕಿಕೊಳ್ಳುತ್ತಾರೆ. ಆದರೆ ಅದೇ ಉಂಗುರ ಇದೀಗ ಸ್ಮಾರ್ಟ್ ಟೂಲ್ ಆಗಿ ಬದಲಾಗಿದೆ. ಕೈಯಲ್ಲಿರುವ ಉಂಗುರದ ಮೂಲಕ ನಗದು ರಹಿತ ಪಾವತಿ ಮಾಡುವ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಇದನ್ನು ಸ್ಮಾರ್ಟ್ ರಿಂಗ್ ಎಂದು ಕರೆಯಲಾಗುತ್ತದೆ. ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹಾಗೂ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಅಥವಾ ಫೋನ್ ಕರೆಗಳ ಅಗತ್ಯವಿಲ್ಲದೆ ಈ ರಿಂಗ್ ನಿಂದ ಪೇಮೆಂಟ್ ಮಾಡಬಹುದು.
ಈ ಸ್ಮಾರ್ಟ್ ರಿಂಗ್ ಅನ್ನು ಹಾಂಕಾಂಗ್ ಮೂಲದ ಟೊಪಿ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಈ ರಿಂಗ್ ಸ್ಮಾರ್ಟ್ ವಯರ್ಲೆಸ್ ಪೇಮೆಂಟ್ ಚಿಪ್ ಗಳನ್ನು ಒಳಗೊಂಡಿದೆ. ಇದು ಮೊಬೈಲ್ ಅಪ್ಲಿಕೇಶನ್ ಜೊತೆಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಫೋನ್ ನಲ್ಲಿರುವ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಬ್ಯಾಂಕ್ ಖಾತೆಗಳನ್ನು ರಿಂಗ್ ಗೆ ಲಿಂಕ್ ಮಾಡಬೇಕು. ಆನಂತರ ಪೇಮೆಂಟ್ ಯಂತ್ರದ ಬಳಿ ಉಂಗುರವನ್ನು ತೋರಿಸಿ ಪಾವತಿ ಮಾಡಬಹುದು.
ಈ ಉಂಗುರವನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ, ಈ ಉಂಗುರದ ತಂತ್ರಜ್ಞಾನವನ್ನು ಆಭರಣದ ಕಂಪನಿಗಳಿಗೆ ನೀಡಿದರೆ, ಚಿನ್ನ ಹಾಗೂ ಬೆಳ್ಳಿಯಿಂದ ಸ್ಮಾರ್ಟ್ ಉಂಗುರವನ್ನು ತಯಾರಿಸಬಹುದು.
ಈ ಸ್ಮಾರ್ಟ್ ರಿಂಗ್ ಈಗಾಗಲೇ ಭಾರತಕ್ಕೂ ಕೂಡ ಲಗ್ಗೆ ಇಟ್ಟಿದೆ. ಸ್ವದೇಶಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಮಾರ್ಟಪ್ 7, ವಯರ್ಲೆಸ್ ಪಾವತಿಗಾಗಿ 7 ರಿಂಗ್ ಎಂಬ ಉಂಗುರವನ್ನು ಬಿಡುಗಡೆ ಮಾಡಿದೆ. ಎನ್ ಪಿಸಿಐ ಸಹಯೋಗದೊಂದಿಗೆ ಭಾರತೀಯ ಬ್ರಾಂಡ್ 7 ಅಭಿವೃದ್ಧಿಪಡಿಸಲಾಗಿದೆ. ಇದನ್ನು ಪ್ರೀಮಿಯಂ ಜಿರ್ಕೋನಿಯ ಸೆರಾಮಿಕ್ಸ್ ನಿಂದ ಅಭಿವೃದ್ಧಿಪಡಿಸಲಾಗಿದೆ.
ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ…
ಮೈಸೂರಿನ ಶ್ರೀರಾಂಪುರ ೨ನೇ ಹಂತದಲ್ಲಿ ನಿವೇಶನನವೊಂದು ಕಳೆದ ೨೬ ವರ್ಷಗಳಿಂದ ಖಾಲಿಬಿದ್ದಿದೆ. ಈ ಖಾಲಿ ನಿವೇಶನದಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು…
ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಸ್ವಾಗತಾರ್ಹ ಸಂಗತಿ. ಆದರೆ ಗ್ರಾಮದ ನೈಸರ್ಗಿಕ ಸಂಪತ್ತಾದ ‘ಬೆಳವಾಡಿ ಕೆರೆ’ಗೆ…
ನವೀನ್ ಡಿಸೋಜ ಜನವರಿಯಲ್ಲಿ ೬೩ ಎನ್‌ಡಿಪಿಎಸ್ ಪ್ರಕರಣಗಳು ದಾಖಲು; ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಮಡಿಕೇರಿ: ಮಾದಕ ವಸ್ತುಗಳ ಮಾರಾಟ…
ಮಂಜು ಕೋಟೆ ಜಕ್ಕಹಳ್ಳಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಜುಗರ; ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರ ಎಚ್.ಡಿ.ಕೋಟೆ: ಗಿರಿಜನ ಮಕ್ಕಳ…
ಪ್ರಶಾಂತ್ ಎಸ್. ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಹಾದಿ ಎನ್.ಎಚ್.ಪಾಳ್ಯ,ಟೋಲ್‌ಗೇಟ್, ಶಿವಪುರ ತಿರುವಿನಲ್ಲಿ ರಿಫ್ಲೆಕ್ಟರ್,ಬ್ಯಾರಿಕೇಡ್ ಅಳವಡಿಕೆ ಅಗತ್ಯ ಮೈಸೂರು:…