ವಿಜ್ಞಾನ ತಂತ್ರಜ್ಞಾನ

ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಉಡಾವಣೆ

ಸ್ಟಾರ್ಟ್ ಅಪ್ ಸಂಸ್ಥೆಯಾದ ಸ್ಕೈರೂಟ್ ಏರೋಸ್ಪೇಸ್‌ನಿಂದ ಅಭಿವೃದ್ಧಿ

ಚೆನ್ನೈ: ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪೆನಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯಾನ ಕೇಂದ್ರದಿಂದ ಬೆಳಿಗ್ಗೆ ೧೧.೩೦ರ ಸುಮಾರಿಗೆ ಉಡಾವಣೆಗೊಂಡಿದೆ.

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೊ) ಮತ್ತು ಹೈದರಾಬಾದ್‌ನ ಅಂತರಿಕ್ಷ ತಾಂತ್ರಿಕ ಕಂಪೆನಿ ಸ್ಕೈರೂಟ್ ಏರೋಸ್ಪೇಸ್ ಮಿಷನ್ ಪ್ರಾರಂಭ ಯಶಸ್ವಿಯಾಗಿದೆ ಎಂದು ಖುಷಿಯಿಂದ ಹೇಳಿಕೊಂಡಿವೆ. ರಾಕೆಟ್ ವ್ಯಾಕ್ ೫ ರ ಹೈಪರ್ಸಾನಿಕ್ ವೇಗದಲ್ಲಿ ೮೯.೫ ಕಿ.ಮೀ. ಅಪೋಜಿಯನ್ನು ಸಾಧಿಸಿತು. ವಿಕ್ರಮ್-ಎಸ್ ೧೫೫ ಸೆಕೆಂಡ್‌ಗಳಲ್ಲಿ ಅಂತರಿಕ್ಷವನ್ನು ತಲುಪಿತು.

ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಮ್ ಸಾರಾಭಾಯ್‌ ಅವರ ಗೌರವಾರ್ಥವಾಗಿ ರಾಕೆಟ್‌ಗೆ ವಿಕ್ರಮ್-ಎಸ್ ಎಂದು ಹೆಸರಿಡಲಾಗಿದೆ. ನಾಲ್ಕು ವರ್ಷ ಹಿಂದೆ ಆರಂಭವಾಗಿದ್ದ ಸ್ಟಾರ್ಟ್ ಅಪ್ ಸ್ಕೈರೂಟ್ ಏರೋಸ್ಪೇಸ್ ಚೊಚ್ಚಲ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲುಂದ ಮೊದಲ ಸೇರ್ಪಡೆಯಾಗುವ ಮೂಲಕ ಇತಿಹಾಸ ಬರೆದಿದೆ.

ಈ ಮಿಷನ್‌ಗೆ ‘ಪ್ರಾರಂಭ’ಎಂದು ಹೆಸರಿಡಲಾಗಿದೆ. ಸ್ಪೇಸ್ ಕಿಡ್ಸ್ ಇಂಡಿಯಾ, ಎನ್-ಸ್ಪೇಸ್ ಟೆಕ್ ಇಂಡಿಯಾ ಮತ್ತು ಅರ್ಮೇನಿಯಾದ ಬಜೂಮ್ಕ್‌ನ ತಲಾ ಒಂದು ಮಾದರಿಯನ್ನು ಈ ರಾಕೆಟ್ ಕೊಂಡೊಯ್ದಿದೆ.

ಇನ್-ಸ್ಪೇಸ್, ಅಂತರಿಕ್ಷ ಇಲಾಖೆಯ ಅಧ್ಯಕ್ಷ ಪವನ್ ಕೆ ಗೋಯೆಂಕ, ಎಲ್ಲಾ ವ್ಯವಸ್ಥೆಗಳು ಯೋಜನೆ ಪ್ರಕಾರವೇ ಕೆಲಸ ಮಾಡಿದೆ. ಸ್ಕೈರೂಟ್ ಮತ್ತು ಇಸ್ರೋದ ಎಲ್ಲಾ ಕೇಂದ್ರಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯ ಅಂತರಿಕ್ಷ ವಲಯದಲ್ಲಿ ಇದು ಹೊಸ ಶಕೆ ಆರಂಭ ಎಂದು ಹೇಳಿದ್ದಾರೆ.

ಉಡಾವಣೆಗೆ ಸಾಕ್ಷಿಯಾದ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತರಿಕ್ಷ ವಲಯದಲ್ಲಿ ಸುಧಾರಣೆ ತಂದು ಅಂತರಿಕ್ಷ ವಲಯದ ಆರಂಭಕ್ಕೆ ಖಾಸಗಿ ಸಂಸ್ಥೆಗಳಿಗೆ ವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು.

ಪ್ರಾರಂಭ್ ಮಿಷನ್ ನವ ಭಾರತವನ್ನು ಸಂಕೇತಿಸುತ್ತದೆ ಎಂದು ಕೈರೂಟ್ ಸಹ ಸಂಸ್ಥಾಪಕ ಪವನ್ ಚಂದನ ಹೇಳಿದ್ದಾರೆ. ಇದು ನಮ್ಮ ಪ್ರಾರಂಭದ ಒಂದು ಸಣ್ಣ ಹೆಜ್ಜೆ, ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲಿದೆ. ಸ್ಕೈರೂಟ್ ತಂಡವನ್ನು ಕೈುಂಲ್ಲಿ ಹಿಡಿದಿದ್ದಕ್ಕಾಗಿ ಅವರು ಇಸ್ರೊ ಮತ್ತು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದರು.

೨೦೧೮ರಲ್ಲಿ ಇಸ್ರೋದ ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನ ಮತ್ತು ನಾಗಾ ಭಾರತ್ ಡಾಕಾ ಅವರು ಸ್ಥಾಪಿಸಿದ ಹೈದರಾಬಾದ್ ಮೂಲದ ಸ್ಟಾರ್ಟ್-ಅಪ್ ಸ್ಕೈರೂಟ್ ಏರೋಸ್ಪೇಸ್, ಇಂಗಾಲದ ಸಂಯೋಜಿತ ರಚನೆಗಳು ಮತ್ತು ೩ಡಿ-ಮುದ್ರಿತ ಘಟಕಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಎರಡು ವರ್ಷಗಳಲ್ಲಿ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಆಲ್-ಕಾರ್ಬನ್ ಫೈಬರ್ ಕೋರ್ ರಚನೆಯನ್ನು ಹೊಂದಿದೆ.

ಪ್ರಾರಂಭ
ಮಿಷ್‌ನ್‌ನ ಹೆಸರು

ಬೆಳಿಗ್ಗೆ ೧೧.೩೦
ರಾಕೆಟ್ ವಿಕ್ರಮ್- ಎಸ್ ಉಡಾವಣೆ

೧೫೫
ಸೆಕೆಂಡ್‌ಗಳಲ್ಲಿ ಅಂತರಿಕ್ಷಕ್ಕೆ ಸೇರ್ಪಡೆ

೮೯.೫
ಕಿ.ಮೀ. ರಾಕೆಟ್ ವ್ಯಾಕ್ ೫ರ ಹೈಪರ್ಸಾನಿಕ್ ವೇಗ

andolana

Share
Published by
andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago